ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೀರೇಂದ್ರ ಸೆಹ್ವಾಗ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಕೆXIಪಿ ಮಾಜಿ ಕೋಚ್

Virender Sehwags mental approach is a recipe for success

ನವದೆಹಲಿ, ಜುಲೈ 24: ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅಂದರೆ ಪಕ್ಕನೆ ನೆನಪಿಗೆ ಬರೋದೇ ಅವರ ದಿಟ್ಟ ಬ್ಯಾಟಿಂಗ್. ಬ್ಯಾಟಿಂಗ್‌ಗೆ ಬಂದವರೇ ಸಿಕ್ಸ್, ಫೋರ್ ಚಚ್ಚುವ ಮೂಲಕ ಆಟ ಶುರು ಮಾಡೋ ವಿಭಿನ್ನ ಸ್ಟೈಲ್ ಅವರದ್ದು. ಇದೇ ಕಾರಣಕ್ಕೆ ಸೆಹ್ವಾಗ್ ಆಟ ಹೆಚ್ಚು ಇಷ್ಟವಾಗುತ್ತಿತ್ತು.

ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!

ಬ್ಯಾಟಿಂಗ್‌ಗೆ ಬರುವ ಆಟಗಾರ ಕೊಂಚ ಕಾಲ ಕ್ರೀಸ್‌ನಲ್ಲಿ ಗಟ್ಟಿಯಾಗಲು ಯತ್ನಿಸುತ್ತಾನೆಯೇ ಹೊರತು ಬಂದ ಕೂಡಲೇ ದೊಡ್ಡ ಹೊಡೆತಗಳಿಗೆ ಕೈ ಹಾಕಲು ಹಿಂಜರಿಯುತ್ತಾನೆ. ಆದರೆ ಸೆಹ್ವಾಗ್ ವಿಚಾರದಲ್ಲಿ ಹೀಗಿರಲಿಲ್ಲ. ಆರಂಭಿಕ ಎಸೆತಗಳಿಗೆ ಸಿಕ್ಸ್/ಫೋರ್ ಚಚ್ಚಿಯೇ ವೀರೂ ಆಟ ಶುರು ಮಾಡುತ್ತಿದ್ದರು.

ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ವೀರೇಂದ್ರ ಸೆಹ್ವಾಗ್ ಅವರ ಈ ದಿಟ್ಟ ಬ್ಯಾಟಿಂಗ್‌ಗೆ ಕಾರಣವೇನೆಂದು ಕಿಂಗ್ಸ್‌ XI ಪಂಜಾಬ್‌ನ ಮಾಜಿ ತಾಂತ್ರಿಕ ಕೋಚ್ ಶಯಮಾಲ್ ವಲ್ಲಭ್‌ಜೀ ಹೇಳಿಕೊಂಡಿದ್ದಾರೆ. ಸೆಹ್ವಾಗ್ ಅವರ ಗಟ್ಟಿ ಮನಸ್ಸೇ ಅವರ ಯಶಸ್ಸಿಗೆ ಕಾರಣ ಎಂದು ವಲ್ಲಭ್‌ಜೀ ಹೇಳಿದ್ದಾರೆ.

Virender Sehwags mental approach is a recipe for success

ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ವಲ್ಲಭ್‌ಜೀ 'ಸೆಹ್ವಾಗ್ ಬಿಲಿಯನ್‌ನಲ್ಲಿ ಒಬ್ಬರು. ಅವರ ಮಾನಸಿಕತೆಯೇ ಅವರ ಯಶಸ್ಸಿಗೆ ಕಾರಣ, ಬಹುಶಃ ಇದು ಅವರಿಗೂ ಗೊತ್ತಿರಲಿಕ್ಕಿಲ್ಲ. ಸೆಹ್ವಾಗ್ ಒಂದು ಚೆಂಡನ್ನು ನೋಡುತ್ತಾರೆ ಮತ್ತು ಅದಕ್ಕೆ ಬಾರಿಸುತ್ತಾರೆ. ಎಲ್ಲರೂ ಇಷ್ಟು ಪ್ರತಿಭಾವಂತರಾಗಿರೋಲ್ಲ,' ಎಂದರು.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

'ನಾನೊಬ್ಬ ಕೋಚ್ ಮತ್ತು ಮೆಂಟರ್ ಆಗಿ ಹೇಳುವುದಾದರೆ, ಪ್ರತಿಯೊಬ್ಬರೂ ಅವನಂತೆ ಪ್ರತಿಭಾವಂತರು ಎಂದು ಆತ ತಿಳಿದಿರುವುದಿಲ್ಲ. ಈ ಪ್ರಕ್ರಿಯೆ ಕೆಲವರಿಗೆ ಇನ್ನೂ ಕ್ಲಿಷ್ಟಕರ ಅನ್ನಿಸುತ್ತದೆ. ಸೆಹ್ವಾಗ್ ವಿಚಾರದಲ್ಲಿ ಇದು ಸಕಾರಾತ್ಮಕವಾಗಿ ಕೆಲಸ ಮಾಡಿದೆ,' ಎಂದು ವಲ್ಲಭ್‌ಜೀ ವಿವರಿಸಿದರು.

Story first published: Friday, July 24, 2020, 20:38 [IST]
Other articles published on Jul 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X