ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಆಟಗಾರರಿಗೆ ಗಾಯ, ತರ್ಲೆ ಮಾಡಿದ ವೀರೇಂದ್ರ ಸೆಹ್ವಾಗ್!

Virender Sehwag jokingly offers to fly to Australia to play test series

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ದೊಡ್ಡ ಸಮಸ್ಯೆಗೆ ಸಿಕ್ಕಿಹಾಕಿಕೊಂಡುಬಿಟ್ಟಿದೆ. ತಂಡದ ಬಹಳಷ್ಟು ಪ್ರಮುಖ ಆಟಗಾರರೆಲ್ಲ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದಾರೆ. ಉಳಿದಿರುವ ಕೆಲ ಆಟಗಾರರೂ ಗಾಯದ ಭೀತಿ ಅನುಭವಿಸುತ್ತಿದ್ದಾರೆ. ಆಡಲು 11 ಜನರ ತಂಡ ಬೇಕಾಗಿದ್ದರೆ, ಭಾರತ ತಂಡದಲ್ಲಿ ಈಗಾಗಲೇ 10ರಷ್ಟು ಮಂದಿ ಗಾಯದಿಂದಾಗಿ ತಂಡದಿಂದ ಹೊರ ಬಿದ್ದಿದ್ದಾರೆ, ಗಾಯದ ಭೀತಿಯಲ್ಲಿದ್ದಾರೆ.

ಬ್ರಿಸ್ಬೇನ್‌ ಹೋಟೆಲ್‌ನಲ್ಲಿ ಖೈದಿಯಂತೆ ಬಂಧಿಯಾದ ಟೀಮ್ ಇಂಡಿಯಾ!ಬ್ರಿಸ್ಬೇನ್‌ ಹೋಟೆಲ್‌ನಲ್ಲಿ ಖೈದಿಯಂತೆ ಬಂಧಿಯಾದ ಟೀಮ್ ಇಂಡಿಯಾ!

ಭಾರತ ತಂಡದ ಎಂದಿನ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದು ತವರಿನಲ್ಲಿದ್ದಾರೆ. ಟೆಸ್ಟ್ ಸರಣಿ ಆಡುತ್ತಿರುವ ಉಪನಾಯಕ ರೋಹಿತ್ ಶರ್ಮಾ, ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಕೂಡ ಹೇಳಿಕೊಳ್ಳುವ ಫಾರ್ಮ್‌ನಲ್ಲಿ ಇದ್ದಂತಿಲ್ಲ.

ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್

ಹೀಗಾಗಿ 1-1ರಿಂದ ಸಮಬಲಗೊಂಡಿರುವ 4 ಪಂದ್ಯಗಳ ಟೆಸ್ಟ್ ಸರಣಿ ಗೆದ್ದುಕೊಳ್ಳುವ ಕಣ್ಣಿಟ್ಟಿದ್ದ ಭಾರತ ಇಕ್ಕಟ್ಟಿಗೆ ಸಿಲುಕಿದೆ.

ಗಾಯಕ್ಕೀಡಾಗಿರುವ ಭಾರತೀಯರು

ಗಾಯಕ್ಕೀಡಾಗಿರುವ ಭಾರತೀಯರು

* ಭುವನೇಶ್ವರ್ ಕುಮಾರ್, ತೊಡೆ ಸ್ನಾಯುಗಳ ಗಾಯ, ತಂಡದಿಂದ ಹೊರಕ್ಕೆ
* ಇಶಾಂತ್ ಶರ್ಮಾ, ಸೊಂಟ ಮತ್ತು ತೊಡೆ ಮೂಳೆ ಸೇರುವಲ್ಲಿ ನೋವು, ತಂಡದಿಂದ ಹೊರಕ್ಕೆ
* ಮೊಹಮ್ಮದ್ ಶಮಿ, ಬಲಗೈಗೆ ಗಾಯ, ತಂಡದಿಂದ ಹೊರಕ್ಕೆ
* ಉಮೇಶ್ ಯಾದವ್, ಕಾಲಿನ ಹಿಂಬಾಗದ ಸ್ನಾಯುಗಳು (ಕಾಫ್) ಬೇನೆ, ತಂಡದಿಂದ ಹೊರಕ್ಕೆ
* ಕೆಎಲ್ ರಾಹುಲ್, ಕೈಯ ಮಣಿಕಟ್ಟು ಗಾಯ, ತಂಡದಿಂದ ಹೊರಕ್ಕೆ
* ರಿಷಭ್ ಪಂತ್, ಮೊಣಕೈಗೆ ಗಾಯ, ತಂಡದಿಂದ ಹೊರ ಬೀಳುವ ಭೀತಿ
* ಹನುಮ ವಿಹಾರಿ, ಹ್ಯಾಮ್‌ಸ್ಟ್ರಿಂಗ್, ತಂಡದಿಂದ ಹೊರಕ್ಕೆ
* ರವೀಂದ್ರ ಜಡೇಜಾ, ಹೆಬ್ಬೆಟ್ಟಿಗೆ ಗಾಯ, ತಂಡದಿಂದ ಹೊರಕ್ಕೆ
* ಜಸ್‌ಪ್ರೀತ್‌ ಬೂಮ್ರಾ, ಕಿಬ್ಬೊಟ್ಟೆ ನೋವು, ತಂಡದಿಂದ ಹೊರಕ್ಕೆ
* ರವಿಚಂದ್ರನ್ ಅಶ್ವಿನ್, ಬೆನ್ನುನೋವು, ಗಾಯದ ಭೀತಿ

ವೀರೇಂದ್ರ ಸೆಹ್ವಾಗ್ ತರಲೆ

ದೊಡ್ಡ ಸಂಖ್ಯೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಗಾಯಕ್ಕೀಡಾಗಿರುವುದನ್ನು ತಮಾಷೆಯಾಗಿ ತೆಗೆದುಕೊಂಡಿರುವ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, 'ಇಷ್ಟೆಲ್ಲಾ ಆಟಗಾರರು ಗಾಯಗೊಂಡಿದ್ದಾರೆ. ಪ್ಲೇಯಿಂಗ್‌ XIಗೆ ಜನ ಸಾಕಾಗದಿದ್ದರೆ ಆಸ್ಟ್ರೇಲಿಯಾಕ್ಕೆ ಹೋಗಲು ನಾನು ತಯಾರಿದ್ದೇನೆ. ಆದರೆ ಕ್ವಾರಂಟೈನ್ ಅನ್ನು ಮಾತ್ರ ಬಿಸಿಸಿಐ ನೋಡಿಕೊಳ್ಳಬೇಕು,' ಎಂದು ಟ್ವೀಟ್ ಮಾಡಿದ್ದಾರೆ.

ಆಕ್ರಮಣಕಾರಿ ಆಟಗಾರ

ಆಕ್ರಮಣಕಾರಿ ಆಟಗಾರ

ಸದ್ಯ ಬಿಜೆಪಿ ಸೇರಿಕೊಂಡಿರುವ ವೀರೇಂದ್ರ ಸೆಹ್ವಾಗ್, ಆಡುತ್ತಿದ್ದಾಗ ಭಾರತದ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು. ಆಕ್ರಮಣಕಾರಿ ಆಟಕ್ಕೆ ಹೆಚ್ಚು ಜನಪ್ರಿಯರಾಗಿದ್ದರು. ವೀರೂ ಅವರು 104 ಟೆಸ್ಟ್ ಪಂದ್ಯಗಳಲ್ಲಿ 49.34ರ ಸರಾಸರಿಯಂತೆ 8586 ರನ್ ಬಾರಿಸಿದ್ದಾರೆ. ಇದರಲ್ಲಿ 23 ಶತಕ, 6 ದ್ವಿಶತಕಗಳು ಸೇರಿವೆ. ಅಂದ್ಹಾಗೆ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯ ನಿರ್ಣಾಯಕ 4ನೇ ಪಂದ್ಯ ಜನವರಿ 15ರಿಂದ ಬ್ರಿಸ್ಬೇನ್ ಗಬ್ಬಾ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.

Story first published: Wednesday, January 13, 2021, 9:41 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X