ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರನ್ ಮಷಿನ್ ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಒಡಿಐ ಕ್ರಿಕೆಟರ್ ಗೌರವ

Virat Kohli Wins the ICC Men’s ODI Cricketer of the Decade

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ದಶಕದ ಏಕದಿನ ಕ್ರಿಕೆಟರ್ ಆಗಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಸರಿಸಲ್ಪಟ್ಟಿದ್ದಾರೆ. ಪ್ರಸ್ತುತ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿಗೆ ಐಸಿಸಿ ಗೌರವ ಲಭಿಸಿದೆ.

ಭಾರತ vs ಆಸ್ಟ್ರೇಲಿಯಾ, ಟೆಸ್ಟ್: ಭಾರತಕ್ಕೆ ಮತ್ತೆ ಗಾಯದ ಭೀತಿಭಾರತ vs ಆಸ್ಟ್ರೇಲಿಯಾ, ಟೆಸ್ಟ್: ಭಾರತಕ್ಕೆ ಮತ್ತೆ ಗಾಯದ ಭೀತಿ

ಸದ್ಯ ಆಸ್ಟ್ರೇಲಿಯಾ ಪ್ರವಾಸದ ಮಧ್ಯದಿಂದ ಪಿತೃತ್ವ ರಜೆ ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಭಾರತದಲ್ಲಿದ್ದಾರೆ. ಜನವರಿಯಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದ ಬಳಿಕ ಕೊಹ್ಲಿ ರಜೆ ಪಡೆದುಕೊಂಡಿದ್ದಾರೆ.

ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!ಐಸಿಸಿ ಟಿ20 ದಶಕದ ತಂಡದಲ್ಲಿ 4 ಭಾರತೀಯರು, 4 ಎಂಐ ಆಟಗಾರರು!

ಕೊಹ್ಲಿ ದಶಕದ ಏಕದಿನ ಕ್ರಿಕೆಟರ್ ಆಗಿ ಹೆಸರಿಸಲ್ಪಟ್ಟಿರುವುದನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ. 'ಐಸಿಸಿ ಪ್ರಶಸ್ತಿಗಳ ಸಮಯದಲ್ಲಿ ಏಕದಿನದಲ್ಲಿ 10,000 ರನ್ ಪೂರೈಸಿದ್ದ ಒಬ್ಬನೇ ಆಟಗಾರ, (10 ವರ್ಷಗಳ ಅವಧಿಯಲ್ಲಿ) 39 ಶತಕಗಳು, 48 ಅರ್ಥ ಶತಕಗಳು, 61.83 ಸರಾಸರಿ, 112 ಕ್ಯಾಚ್‌ಗಳು ಕೊಹ್ಲಿ ಹೆಸರಿನಲ್ಲಿದೆ' ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳಲಾಗಿದೆ.

242 ಏಕದಿನ ಇನ್ನಿಂಗ್ಸ್‌ಗಳನ್ನಾಡಿರುವ ವಿರಾಟ್ 59.31ರ ಸರಾಸರಿಯಲ್ಲಿ, 93.25 ಸ್ಟ್ರೈಕ್‌ ರೇಟ್‌ನಲ್ಲಿ 12040 ರನ್ ಬಾರಿಸಿದ್ದಾರೆ. ಇದರಲ್ಲಿ 43 ಶತಕಗಳು ಮತ್ತು 60 ಅರ್ಧ ಶತಕಗಳು ಸೇರಿವೆ. ಏಕದಿನದಲ್ಲಿ ಕೊಹ್ಲಿ ಬಾರಿಸಿರುವ ಅತ್ಯಧಿಕ ವೈಯಕ್ತಿಕ ರನ್ ಅಂದರೆ 183. ಕೊಹ್ಲಿಗೀಗ 32ರ ಹರೆಯ.

Story first published: Tuesday, December 29, 2020, 10:05 [IST]
Other articles published on Dec 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X