ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಒಳಗೇ ಮುಂಬೈ ಗುಂಪಿದೆ, ಕೊಹ್ಲಿ ಆದಷ್ಟು ಬೇಗ ತಂಡವನ್ನೂ ತ್ಯಜಿಸಲಿದ್ದಾರೆ: ಮಾಜಿ ಕ್ರಿಕೆಟಿಗ

Virat Kohli will soon retire from playing T20 internationals for India says Mushtaq Ahmed

2021ರ ಸಾಲಿನಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ತುಂಬಾ ದೊಡ್ಡ ಬದಲಾವಣೆಗಳು ಆಗುತ್ತಿವೆ. ಅದರಲ್ಲಿಯೂ ವಿರಾಟ್ ಕೊಹ್ಲಿ ವಿಚಾರವಾಗಿ ಈ ವರ್ಷ ಯಾರೂ ಊಹಿಸಲಾಗದ ರೀತಿಯ ವಿದ್ಯಮಾನಗಳು ಜರುಗಿವೆ. ಕೇವಲ ಟೀಮ್ ಇಂಡಿಯಾ ಮಾತ್ರವಲ್ಲದೆ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೂ ಕೂಡ ಇದೇ ವರ್ಷ ದೊಡ್ಡ ಮಟ್ಟದ ಬದಲಾವಣೆಗಳು ನಡೆದಿವೆ.

ಟಿ20 ವಿಶ್ವಕಪ್: 5 ವರ್ಷಗಳಿಂದ ಮುರಿಯಲಾಗದಿದ್ದ ಅತಿಹೆಚ್ಚು ವೀಕ್ಷಣೆಯ ದಾಖಲೆ ಮುರಿದಿದೆ ಈ ಒಂದು ಪಂದ್ಯಟಿ20 ವಿಶ್ವಕಪ್: 5 ವರ್ಷಗಳಿಂದ ಮುರಿಯಲಾಗದಿದ್ದ ಅತಿಹೆಚ್ಚು ವೀಕ್ಷಣೆಯ ದಾಖಲೆ ಮುರಿದಿದೆ ಈ ಒಂದು ಪಂದ್ಯ

ಹೌದು, ಯುಎಇಯಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಈ ಬಾರಿಯ ಟೂರ್ನಿ ಮುಗಿದ ನಂತರ ತ್ಯಜಿಸಲಿದ್ದೇನೆ ಮತ್ತು ಓರ್ವ ಆಟಗಾರನಾಗಿ ತಂಡದಲ್ಲಿ ಮುಂದುವರಿಯಲಿದ್ದೇನೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತ್ಯಜಿಸುವ ನಿರ್ಣಯವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುವ ನಿರ್ಣಯವನ್ನು ಸಹ ವಿರಾಟ್ ಕೊಹ್ಲಿ ತೆಗೆದುಕೊಂಡಿದ್ದರು.

ಕೊಹ್ಲಿ-ರವಿಶಾಸ್ತ್ರಿ ಕಾಂಬಿನೇಷನ್‌ನಲ್ಲಿ ಟೀಮ್ ಇಂಡಿಯಾ ಮಾಡಿರುವ ಈ ಸಾಧನೆಗಳನ್ನು ಮರೆಯೋಕಾಗಲ್ಲಕೊಹ್ಲಿ-ರವಿಶಾಸ್ತ್ರಿ ಕಾಂಬಿನೇಷನ್‌ನಲ್ಲಿ ಟೀಮ್ ಇಂಡಿಯಾ ಮಾಡಿರುವ ಈ ಸಾಧನೆಗಳನ್ನು ಮರೆಯೋಕಾಗಲ್ಲ

ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳತ್ತ ಹೆಚ್ಚಿನ ಗಮನ ಹರಿಸಲು ಹಾಗೂ ತನ್ನ ಪ್ರದರ್ಶನದ ಕುರಿತು ಹೆಚ್ಚು ಒತ್ತನ್ನು ನೀಡಲು ಈ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಿರುವುದಾಗಿ ವಿರಾಟ್ ಕೊಹ್ಲಿ ಕಾರಣವನ್ನು ಸಹ ನೀಡಿದ್ದರು. ಹೌದು, ಎಲ್ಲಾ ಕ್ರಿಕೆಟ್ ಮಾದರಿಯಲ್ಲಿಯೂ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು, ಹೀಗಾಗಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ವಿರಾಟ್ ಕೊಹ್ಲಿ ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ ವಿರಾಟ್ ಕೊಹ್ಲಿ ತೆಗೆದುಕೊಂಡಿರುವ ಈ ರೀತಿಯ ನಿರ್ಧಾರಕ್ಕೆ ಬೇರೆಯದ್ದೇ ಕಾರಣಗಳಿವೆ ಎಂಬ ಮಾತುಗಳು ಆಗಿಂದಾಗ್ಗೆ ಕೇಳಿಬರುತ್ತಿವೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುಷ್ತಾಕ್ ಅಹ್ಮದ್ ಕೂಡ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿರುವುದಕ್ಕೆ ಗುಂಪುಗಾರಿಕೆ ಕಾರಣ ಎಂಬ ಹೇಳಿಕೆಗಳನ್ನು ಈ ಕೆಳಕಂಡಂತೆ ನೀಡಿದ್ದಾರೆ.

ಟೀಮ್ ಇಂಡಿಯಾದಲ್ಲಿ 2 ಗುಂಪುಗಳಿವೆ

ಟೀಮ್ ಇಂಡಿಯಾದಲ್ಲಿ 2 ಗುಂಪುಗಳಿವೆ

ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ ಟ್ವೆಂಟಿ ನಾಯಕತ್ವವನ್ನು ತ್ಯಜಿಸುವುದರ ಕುರಿತು ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುಸ್ತಾಕ್ ಅಹ್ಮದ್ ಟೀಮ್ ಇಂಡಿಯಾ ಒಳಗೆ 2 ಪ್ರತ್ಯೇಕ ಗುಂಪುಗಳಿವೆ ಎಂದಿದ್ದಾರೆ. "ಓರ್ವ ಯಶಸ್ವಿ ನಾಯಕ ಇದ್ದಕ್ಕಿದ್ದಂತೆ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಕೈಗೊಂಡರೆ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂದರ್ಥ. ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಮುಂಬೈ ಹಾಗೂ ಡೆಲ್ಲಿ ಎಂಬ 2 ಪ್ರತ್ಯೇಕ ಗುಂಪುಗಳೇ ನಿರ್ಮಾಣವಾಗಿವೆ ಹಾಗೂ ಈ ಗುಂಪುಗಾರಿಕೆಯಿಂದಲೇ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದ್ದಾರೆ" ಎಂದು ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.

ಆದಷ್ಟು ಬೇಗ ಕೊಹ್ಲಿ ಭಾರತ ಅಂತರರಾಷ್ಟ್ರೀಯ ಟಿ ಟ್ವೆಂಟಿ ತಂಡವನ್ನು ತ್ಯಜಿಸಲಿದ್ದಾರೆ

ಆದಷ್ಟು ಬೇಗ ಕೊಹ್ಲಿ ಭಾರತ ಅಂತರರಾಷ್ಟ್ರೀಯ ಟಿ ಟ್ವೆಂಟಿ ತಂಡವನ್ನು ತ್ಯಜಿಸಲಿದ್ದಾರೆ

ಇನ್ನೂ ಮುಂದುವರಿದು ಮಾತನಾಡಿರುವ ಮುಷ್ತಾಕ್ ಅಹ್ಮದ್ ವಿರಾಟ್ ಕೊಹ್ಲಿ ಅತಿ ಶೀಘ್ರದಲ್ಲಿಯೇ ಭಾರತ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ವಿದಾಯವನ್ನು ಹೇಳಲಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂದುವರಿಯಲಿದ್ದಾರೆ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಟೂರ್ನಿಯಿಂದಲೇ ಟೀಮ್ ಇಂಡಿಯಾ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಮುಗ್ಗರಿಸಿತು

ಐಪಿಎಲ್ ಟೂರ್ನಿಯಿಂದಲೇ ಟೀಮ್ ಇಂಡಿಯಾ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಮುಗ್ಗರಿಸಿತು

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಿದ ನಂತರ ಯಾವುದೇ ವಿರಾಮವಿಲ್ಲದೇ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಭಾಗವಹಿಸಿದ್ದು ಟೀಮ್ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು ಎಂದು ಮುಷ್ತಾಕ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ. ಸತತವಾಗಿ ಬಯೋ ಬಬಲ್ ಒಳಗಡೆ ಇದ್ದ ಟೀಮ್ ಇಂಡಿಯಾ ಆಟಗಾರರಿಗೆ ಸರಿಯಾದ ವಿಶ್ರಾಂತಿ ಸಿಗದೇ ನೀರಸ ಪ್ರದರ್ಶನ ನೀಡಿದರು ಎಂದು ಮುಷ್ತಾಕ್ ಅಹ್ಮದ್ ತಿಳಿಸಿದ್ದಾರೆ.


David Warner ಹೊಡೆದ 6 ಈಗ ಎಲ್ಲೆಡೆ ವೈರಲ್ | Oneindia Kannada

Story first published: Thursday, November 11, 2021, 15:55 [IST]
Other articles published on Nov 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X