ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ 2 ಶತಕಗಳು ಈ ಅನುಭವಿ ಆಟಗಾರನಿಂದ ಬರಲಿದೆ: ಆಕಾಶ್ ಚೋಪ್ರ

Virat Kohli will score at least 2 centuries in Border Gavaskar series says Aakash Chopra

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೆಂದರೆ ಯಾವಾಗಲೂ ಅತ್ಯಂತ ಹೆಚ್ಚು ಕುತೂಹಲ ಕೆರಳಿಸುವುದರಲ್ಲಿ ಅನುಮಾನವಿಲ್ಲ. ಈ ಬಾರಿ ಕೂಡ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೇಲೆ ಅಂಥಾದ್ದೇ ಕುತೂಹಲ ಕೆರಳುವಂತೆ ಮಾಡಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರ ಭಾರತ ತಂಡದ ಅನುಭವಿ ಆಟಗಾರನ ಬಗ್ಗೆ ವಿಶೇಷ ಮಾತನಾಡಿದ್ದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರನಿಯಲ್ಲಿ ಈ ಬಾರಿ ಕೂಡ ಆತ ರನ್ ಮಳೆ ಹರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಯಾವಾಗಲೂ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಈ ಪ್ರದರ್ಶನವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದು ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಯಾವಾಗಲೂ ಭಿನ್ನ ಅವತಾರವನ್ನು ತಾಳುತ್ತಿದ್ದು ಈ ಬಾರಿಯೂ ಕೊಹ್ಲಿ ಕನಿಷ್ಠ ಎರಡು ಶತಕ ಸಿಡಿಸಲಿದ್ದಾರೆ ಎಂದಿದ್ದಾರೆ.

Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್‌ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾInd Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್‌ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಉತ್ತಮವಾಗಿ ರನ್‌ಗಳಿಸಬೇಕಾದರೆ ಕೊಹ್ಲಿಯ ಬ್ಯಾಟ್‌ನಿಂದ ರನ್ ಹರಿದುಬರಲೇಬೇಕಿದೆ ಎಂದಿದ್ದಾರೆ. "ಇದು ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ನಾವು ಇದರಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ವಿರಾಟ್ ಕೊಹ್ಲಿ ರನ್ ಗಳಿಸಲೇಬೇಕು. ಇನ್ನು ಆಸ್ಟ್ರೇಲಿಯಾ ವಿರುದ್ಧ ಯಾವಾ ಆಡುವಾಗಲೂ ವಿರಾಟ್ ಕೊಹ್ಲಿ ಭಿನ್ನ ಅವತಾರವನ್ನು ತಾಳುತ್ತಾರೆ" ಎಂದಿದ್ದಾರೆ ಆಕಾಶ್ ಚೋಪ್ರ.

ಗೆದ್ದ ಜಯ್ ಶಾ ಹಠ, ಪಾಕ್‌ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರಗೆದ್ದ ಜಯ್ ಶಾ ಹಠ, ಪಾಕ್‌ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ

"ಆಸ್ಟ್ರೇಲಿಯಾ ವಿರುದ್ಧ ಆಡುವಾಗ ವಿರಾಟ್ ಕೊಹ್ಲಿ ತನ್ನ ಭಿನ್ನ ಅವತಾರವನ್ನು ನಿಧಾನವಾಗಿ ತಾಳುತ್ತಾರೆ. ಅವರ ಅತ್ಯುತ್ತಮ ಪ್ರದರ್ಶನ ಯಾವಾಗಲೂ ಈ ತಂಡದ ವಿರುದ್ಧವೇ ಬರುತ್ತದೆ. ಈ ಬಾರಿ ಅವರಿಂದ ಮತ್ತೊಮ್ಮೆ ಸಾಕಷ್ಟು ತನ್ ಹರಿದುಬರುವ ನಿರೀಕ್ಷೆಗಳು ಇದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ 20 ಟೆಸ್ಟ್‌ಗಳಲ್ಲಿ 48.05 ಸರಾಸರಿಯಲ್ಲಿ 1682 ರನ್ ಗಳಿಸಿದ್ದಾರೆ. ಆದರೆ ಭಾರತದಲ್ಲಿ ಆಡಿದ ಪಂದ್ಯಗಳಲ್ಲಿ ಕೊಹ್ಲಿ ಪ್ರದರ್ಶನ ವಿಶೇಷವಾಗಿಲ್ಲ. ಭಾರತದಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ 33.00 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ವಿರಾಟ್ ಕೊಹ್ಲಿ 330 ರನ್‌ಗಳನ್ನು ಗಳಿಸಿದ್ದಾರೆ.

Story first published: Sunday, February 5, 2023, 17:37 [IST]
Other articles published on Feb 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X