ಮೆಲ್ಬೋರ್ನ್ ನಲ್ಲಿ ಟೆನಿಸ್ ನೋಡಲು ಹೋದ ಕೊಹ್ಲಿ-ಯುವಿ

By Mahesh

ಮೆಲ್ಬೋರ್ನ್, ಜ. 28: ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಅವರು ಎರಡನೇ ಟಿ20 ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯನ್ ಓಪನ್ ಪಂದ್ಯ ನೋಡಿ ಖುಷಿ ಪಟ್ಟಿದ್ದಾರೆ. ಸೆರ್ಬಿಯಾದ ನೊವಾಕ್ ಜೋಕೊವಿಕ್ ಹಾಗೂ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಅವರ ನಡುವಿನ ಸೆಮಿಫೈನಲ್ ಪಂದ್ಯವನ್ನು ಕ್ರಿಕೆಟರ್ ಗಳು ವೀಕ್ಷಿಸಿ ಆನಂದಿಸಿದ್ದಾರೆ.

ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಜನವರಿ 29ರಂದು ಆಸ್ಟ್ರೇಲಿಯಾ ವಿರುದ್ಧ ಎರಡನೇ ಟ್ವೆಂಟಿ20 ಪಂದ್ಯವನ್ನಾಡಲಿದೆ. ರ್ರೋಜರ್ ಫೆಡರರ್ ಅವರ ಬಹುದೊಡ್ಡ ಅಭಿಮಾನಿಯಾಗಿರುವ ವಿರಾಟ್ ಅವರು ಮೆಲ್ಬೋರ್ನ್ ನ ಟೆನಿಸ್ ಗ್ಯಾಲರಿಯಲ್ಲಿ ಯುವರಾಜ್ ಜೊತೆ ನಿಂತು ಸೆಲ್ಫಿ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ.

Virat Kohli and Yuvraj Singh watch Federer-Djokovic match at Australian Open

ಆದರೆ, ಕೊಹ್ಲಿಗೆ ನಿರಾಶೆ ಕಾದಿತ್ತು. ನೆಚ್ಚಿನ ಅಟಗಾರ ರೋಜರ್ ಫೆಡರರ್ ಉತ್ತಮ ಸೆಣಸಾಟದ ನಡುವೆ ಪಂದ್ಯವನ್ನು ಜೋಕೋವಿಕ್ ಗೆ ವಹಿಸಿಕೊಟ್ಟರು. ಆರಂಭದ ಎರಡು ಸೆಟ್ ಗಳನ್ನು 6-1, 6-2 ಅಂತರದಲ್ಲಿ ಗೆದ್ದ ಜೋಕೊವಿಕ್ ಗೆ ಮೂರನೇ ಸೆಟ್ ನಲ್ಲಿ ಭಾರಿ ಪೈಪೋಟಿ ನೀಡಿದ ಫೆಡರರ್ 6-3ರಲ್ಲಿ ಗೆದ್ದರು. ಅದರೆ, ಮುಂದಿನ ಸೆಟ್ 6-3ರಲ್ಲಿ ಸೋತ ಫೆಡರರ್ ಟೂರ್ನಿಯಿಂದ ನಿರ್ಗಮಿಸಿದರು.

ಕಳೆದ ವರ್ಷ ಜನವರಿ ತಿಂಗಳಿನಲ್ಲಿ ರೋಜರ್ ಫೆಡರರ್ ರನ್ನು ಖುದ್ದು ಭೇಟಿ ಮಾಡಿದ್ದ ಕೊಹ್ಲಿ, ಇದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ ಎಂದು ಹೇಳಿದ್ದರು. ನಂತರ ಫೆಡರರ್ ಅವರು ಆಡುವ ಇಂಟರ್ ನ್ಯಾಷನಲ್ ಪ್ರಿಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಯುಎಇ ರಾಯಲ್ಸ್ ತಂಡದ ಸಹ ಮಾಲೀಕತ್ವವನ್ನು ಕೊಹ್ಲಿ ವಹಿಸಿಕೊಂಡರು.

Kohli and Yuvraj Singh

ಫೆಡರರ್ ಅವರು ಕಳೆದ ವರ್ಷ ತಮ್ಮ ವೃತ್ತಿ ಬದುಕಿನ 1000ನೇ ಗೆಲುವು ಸಾಧಿಸಿ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಪಂದ್ಯ ನೋಡಲು ಪ್ಯಾಟ್ ರಾಫ್ಟರ್ ಅರೀನಾಗೆ ಕೊಹ್ಲಿ ಬಂದಿದ್ದರು. ಸೆಲ್ಫಿ ತೆಗೆದುಕೊಂಡು ಆತ ಮೈದಾನದ ಹೊರಗೂ ದಿಗ್ಗಜ. ಇದು ನನ್ನ ಬದುಕಿನ ಅತ್ಯಂತ ಅವಿಸ್ಮರಣೀಯ ಕ್ಷಣ ವಿರಾಟ್ ಕೊಹ್ಲಿ ಎಂದು ಟ್ವೀಟ್ ಮಾಡಿದ್ದರು. (ಒನ್ ಇಂಡಿಯಾ ಸುದ್ದಿ)

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, January 28, 2016, 18:11 [IST]
Other articles published on Jan 28, 2016
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more