ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ಆಟಕ್ಕೆ ಸ್ಪೂರ್ತಿ ಯಾರೆಂದು ರಾಮಾಯಣದ ಚಿತ್ರ ಸಹಿತ ಹೇಳಿದ ಸೆಹ್ವಾಗ್

Virender Sehwag Names Ramayan Character As His ‘Batting Inspiration’

ಟೀಮ್ ಇಂಡಿಯಾ ಮಾಜಿ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯ. ಟ್ವಿಟ್ಟರ್‌ನಲ್ಲಿ ತಮಾಷೆಯ ಜೊತೆಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈಗ ತನ್ನ ಬ್ಯಾಟಿಂಗ್ ಸ್ಪೂರ್ತಿಯನ್ನು ಬಹಿರಂಗ ಪಡಿಸಿದ್ದಾರೆ. ರಾಮಾಯಣ ಧಾರಾವಾಹಿಯ ಚಿತ್ರದೊಂದಿಗೆ ಈ ಗುಟ್ಟನ್ನು ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ.

ಸೆಹ್ವಾಗ್ ಹಂಚಿಕೊಂಡ ಚಿತ್ರದಿಂದ ವೀರೇಂದ್ರ ಸೇಹ್ವಾಗ್‌ಗೆ ರಾಮಾಯಣದ ಪಾತ್ರ 'ಅಂಗದ' ಸ್ಪೂರ್ತಿ ಎಂಬುದು ಬಹಿರಂಗವಾಗಿದೆ. ಈ ವಿಚಾರವನ್ನು ಟ್ವಿಟ್ಟರ್ ಖಾತಯ ಮೂಲಕ ವೀರೇಂದ್ರ ಸೆಹ್ವಾಗ್ ಚಿತ್ರದೊಂದಿಗೆ ಹೇಳಿಕೊಂಡಿದ್ದಾರೆ.

ಯುವಿ-ಧೋನಿ ಭಾರತ ತಂಡವನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ ಪಾಕ್ ಮಾಜಿ ವೇಗಿಯುವಿ-ಧೋನಿ ಭಾರತ ತಂಡವನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ ಪಾಕ್ ಮಾಜಿ ವೇಗಿ

ದೂರದರ್ಶನ ವಾಹಿನಿಯಲ್ಲಿ 80ರ ದಶಕದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದ ರಾಮಾಯಣ ಧಾರಾವಾಹಿ ಮರು ಪ್ರಸಾರವಾಗುತ್ತಿದೆ. ಇದು ಭಾರೀ ಯಶಸ್ಸನ್ನೂ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಅಂಗದನ ಸಾಹಸದ ದೃಶ್ವವನ್ನು ಹಂಚಿಕೊಂಡು ಸೆಹ್ವಾಗ್ ಈತನೇ ತನ್ನ ಬ್ಯಾಟಿಂಗ್‌ಗೆ ಸ್ಪೂರ್ತಿ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಬ್ಯಾಟಿಂಗ್‌ಗೆ ನಾನು ಸ್ಪೂರ್ತಿಯನ್ನು ಎಲ್ಲಿಂದ ಪಡೆದುಕೊಂಡಿದ್ದೇನೆ ಎಂಬುದು ಇಲ್ಲದೆ ಎಂದು ಬರೆದಿರುವ ಜೊತೆಗೆ "ಪಾದಗಳನ್ನು ಅಲುಗಾಡಿಸುವುದು ಕಷ್ಟ ಮಾತ್ರವಲ್ಲ, ಸಾಧ್ಯವೇ ಇಲ್ಲ, ಅಂಗದ್ ಜಿ ರಾಕ್ಸ್" ಎಂದು ಈ ಫೋಟೋಗೆ ಒಕ್ಕಣೆ ಬರೆದುಕೊಂಡಿದ್ದಾರೆ.

ವಿಚಿತ್ರ ಬ್ಯಾಟಿಂಗ್ ಶೈಲಿಯ ರಹಸ್ಯ ಬಹಿರಂಗ ಪಡಿಸಿದ ಸ್ಟೀವ್ ಸ್ಮಿತ್ವಿಚಿತ್ರ ಬ್ಯಾಟಿಂಗ್ ಶೈಲಿಯ ರಹಸ್ಯ ಬಹಿರಂಗ ಪಡಿಸಿದ ಸ್ಟೀವ್ ಸ್ಮಿತ್

ಟೀಮ್ ಇಂಡಿಯಾದ ಸ್ಪೋಟಕ ಮಾಜಿ ಆರಂಭಿಕ ಆಟಗಾರ ಸೆಹ್ವಾಗ್ ಎಲ್ಲಾ ಮಾದರಿಗಳಲ್ಲೂ ಯಶಸ್ವೀ ಆಟಗಾರ. ತನ್ನ ವಿಶಿಷ್ಠ ಶೈಲಿಯ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಕ್ರಮಾಂಕದ ಆಟಕ್ಕೆ ಹೊಸದೊಂದು ಆಯಾಮವನ್ನೇ ನೀಡಿದ್ದಾರೆ. ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಎರಡು ತ್ರಿಶತಕ ದಾಖಲಿಸಿದ ಸಾಧನೆಯನ್ನು ಮಾಡಿದ್ದಾರೆ ಸೆಹ್ವಾಗ್.

Story first published: Monday, April 13, 2020, 12:08 [IST]
Other articles published on Apr 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X