ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಶತಕ ಬಾರಿಸದೇ 1000 ದಿನಗಳು; ಈ ಕೆಟ್ಟ ಮೈಲಿಗಲ್ಲು ತಪ್ಪಿಸಲು ಉಳಿದಿರುವುದು ಎರಡೇ ಅವಕಾಶ!

Virat Kohli will complete 1000 days without century if he fails to score hundred in England ODI series

ವಿರಾಟ್ ಕೊಹ್ಲಿ, ದ ಕಿಂಗ್ ಆಫ್ ಕ್ರಿಕೆಟ್ ಎಂದೇ ಖ್ಯಾತಿಯನ್ನು ಪಡೆದಿರುವ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಓರ್ವರು. ಕ್ರಿಕೆಟ್ ಪ್ರೇಮಿಗಳು ತಮ್ಮನ್ನು ಅತಿ ಕಿರಿಯ ವಯಸ್ಸಿನಲ್ಲಿಯೇ ದಿಗ್ಗಜ ಕ್ರಿಕೆಟಿಗರ ಜತೆ ಹೋಲಿಕೆ ಮಾಡಿ ಚರ್ಚಿಸುವ ಮಟ್ಟಿಗೆ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ್ದಾರೆ. ಅತಿವೇಗವಾಗಿ ಶತಕಗಳ ಮೇಲೆ ಶತಕ, ರನ್ ಮೇಲೆ ರನ್ ಬಾರಿಸುತ್ತಾ ಬಂದಿದ್ದ ವಿರಾಟ್ ಕೊಹ್ಲಿ ಕಳೆದೆರಡು ವರ್ಷಗಳಿಂದ ಅಕ್ಷರಶಃ ಮಂಕಾಗಿದ್ದಾರೆ.

ಐಪಿಎಲ್ ಆಡಿದ್ದು ಪ್ಲಸ್ ಪಾಯಿಂಟ್; ಈ ತಂಡವೇ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ ಮೈಕೆಲ್ ವಾನ್ಐಪಿಎಲ್ ಆಡಿದ್ದು ಪ್ಲಸ್ ಪಾಯಿಂಟ್; ಈ ತಂಡವೇ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ ಮೈಕೆಲ್ ವಾನ್

ಅಂತರರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯೂ ಸೇರಿದಂತೆ ಇಲ್ಲಿಯವರೆಗೂ ಒಟ್ಟು 70 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ತಮ್ಮ ಮುಂದಿನ ಶತಕವನ್ನು ಯಾವಾಗ ಬಾರಿಸಲಿದ್ದಾರೆ ಎಂಬ ಪ್ರಶ್ನೆ ಇದೀಗ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯನ್ನೂ ಕೂಡ ಕಾಡುತ್ತಿದೆ. 70 ಶತಕಗಳನ್ನು ಲೀಲಾಜಾಲವಾಗಿ ಬಾರಿಸಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ 1 ಶತಕ ಬಾರಿಸಲು ಎರಡೂವರೆ ವರ್ಷಗಳಿಂದ ಪರದಾಡುತ್ತಿರುವುದು ಸದ್ಯ ಕೆಲವರಿಗೆ ನೋವಿನ ಸಂಗತಿಯಾಗಿದ್ದರೆ, ಇನ್ನೂ ಕೆಲವರಿಗೆ ಟೀಕೆಯ ಅಂಶವಾಗಿದೆ.

3 ತಿಂಗಳಲ್ಲಿ ನಡೆಯುವ ಕೆಎಲ್ ರಾಹುಲ್ ಮದುವೆಗೆ ನಾನೂ ಹೋಗುತ್ತೇನೆ; ಅಚ್ಚರಿ ಮೂಡಿಸಿದ ಅಥಿಯಾ ಶೆಟ್ಟಿ ಹೇಳಿಕೆ!3 ತಿಂಗಳಲ್ಲಿ ನಡೆಯುವ ಕೆಎಲ್ ರಾಹುಲ್ ಮದುವೆಗೆ ನಾನೂ ಹೋಗುತ್ತೇನೆ; ಅಚ್ಚರಿ ಮೂಡಿಸಿದ ಅಥಿಯಾ ಶೆಟ್ಟಿ ಹೇಳಿಕೆ!

ಸದ್ಯ ವಿರಾಟ್ ಕೊಹ್ಲಿ ತಮ್ಮ 71ನೇ ಶತಕವನ್ನು ಯಾವಾಗ ಬಾರಿಸಲಿದ್ದಾರೆ ಎಂಬ ಪ್ರಶ್ನೆಯ ಜತೆಗೆ ಕೊಹ್ಲಿ ಶತಕ ಬಾರಿಸದೇ 1000 ದಿನಗಳು ಕಳೆಯಲಿವೆ ಎಂಬ ಆತಂಕವೂ ಕೂಡ ಅವರ ಅಭಿಮಾನಿಗಳನ್ನು ಕಾಡತೊಡಗಿದೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಶತಕ ಬಾರಿಸದೇ 1000 ದಿನಗಳು ಯಾವಾಗ ಕಳೆಯಲಿವೆ ಮತ್ತು ಈ ಕೆಟ್ಟ ಮೈಲಿಗಲ್ಲನ್ನು ತಪ್ಪಿಸಬೇಕೆಂದರೆ ವಿರಾಟ್ ಕೊಹ್ಲಿಗೆ ಉಳಿದಿರುವ ಆ 2 ಅವಕಾಶಗಳು ಯಾವುವು ಎಂಬುದರ ಕುರಿತಾದ ಮಾಹಿತಿ ಮುಂದೆ ಇದೆ ಓದಿ.

ಶತಕವಿಲ್ಲದೇ ಕಳೆಯಲಿದೆ 1000 ದಿನಗಳು

ಶತಕವಿಲ್ಲದೇ ಕಳೆಯಲಿದೆ 1000 ದಿನಗಳು

ಇನ್ನು ಕಳೆದ ಎರಡೂವರೆ ವರ್ಷಗಳಿಂದ ಶತಕ ಬಾರಿಸದೇ ವಿಫಲರಾಗಿರುವ ವಿರಾಟ್ ಕೊಹ್ಲಿ ನಿನ್ನೆಗೆ ( ಜುಲೈ 13 ) ತಮ್ಮ ಅಂತಿಮ ಅಂತರರಾಷ್ಟ್ರೀಯ ಶತಕವನ್ನು ಬಾರಿಸಿ 963 ದಿನಗಳನ್ನು ಪೂರೈಸಿದ್ದಾರೆ. 963 ದಿನಗಳು ಕಳೆದರೂ ಸಹ ವಿರಾಟ್ ಕೊಹ್ಲಿ ಬ್ಯಾಟ್ ನಿಂದ 71ನೇ ಶತಕ ಮಾತ್ರ ಹರಿದುಬಂದಿಲ್ಲ. ಈ ಮೂಲಕ ವಿರಾಟ್ ಕೊಹ್ಲಿ ಮುಂಬರುವ ಆಗಸ್ಟ್ 19ನೇ ತಾರೀಖಿನವರೆಗೂ ಯಾವುದೇ ಪಂದ್ಯದಲ್ಲಿಯೂ ಶತಕ ಬಾರಿಸದೇ ಇದ್ದರೆ 1000 ಶತಕ ರಹಿತ ದಿನಗಳನ್ನು ಕಳೆಯಲಿದ್ದಾರೆ. ಹೌದು, ಆಗಸ್ಟ್ 19ಕ್ಕೆ ವಿರಾಟ್ ಕೊಹ್ಲಿ ಬಾರಿಸಿದ 70ನೇ ಶತಕಕ್ಕೆ 1000 ದಿನಗಳಾಗಲಿದ್ದು, ಕೊಹ್ಲಿ ಕೆಟ್ಟ ಮೈಲಿಗಲ್ಲನ್ನು ತಲುಪಲಿದ್ದಾರೆ.

ಈ ಕೆಟ್ಟ ದಾಖಲೆ ತಪ್ಪಿಸಲು ಉಳಿದಿರುವುದು ಎರಡೇ ಅವಕಾಶ

ಈ ಕೆಟ್ಟ ದಾಖಲೆ ತಪ್ಪಿಸಲು ಉಳಿದಿರುವುದು ಎರಡೇ ಅವಕಾಶ

ಇನ್ನು ವಿರಾಟ್ ಕೊಹ್ಲಿ ಈ ಕೆಟ್ಟ ಮೈಲಿಗಲ್ಲನ್ನು ತಪ್ಪಿಸಿಕೊಳ್ಳಲು ಇರುವುದು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯ ಹಾಗೂ ತೃತೀಯ ಪಂದ್ಯಗಳ ಅವಕಾಶ ಮಾತ್ರ. ಈ ಎರಡೂ ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಶತಕ ಬಾರಿಸದೇ ಇದ್ದರೆ ಶತಕ ರಹಿತ 1000 ದಿನಗಳನ್ನು ಪೂರೈಸುವುದು ಖಚಿತ. ಏಕೆಂದರೆ ಮುಂಬರುವ ವೆಸ್ಟ್ಇಂಡೀಸ್ ವಿರುದ್ಧದ ಸರಣಿಗಳಲ್ಲಿ ವಿರಾಟ್ ಕೊಹ್ಲಿ ಆಡದೇ ಇರುವುದರಿಂದ 1000 ದಿನಗಳೊಳಗೆ ಶತಕ ಬಾರಿಸುವುದು ಅಸಾಧ್ಯ.

England ವಿರುದ್ಧ ಹೀನಾಯವಾಗಿ ಸೋತ್ಮೇಲೆ ಟೀಂ‌ ಇಂಡಿಯಾಗೇ ಬಿಗ್ ಶಾಕ್ *Cricket | OneIndia Kannada
4114 ದಿನಗಳಲ್ಲಿ 70 ಶತಕ ಬಾರಿಸಿದ್ದ ಕೊಹ್ಲಿ

4114 ದಿನಗಳಲ್ಲಿ 70 ಶತಕ ಬಾರಿಸಿದ್ದ ಕೊಹ್ಲಿ

ಹೀಗೆ ಒಂದೇ ಒಂದು ಶತಕ ಬಾರಿಸಲು ಇಷ್ಟು ದಿನಗಳ ಕಾಲ ಪರದಾಡುತ್ತಿರುವ ವಿರಾಟ್ ಕೊಹ್ಲಿ ತಮ್ಮ ಮೊದಲ 70 ಶತಕಗಳನ್ನು 4114 ದಿನಗಳಲ್ಲಿ ಬಾರಿಸಿ ಅಬ್ಬರಿಸಿದ್ದರು. 2019ರ ನವೆಂಬರ್ 23ರಂದು ಬಾಂಗ್ಲಾದೇಶ ವಿರುದ್ಧ ಕೋಲ್ಕತಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತಿಮವಾಗಿ ತಮ್ಮ ಅಂತರರಾಷ್ಟ್ರೀಯ ಶತಕವನ್ನು ಬಾರಿಸಿದ್ದರು.

Story first published: Friday, July 15, 2022, 10:07 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X