ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಅಂಗಳದಲ್ಲಿ ಸೆಹ್ವಾಗ್ ಆಟ ನೋಡಲು ಕಾದಿದ್ದವರಿಗೆ ಬೇಸರದ ಸುದ್ದಿ ಕೊಟ್ಟ ಮೊಹಮ್ಮದ್ ಕೈಫ್

Virender Sehwag to miss first 2 matches of Legends League Cricket 2022

ಸದ್ಯ ಹರಿಣಗಳ ನಾಡಿನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿ ಒಂದೆಡೆ ಸದ್ದು ಮಾಡುತ್ತಿದ್ದರೆ, ಇದರ ನಡುವೆಯೇ ಮತ್ತೊಂದೆಡೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡಲಾರಂಭಿಸಿದೆ.

ಕೊಹ್ಲಿ ಮಾಡಿದ ಈ ಕೆಲಸವನ್ನು ಬೇರೆಯವರು ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ ಎಂದು ಕಿಡಿಕಾರಿದ ಗವಾಸ್ಕರ್ಕೊಹ್ಲಿ ಮಾಡಿದ ಈ ಕೆಲಸವನ್ನು ಬೇರೆಯವರು ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ ಎಂದು ಕಿಡಿಕಾರಿದ ಗವಾಸ್ಕರ್

ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ಹಲವಾರು ದಿಗ್ಗಜ ಕ್ರಿಕೆಟಿಗರನ್ನೊಳಗೊಂಡ 3 ತಂಡಗಳ ನಡುವಿನ ಸೆಣಸಾಟವೇ ಈ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆಗಿದೆ. ಈ ಟೂರ್ನಿಯಲ್ಲಿ ಇಂಡಿಯಾ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಕಣಕ್ಕಿಳಿಯುತ್ತಿದ್ದು ಟೂರ್ನಿಯ ಮೊದಲನೇ ಪಂದ್ಯ ಜನವರಿ 20ರಂದು ಆರಂಭವಾಗಲಿದ್ದು ಅಂತಿಮ ಪಂದ್ಯ ಜನವರಿ 29ರಂದು ನಡೆಯಲಿದೆ.

2021ರ ವಾರ್ಷಿಕ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತದ ಆಟಗಾರರನ್ನು ಹುಡುಕಿದವರಿಗೆ ಆಶ್ಚರ್ಯ!2021ರ ವಾರ್ಷಿಕ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತದ ಆಟಗಾರರನ್ನು ಹುಡುಕಿದವರಿಗೆ ಆಶ್ಚರ್ಯ!

ಇಂಡಿಯಾ ಮಹಾರಾಜಸ್ ತಂಡ ಭಾರತದ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ತಂಡವಾಗಿದ್ದರೆ, ಏಷ್ಯಾ ಲಯನ್ಸ್ ಭಾರತದ ಕ್ರಿಕೆಟಿಗರನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರಲಿದೆ ಹಾಗೂ ವರ್ಲ್ಡ್ ಜಿಯಂಟ್ಸ್ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ. ಇನ್ನು ಈ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ಮತ್ತು ಏಷ್ಯಾ ಲಯನ್ಸ್ ತಂಡಗಳು ಸೆಣಸಾಟವನ್ನು ನಡೆಸುತ್ತಿವೆ. ಹೀಗೆ ಈ ಪಂದ್ಯದ ಆರಂಭಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮಾತನಾಡಿದ್ದು, ಪಂದ್ಯದ ಕುರಿತ ಮಾಹಿತಿಗಳನ್ನು ಹಂಚಿಕೊಂಡು ವಿರೇಂದ್ರ ಸೆಹ್ವಾಗ್ ಅಭಿಮಾನಿಗಳಿಗೆ ಬೇಸರ ಸುದ್ದಿಯೊಂದನ್ನು ನೀಡಿದ್ದಾರೆ. ಅದರ ವಿವರ ಈ ಕೆಳಕಂಡಂತಿದೆ.

ವಿರೇಂದ್ರ ಸೆಹ್ವಾಗ್ ಅಲಭ್ಯ

ವಿರೇಂದ್ರ ಸೆಹ್ವಾಗ್ ಅಲಭ್ಯ

ಇಂಡಿಯಾ ಮಹಾರಾಜಾಸ್ ತಂಡದ ಅಧಿಕೃತ ನಾಯಕನಾದ ವೀರೇಂದ್ರ ಸೆಹ್ವಾಗ್ ವೈಯಕ್ತಿಕ ಕಾರಣಗಳಿಂದ ಚೊಚ್ಚಲ ಹಾಗೂ ದ್ವಿತೀಯ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಮಾಹಿತಿಯನ್ನು ನೀಡಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಾವೇ ಮೊದಲೆರಡು ಪಂದ್ಯಗಳಲ್ಲಿ ಇಂಡಿಯಾ ಮಹಾರಾಜಾಸ್ ತಂಡವನ್ನು ನಾಯಕನಾಗಿ ಮುನ್ನಡೆಸುವುದಾಗಿ ತಿಳಿಸಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಮೊಹಮ್ಮದ್ ಕೈಫ್ ತಾನು ಈಗಾಗಲೇ ಕೆಲವೊಂದಿಷ್ಟು ಪಂದ್ಯಗಳಲ್ಲಿ ನಾಯಕತ್ವವನ್ನು ನಿರ್ವಹಿಸಿದ್ದು, ತರಬೇತುದಾರ ಹಾಗೂ ಮಾರ್ಗದರ್ಶಕನಾಗಿಯೂ ಕೆಲಸ ಮಾಡಿರುವುದರಿಂದ ಲೆಜೆಂಡ್ಸ್ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಇನ್ನು ವಿರೇಂದ್ರ ಸೆಹ್ವಾಗ್ ಅವರ ಹೊಡಿ ಬಡಿ ಬ್ಯಾಟಿಂಗ್‌ನ್ನು ಹಲವಾರು ದಿನಗಳ ಅಂತರದ ನಂತರ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಸೆಹ್ವಾಗ್ ಅಲಭ್ಯತೆಯ ವಿಷಯ ಬೇಸರವನ್ನುಂಟು ಮಾಡಿದ್ದು, ಮೊದಲೆರಡು ಪಂದ್ಯಗಳು ಮುಗಿದ ನಂತರ ಸೆಹ್ವಾಗ್ ತಂಡ ಸೇರಲಿದ್ದಾರೆ.

ಟೂರ್ನಿಯ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಟೂರ್ನಿಯ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಜನವರಿ 20, 2022: ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್, ರಾತ್ರಿ 8 ಗಂಟೆಗೆ


ಜನವರಿ 21, 2022: ವಲ್ಡ್ ಜೈಂಟ್ಸ್ vs ಏಷ್ಯಾ ಲಯನ್ಸ್, ರಾತ್ರಿ 8 ಗಂಟೆಗೆ


ಜನವರಿ 22, 2022: ವರ್ಲ್ಡ್ ಜೈಂಟ್ಸ್ vs ಇಂಡಿಯಾ ಮಹಾರಾಜಸ್, ರಾತ್ರಿ 8 ಗಂಟೆಗೆ


ಜನವರಿ 24, 2022: ಏಷ್ಯಾ ಲಯನ್ಸ್ vs ಇಂಡಿಯಾ ಮಹಾರಾಜಸ್, ರಾತ್ರಿ 8 ಗಂಟೆಗೆ

ಜನವರಿ 26, 2022: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್, ರಾತ್ರಿ 8 ಗಂಟೆಗೆ


ಜನವರಿ 27, 2022: ಏಷ್ಯಾ ಲಯನ್ಸ್ vs ವರ್ಲ್ಡ್ ಜೈಂಟ್ಸ್, ರಾತ್ರಿ 8 ಗಂಟೆಗೆ


ಜನವರಿ 29, 2022: ಫೈನಲ್ ಪಂದ್ಯ, ರಾತ್ರಿ 8 ಗಂಟೆಗೆ

ಇಂಡಿಯಾ ಮಹಾರಾಜಾಸ್ ತಂಡದಲ್ಲಿನ ಆಟಗಾರರು

ಇಂಡಿಯಾ ಮಹಾರಾಜಾಸ್ ತಂಡದಲ್ಲಿನ ಆಟಗಾರರು

ಇಂಡಿಯಾ ಮಹಾರಾಜಾಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಬದರಿನಾಥ್, ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಂಗ್ ಬದಾನಿ, ಮುನಾಫ್ ಪಟೇಲ್, ವೇಣುಗೋಪಾಲ್ ರಾವ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ ಮತ್ತು ಅಮಿತ್ ಭಂಡಾರಿ

Story first published: Thursday, January 20, 2022, 20:46 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X