ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಮ್ಮ ಜೊತೆ ಆಡಿದ್ದು ತುಂಬಾ ಖುಷಿ ನೀಡಿದೆ: ರಾಬಿನ್ ಉತ್ತಪ್ಪಗೆ ವಿರಾಟ್ ಕೊಹ್ಲಿ ಸಂದೇಶ

ಭಾರತದ ಕ್ರಿಕೆಟ್ ತಾರೆ ರಾಬಿನ್ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಬುಧವಾರ (ಸೆಪ್ಟೆಂಬರ್ 14) ನಿವೃತ್ತಿ ಘೋಷಿಸಿದ್ದಾರೆ. 2007ರಲ್ಲಿ ಭಾರತ ಟಿ20 ವಿಶ್ವಕಪ್‌ ತಂಡದ ಸದಸ್ಯರಾಗಿದ್ದ ರಾಬಿನ್ ಉತ್ತಪ್ಪ, ಕಳೆದ ಐಪಿಎಲ್‌ ಸೀಸನ್‌ನಲ್ಲಿ ಸಿಎಸ್‌ಕೆ ಪರವಾಗಿ ಆಡಿದ್ದರು.

ರಾಬಿನ್ ಉತ್ತಪ್ಪ ನಿವೃತ್ತಿ ಘೋಷಿಸುತ್ತಿದ್ದಂತೆ ಹಲವು ಕ್ರಿಕೆಟಿಗರು, ಅಭಿಮಾನಿಗಳು ಅವರ ಮುಂದಿನ ಜೀವನಕ್ಕೆ ಶುಭಾಶಯ ಹೇಳಿದ್ದಾರೆ. ರಾಬಿನ್ ಉತ್ತಪ್ಪ ನಿವೃತ್ತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ಹೃದಯಪೂರ್ವಕ ಸಂದೇಶ ನೀಡಿದ್ದಾರೆ.

'ಇಡೀ ದೇಶವೇ ನಿಮ್ಮ ಆಟ ಕಳೆದುಕೊಳ್ಳುತ್ತಿದೆ': ಉತ್ತಪ್ಪ ನಿವೃತ್ತಿಗೆ ರೈನಾ ಸೇರಿದಂತೆ ಹಲವರ ಅಭಿನಂದನೆ'ಇಡೀ ದೇಶವೇ ನಿಮ್ಮ ಆಟ ಕಳೆದುಕೊಳ್ಳುತ್ತಿದೆ': ಉತ್ತಪ್ಪ ನಿವೃತ್ತಿಗೆ ರೈನಾ ಸೇರಿದಂತೆ ಹಲವರ ಅಭಿನಂದನೆ

ರಾಬಿನ್‌ ಉತ್ತಪ್ಪ ಮುಂದಿನ ಜೀವನ ಖುಷಿಯಾಗಿರಲಿ ಎಂದು ಹಾರೈಸಿರುವ ವಿರಾಟ್ ಕೊಹ್ಲಿ, ನಿಮ್ಮೊಂದಿಗೆ ಆಡುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ. 2002ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಬಿನ್ ಉತ್ತಪ್ಪ 20 ವರ್ಷಗಳ ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

Virat Kohli Write Heartfelt Message Following His Former Teammates Robin Uthappa Retirement

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ರಾಬಿನ್ ಉತ್ತಪ್ಪ, ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳಲ್ಲಿ ಜೊತೆಯಾಗಿ ಆಡಿದ್ದಾರೆ. ತಮ್ಮ ಮಾಜಿ ಸಹ ಆಟಗಾರನಿಗೆ ನಿವೃತ್ತಿ ಬಗ್ಗೆ ಹೃತ್ಪೂರ್ವಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ರಾಬಿನ್ ಉತ್ತಪ್ಪಗೆ ಕೊಹ್ಲಿ ಸಂದೇಶ

ಇನ್‌ಸ್ಟಾಗ್ರಾಮ್‌ನಲ್ಲಿ ರಾಬಿನ್ ಉತ್ತಪ್ಪ ಅವರ ನಿವೃತ್ತಿ ಟಿಪ್ಪಣಿಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, "ಚೆನ್ನಾಗಿ ಆಡಿದ್ದೀರಾ ರಾಬಿ, ನಿಮ್ಮ ದಾರಿಯಲ್ಲಿ ಪ್ರೀತಿ ಮತ್ತು ಆಶೀರ್ವಾದವನ್ನು ಹೊರತುಪಡಿಸಿ ಬೇರೇನೂ ಇಲ್ಲ. ನೀವು ತುಂಬಾ ಹೆಮ್ಮೆಪಡಬಹುದು ಮತ್ತು ನಿಮ್ಮ ಜೊತೆಯಲ್ಲಿ ಆಡುವುದು ತುಂಬಾ ಸಂತೋಷವಾಗಿದೆ. ಆಲ್ ದಿ ಬೆಸ್ಟ್ ಬ್ರದರ್." ಎಂದು ಶುಭಾಶಯ ತಿಳಿಸಿದ್ದಾರೆ.

ರಾಬಿನ್ ಉತ್ತಪ್ಪ ಅವರಿಗೆ ಕೇರಳ ಕ್ರಿಕೆಟ್ ಅಸೋಸಿಯೇಷನ್ ​​ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿದೆ, ಇದರಿಂದಾಗಿ ಅವರು ವಿದೇಶಗಳಲ್ಲಿ ನಡೆಯುವ ಟಿ20 ಲೀಗ್‌ಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಕರ್ನಾಟಕದೊಂದಿಗೆ ತನ್ನ ಕ್ರಿಕೆಟ್ ಆಟವನ್ನು ಪ್ರಾರಂಭಿಸಿದ ಉತ್ತಪ್ಪ ದೇಶೀಯ ಟೂರ್ನಿಗಳಲ್ಲಿ ಆಡಿದ ಕೊನೆಯ ರಾಜ್ಯ ಕೇರಳವಾಗಿದೆ.

Virat Kohli Write Heartfelt Message Following His Former Teammates Robin Uthappa Retirement

ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿರುವ ಉತ್ತಪ್ಪ

ಸುರೇಶ್ ರೈನಾ, ದಿನೇಶ್ ಕಾರ್ತಿಕ್ ಮತ್ತು ಆರ್‌ಪಿ ಸಿಂಗ್ ಇದ್ದ 2004ರ ಅಂಡರ್ 19 ವಿಶ್ವಕಪ್‌ ತಂಡದಲ್ಲಿ ರಾಬಿನ್ ಉತ್ತಪ್ಪ ಸ್ಥಾನ ಪಡೆದಿದ್ದರು. 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2007ರಲ್ಲಿ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿ ರಾಬಿನ್ ಉತ್ತಪ್ಪ ಕೂಡ ಇದ್ದರು. ಕೆಕೆಆರ್ ಪರವಾಗಿ ರಾಬಿನ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಕರ್ನಾಟಕದ ಬ್ಯಾಟರ್ ಆಗಿರುವ ರಾಬಿನ್ ಉತ್ತಪ್ಪ ಭಾರತಕ್ಕಾಗಿ ಇದುವರೆಗೆ 46 ಏಕದಿನ, 13 ಟಿ20 ಪಂದ್ಯಗಳನ್ನಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದರು. 2015ರ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರಲಿಲ್ಲ.

Story first published: Thursday, September 15, 2022, 13:51 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X