ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವುದು ಪಕ್ಕಾನ?: ಮಹತ್ವದ ಪ್ರತಿಕ್ರಿಯೆ ನೀಡಿದ ಬಿಸಿಸಿಐ

Virat Kohli will continue as skipper for all formats said BCCI

ಮುಂಬೈ, ಸೆಪ್ಟೆಂಬರ್ 13: ಒಂದೆಡೆ ಭಾರತೀಯ ಕ್ರಿಕೆಟ್ ಆಟಗಾರರು ಐಪಿಎಲ್, ಟಿ20 ವಿಶ್ವಕಪ್‌ನತ್ತ ಚಿತ್ತ ನೆಟ್ಟಿದ್ದರೆ ಸೋಮವಾರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಶ್ಚರ್ಯಪಡುವಂತಾ ಸುದ್ದಿಯೊಂದು ಜೋರಾಗಿ ಸದ್ದು ಮಾಡಿದೆ. ಟಿ20 ವಿಶ್ವಕಪ್‌ ಬಳಿಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಸೀಮಿತ ಓವರ್‌ಗಳ ಮಾದರಿಯ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯುವುದು ಖಂಡಿತಾ ಎಂದು ವರದಿಯಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದೆ.

ಈ ಬೆಳವಣಿಗೆಯ ಬಗ್ಗೆ ಈಗ ಸ್ವತಃ ಬಿಸಿಸಿಐ ಮಹತ್ವದ ಹೇಳಿಕೆಯನ್ನು ನೀಡಿದೆ. ಬಿಸಿಸಿಐ ಖಜಾಂಚಿ ಅರುಣ್ ದುಮಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಬಿಸಿಸಿಐ ನಿಲುವಿನ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗೊಂದಲಕ್ಕೂ ಒಂದು ಹಂತಕ್ಕೆ ತೆರೆ ಎಳೆದಂತಾಗಿದೆ.

ನಾಯಕತ್ವ ಬದಲಾವಣೆ ವರದಿ ತಿರಸ್ಕರಿಸಿದ ಬಿಸಿಸಿಐ

ನಾಯಕತ್ವ ಬದಲಾವಣೆ ವರದಿ ತಿರಸ್ಕರಿಸಿದ ಬಿಸಿಸಿಐ

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವಿಫಲವಾದರೆ ಭಾರತೀಯ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ನಾಯಕತ್ವ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿಯಲಿದ್ದಾರೆ ಹಾಗೂ ರೋಹಿತ್ ಶರ್ಮಾ ಸೀಮಿತ ಓವರ್‌ಗಳ ತಂಡದ ನಾಯಕನಾಗಲಿದ್ದಾರೆ ಎಂಬ ವರದಿಯನ್ನು ಬಿಸಿಸಿಐನ ಖಜಾಂಚಿ ಅರುಣ್ ದುಮಲ್ ನೇರವಾಗಿ ತಿರಸ್ಕರಿಸಿದ್ದಾರೆ. "ಇದು ಆಧಾರ ರಹಿತ ವರದಿ. ಅಂಥಾ ಯಾವುದೇ ಚರ್ಚೆಗಳು ಕೂಡ ನಡೆದಿಲ್ಲ. ಇದು ಕೇವಲ ನೀವು(ಮಾಧ್ಯಮಗಳು) ಚರ್ಚಿಸುತ್ತಿರುವುದು ಮಾತ್ರ. ಈ ರೀತಿ ನಾಯಕತ್ವ ವಿಭಜನೆಯ ವಿಚಾರದ ಬಗ್ಗೆ ಬಿಸಿಸಿಐ ಚರ್ಚೆಯನ್ನು ನಡೆಸಿಲ್ಲ" ಎಂದು ವಿವರಿಸಿದ್ದಾರೆ.

ಕೊಹ್ಲಿ ನಾಯಕತ್ವ ತ್ಯಜಿಸುವ ಬಗ್ಗೆ ವರದಿ

ಕೊಹ್ಲಿ ನಾಯಕತ್ವ ತ್ಯಜಿಸುವ ಬಗ್ಗೆ ವರದಿ

ಇದಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ. ಆದರೆ ತಂಡದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳನ್ನು ಹೊಂದಿದ್ದ ಹೊರತಾಗಿಯೂ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದ ಕಾರಣದಿಂದಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕತ್ವದ ಜವಾಬ್ಧಾರಿ ರೋಹಿತ್ ಶರ್ಮಾ ಹೆಗಲಿಗೆ ಬೀಳುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಮೂಲಗಳು ನೀಡಿದ ಮಾಹಿತಿಯಂತೆ ಕಳೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೋಲು ಕಂಡ ನಂತರ ಬಿಸಿಸಿಐನ ಪ್ರಮುಖರು ನಾಯಕತ್ವದ ಬದಲಾವಣೆಯ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ ಎಂದಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ವೇಗಿಗಳಿಗೆ ಬೆಂಬಲ ನೀಡುವ ಪಿಚ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಿದ್ದರು. ತಂಡದ ನಾಯಕನ ಈ ರೀತಿ ಆಟಗಾರರ ಆಯ್ಕೆಯ ಬಗ್ಗೆ ಬಿಸಿಸಿಐ ಸಂತಸಗೊಂಡಿಲ್ಲ ಎಂದು ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ನಾಯಕತ್ವ ಬದಲಾವಣೆ ಚರ್ಚೆ ಹೊಸದಲ್ಲ

ನಾಯಕತ್ವ ಬದಲಾವಣೆ ಚರ್ಚೆ ಹೊಸದಲ್ಲ

ಟೀಮ್ ಇಂಡಿಯಾದ ನಾಯಕತ್ವದಲ್ಲಿ ಬದಲಾವಣೆ ಮಾಡಬೇಕು ಎಂಬ ಚರ್ಚೆ ಸಾಕಷ್ಟು ಸಮಯಗಳಿಂದ ನಡೆಯುತ್ತಿದೆ. ಅದರಲ್ಲೂ ಐಪಿಎಲ್‌ನಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಸಾಧಿಸಿದ ಅದ್ಭುತವಾದ ಯಶಸ್ಸು ಹಾಗೂ ವಿರಾಟ್ ಕೊಹ್ಲಿ ಅನುಭವಿಸಿದ ಹಿನ್ನಡೆಯಿಂದಾಗಿ ಈ ಚರ್ಚೆ ಮತ್ತಷ್ಟು ಹೆಚ್ಚಾಯಿತು. ಅದರಲ್ಲೂ 2020ರ ಆವೃತ್ತಿಯಲ್ಲಿ ಐದನೇ ಬಾರಿಗೆ ನಾಯಕನಾಗಿ ಟ್ರೋಫಿಯನ್ನು ರೋಹಿತ್ ಶರ್ಮಾ ಎತ್ತಿ ಹಿಡಿದ ಬಳಿಕ ಇದು ಮತ್ತಷ್ಟು ಹೆಚ್ಚಾಗಿತ್ತು.

ಮಹತ್ವದ ಘಟ್ಟಗಳಲ್ಲಿ ನಾಯಕನಾಗಿ ಕೊಹ್ಲಿ ವಿಫಲ

ಮಹತ್ವದ ಘಟ್ಟಗಳಲ್ಲಿ ನಾಯಕನಾಗಿ ಕೊಹ್ಲಿ ವಿಫಲ

ಇನ್ನು ಈ ಚರ್ಚೆ ಜೋರಾಗಲು ನಾಯಕನಾಗಿ ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಯ ಮಹತ್ವದ ಘಟ್ಟಗಳಲ್ಲಿ ವಿಫಲವಾಗಿದ್ದು ಕೂಡ ಕಾರಣವಾಗಿದೆ. ವಿರಾಟ್ ಕೊಹ್ಲಿ ನಾಯಕನಾದ ಬಳಿಕ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಯಶಸ್ಸು ಸಾಧಿಸಿತಾದರೂ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿರುವುದು ಕೊಹ್ಲಿ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ತೀರಾ ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಶರಣಾಗಿದ್ದರೆ ಅದಕ್ಕೂ ಮುನ್ನ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಶರಣಾಗಿತ್ತು. ಅದಕ್ಕೂ ಮುನ್ನ 2017ರಲ್ಲಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕೂಡ ಭಾರತಕ್ಕೆ ಗೆಲುವು ಸಾಧ್ಯವಾಗಿರಲಿಲ್ಲ.

Story first published: Monday, September 13, 2021, 14:24 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X