ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತೆಂಡೂಲ್ಕರ್, ಯುವರಾಜ್‌ಗೆ ತರಲೆ ಮಾಡಿದ ವೀರೇಂದ್ರ ಸೆಹ್ವಾಗ್: ವಿಡಿಯೋ

Virender Sehwags epic commentary leaves Sachin Tendulkar, Yuvraj Singh in splits

ನವದೆಹಲಿ: ಕ್ರಿಕೆಟ್‌ ದಂತಕತೆಗಳನ್ನು ಮತ್ತೆ ಮೈದಾನದಲ್ಲಿ ಕಾಣುವ ಅವಕಾಶವನ್ನು ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ ಮಾಡಿಕೊಟ್ಟಿದೆ. ಮುಖ್ಯವಾಗಿ ಭಾರತದ ಮೂರು ಆಕರ್ಷಣೀಯ ಕ್ರಿಕೆಟಿಗರಾದ, ಆರಾದ್ಯರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಪ್ರದರ್ಶನವನ್ನು ವೀಕ್ಷಿಸಲು ಈ ರೋಡ್ ಸೇಫ್ಟಿ ಟೂರ್ನಿಯಿಂದ ಸಾಧ್ಯವಾಗಿದೆ.

ಪಂಜಾಬ್‌ನಲ್ಲಿ ಐಪಿಎಲ್ ಪಂದ್ಯಗಳೇಕಿಲ್ಲ?: ಬಿಸಿಸಿಐಗೆ ಬಿಸಿ ಮುಟ್ಟಿಸಿ ಪತ್ರ!ಪಂಜಾಬ್‌ನಲ್ಲಿ ಐಪಿಎಲ್ ಪಂದ್ಯಗಳೇಕಿಲ್ಲ?: ಬಿಸಿಸಿಐಗೆ ಬಿಸಿ ಮುಟ್ಟಿಸಿ ಪತ್ರ!

ಮಾರ್ಚ್ 9ರಂದು ನಡೆಯಲಿದ್ದ ಇಂಗ್ಲೆಂಡ್ ಲೆಜೆಂಡ್ಸ್‌ ವಿರುದ್ಧ ಪಂದ್ಯಕ್ಕಾಗಿ ಸಿದ್ಧತೆ ನಡೆಸುತ್ತಿದ್ದ ಇಂಡಿಯಾ ಲೆಜೆಂಡ್ಸ್‌ ಆಟಗಾರರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಒಂದೇ ಜಾಗದಲ್ಲಿ ಇದ್ದರು. ಈ ವೇಳೆ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಸೆಹ್ವಾಗ್ ತರಲೆ ಪ್ರಶ್ನೆಗಳೊಂದಿಗೆ ಸಚಿನ್-ಯುವಿ ಜೊತೆ ಚಾಟ್ ಮಾಡಿದ್ದಾರೆ.

ಕನ್ನಡಿಗ ರಾಹುಲ್ ದ್ರಾವಿಡ್ ಶ್ಲಾಘಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಕನ್ನಡಿಗ ರಾಹುಲ್ ದ್ರಾವಿಡ್ ಶ್ಲಾಘಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಮಾತನಾಡಲು ಸಂಕೋಚ ಪಡುವ ಮಾಜಿ ಆರಂಭಿಕ ಜೊತೆಗಾರ ಸಚಿನ್, ಆಕ್ಯುಪಂಕ್ಚರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆಗ ಬಳಿ ಬಂದ ಸೆಹ್ವಾಗ್, 'ಇವರು ನಮ್ಮ ದೇವರು. ಈಗಲೂ ಕ್ರಿಕೆಟನ್ನು ಬಿಟ್ಟುಕೊಡುತ್ತಿಲ್ಲ. ಒಂದರಮೇಲೊಂದು ಇಂಜೆಕ್ಷನ್ ಚುಚ್ಚಿಕೊಂಡು ಪಂದ್ಯ ಆಡುತ್ತಿದ್ದಾರೆ,' ಎಂದರು. ಇದಕ್ಕೆ ಸಚಿನ್ ನಕ್ಕರಷ್ಟೇ.

ಆ ಬಳಿಕ ಯುವಿ ಬಳಿಗೆ ತಿರುಗಿದ ಸೆಹ್ವಾಗ್, 'ಇದಕ್ಕೆ ನಿನ್ನ ಸಲಹೆಯೇನು ಯುವರಾಜ್,' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಯುವಿ, 'ನೋಡು ಭಾಯ್, ನೀನು ಶೇರ್ ಆಗಿದ್ದರೆ ಆತ ಬಬ್ಬರ್ ಶೇರ್,' ಎಂದಿದ್ದಾರೆ. ಇದರರ್ಥ ನೀನು ಮುಂದಿದ್ದಿಯ ಅಂದುಕೊಂಡ್ರೆ ಆತ ನಿಂಗಿಂತ್ಲೂ ಮುಂದಿದ್ದಾನೆ,' ಎಂದು. ಈ ವಿಡಿಯೋವನ್ನು ಸಚಿನ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಯುವಿ ಮತ್ತು ಸಚಿನ್ ಐಪಿಎಲ್‌ನಲ್ಲಿ ಕಡೇಯ ಬಾರಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

Story first published: Tuesday, March 9, 2021, 13:00 [IST]
Other articles published on Mar 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X