ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಂದ್ರಯಾನ್-2 ಉಡಾವಣೆ: ಗೌತಮ್ ಗಂಭೀರ್ ಸೊಗಸಾದ ಟ್ವೀಟ್!

Virender Sehwag, Gautam Gambhir congratulate ISRO on launch of Chandrayaan-2

ಶ್ರೀಹರಿಕೋಟಾ, ಜುಲೈ 22: ಆಂಧ್ರ ಪ್ರದೇಶದ ನೆಲ್ಲೋರ್ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸೋಮವಾರ (ಜುಲೈ 22) ನಡೆದ ಚಂದ್ರಯಾನ್-2 ಯಶಸ್ವಿ ರಾಕೆಟ್ ಉಡಾವಣೆಗಾಗಿ ಭಾರತದ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಸೆಹ್ವಾಗ್, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, 'ಚಂದ್ರಯಾನ್-2 ಯಶಸ್ವಿ ಉಡಾವಣೆಗಾಗಿ ಇಸ್ರೋ ತಂಡಕ್ಕೆ ಅನಂತ ಧನ್ಯವಾದಗಳು', ಎಂದು ಬರೆದುಕೊಂಡಿದ್ದಾರೆ. ಸೋಮವಾರ (ಜುಲೈ 22) ರಾಕೆಟ್ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸೆಹ್ವಾಗ್ ಟ್ವೀಟ್ ಮಾಡಿದ್ದರು.

ಮತ್ತೊಬ್ಬ ಮಾಜಿ ಕ್ರಿಕೆಟಿಗ, ಸದ್ಯದ ಬಿಜೆಪಿ ಸಂಸದ ಗೌತಮ್ ಗಂಭೀರ್ ಇನ್ನೂ ಸೊಗಸಾದ ಸಾಲುಗಳನ್ನು ಟ್ವೀಟ್ ನಲ್ಲಿ ಸೇರಿಸಿಕೊಂಡಿದ್ದಾರೆ. 'ಚಿಕ್ಕವನಿದ್ದಾಗ ಚಂದ್ರನತ್ತ ದಿಟ್ಟಿಸಿ ಆತ ಅದೇನು ರಹಸ್ಯ ಅವಿತಿಟ್ಟುಕೊಂಡಿರಬಹುದು ಎಂದು ಅಚ್ಚರಿಗೊಳ್ಳುತ್ತಿದ್ದೆ. ಚಂದ್ರಯಾನ್-2 ಇಂಥ ಕೆಲ ರಹಸ್ಯಗಳಿಗೆ ಬೆಳಕು ಚೆಲ್ಲಲಿದೆ ಅಂದುಕೊಳ್ಳುತ್ತೇನೆ. ಇಸ್ರೋದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

Story first published: Monday, July 22, 2019, 18:27 [IST]
Other articles published on Jul 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X