ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಗಂಭೀರ್ ಬಳಿಕ ಧೋನಿ ನಾಯಕತ್ವವನ್ನು ಟೀಕಿಸಿದ ವೀರೇಂದ್ರ ಸೆಹ್ವಾಗ್

Virender Sehwag Criticises Ms Dhonis Captaincy Vs Rr

ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಅನುಭವಿಸಿದ ಬಳಿಕ ನಾಯಕ ಎಂಎಸ್ ಧೋನಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಗೌತಮ್ ಗಂಭೀರ್ ಕಟು ಟೀಕೆಯ ಬಳಿಕ ಇದೀಗ ಇನ್ನೋರ್ವ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಕೂಡ ಧೋನಿ ನಾಯಕತ್ವವನ್ನು ಟೀಕಿಸಿದ್ದಾರೆ.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಫಾಪ್ ಡು ಪ್ಲೆಸಿಸ್ ಸ್ಪೋಟಕ ಆಟವನ್ನು ಪ್ರದರ್ಶಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತುವ ಭರವಸೆಯನ್ನು ಮೂಡಿಸುತ್ತಿದ್ದರು. ಅಂಬಾಟಿ ರಾಯುಡು ವಿಕೆಟ್ ಉರುಳಿದ ಬಳಿಕ ಕ್ರೀಸ್‌ಗೆ ಬಂದ ಧೋನಿ ಮಾತ್ರ ಆರಂಭದಲ್ಲಿ ಹಲವು ಎಸೆತಗಳನ್ನು ಕ್ರೀಸ್‌ಲ್ಲಿ ನೆಲೆಯೂರಲು ತೆಗೆದುಕೊಂಡರು.

ಐಪಿಎಲ್ ಸಿಕ್ಸರ್ #200 ಮೈಲಿಗಲ್ಲು ದಾಟಿದ ರೋಹಿತ್ ಶರ್ಮಐಪಿಎಲ್ ಸಿಕ್ಸರ್ #200 ಮೈಲಿಗಲ್ಲು ದಾಟಿದ ರೋಹಿತ್ ಶರ್ಮ

"ಅಂತಿಮವಾಗಿ ಧೋನಿ ಸಿಡಿಸಿದ ಮೂರು ಸಿಕ್ಸರ್ ಸಿಎಸ್‌ಕೆ ಗೆಲುವಿನ ಸಮೀಪಕ್ಕೆ ತಂದು ನಿಲ್ಲಿಸುವಂತೆ ಭಾವನೆಯನ್ನು ಮೂಡಿಸಿತ್ತು. ಆದರೆ ನೈಜ ಸಂಗತಿಯೇನೆಂದರೆ ಪಂದ್ಯದ ಮಧ್ಯದಲ್ಲಿ ಧೋನಿ ಡಾಟ್ ಎಸೆತಗಳನ್ನು ಗಮನಿಸಿದರೆ ಆತ ಗೆಲ್ಲಲು ಕನಿಷ್ಟ ಪ್ರಯತ್ನ ನಡೆಸಿದಂತೆಯೂ ಭಾಸವಾಗಲಿಲ್ಲ" ಎಂದು ಸೆಹ್ವಾಗ್ ಹೇಳಿದ್ದಾರೆ.

ಸಂಜುಗೆ ಸಾಥ್ ನೀಡಲು ಪವರ್ ಹಿಟ್ಟರ್ ಸಿದ್ಧ: 'ಡಬಲ್ ಬ್ಯಾರೆಲ್' ಮೊರೆತದ ಎಚ್ಚರಿಕೆ ನೀಡಿದ ರಾಜಸ್ಥಾನ್ ನಾಯಕಸಂಜುಗೆ ಸಾಥ್ ನೀಡಲು ಪವರ್ ಹಿಟ್ಟರ್ ಸಿದ್ಧ: 'ಡಬಲ್ ಬ್ಯಾರೆಲ್' ಮೊರೆತದ ಎಚ್ಚರಿಕೆ ನೀಡಿದ ರಾಜಸ್ಥಾನ್ ನಾಯಕ

ಧೋನಿ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬಹುದು ಎಂದು ನಾನು ಭಾವಿಸಿದ್ದೆ. ಅಥವಾ ಸ್ಯಾಮ್ ಕರ್ರನ್ ವಿಕೆಟ್ ಕಳೆದುಕೊಂಡ ಬಳಿಕ ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸಬಹುದು ಎಂದು ಭಾವಿಸಿದ್ದೆ. ಆದರೆ ಅದ್ಯಾವುದು ಆಗದೆ ಮಧ್ಯದ ಓವರ್‌ಗಳಲ್ಲಿ ರನ್‌ರೇಟ್ ಕಡಿಮೆಯಾಯಿತು. ಅಂತಿಮ ಓವರ್‌ನಲ್ಲಿ 20-22 ರನ್ ಅಗತ್ಯವಿದ್ದರೆ ಧೋನಿ ಸಿಡಿಸಿದ 3 ಸಿಕ್ಸರ್ ವಾವ್ ಎಂತಾ ಉತ್ತಮ ಫಿನಿಷ್ ಎನಿಸಿಕೊಳ್ಳುತ್ತಿತ್ತು ಎಂದು ಸೆಹ್ವಾಗ್ ಕ್ರಿಕ್ ಬಜ್‌ಗೆ ನಿಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Story first published: Thursday, September 24, 2020, 10:22 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X