ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಮ್ಲಾ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಲಂಕಾ ವೇಗಿ ವಿಶ್ವ ಫರ್ನಾಂಡೋ!

Vishwa Fernando castles Hashim Amla, scripts history in Port Elizabeth

ಪೋರ್ಟ್ ಎಲಿಝಬೆತ್, ಫೆಬ್ರವರಿ 22: ಶ್ರೀಲಂಕಾ ವೇಗಿ ವಿಶ್ವ ಫರ್ನಾಂಡೋ ಅವರು ದಕ್ಷಿಣ ಆಫ್ರಿಕಾ ಆಟಗಾರ ಹಾಶೀಮ್ ಆಮ್ಲಾ ಅವರನ್ನು 0ಗೆ ಔಟ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. ಪೋರ್ಟ್ ಎಲಿಝಬೆತ್‌ನ ಸೇಂಟ್ ಜಾರ್ಜ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ-ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ವೇಳೆ ಫರ್ನಾಂಡೋ ಈ ದಾಖಲೆ ಮಾಡಿದ್ದಾರೆ.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43601

ಇತ್ತಂಡಗಳ ನಡುವೆ ನಡೆದ ದ್ವಿತೀಯ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಲಂಕಾ ಬೌಲರ್ ಫರ್ನಾಂಡೋ, ಇನ್ನಿಂಗ್ಸ್‌ಗೆ ಇಳಿದಿದ್ದ ಆಫ್ರಿಕಾ ಬ್ಯಾಟ್ಸ್ಮನ್ ಆಮ್ಲಾ ಅವರನ್ನು ಮೊದಲ ಎಸೆತಕ್ಕೆ ಬೌಲ್ಡ್ ಮಾಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಆಮ್ಲಾ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ ಮೊದಲ ಆಟಗಾರನಾಗಿ ಫರ್ನಾಂಡೋ ಇತಿಹಾಸ ನಿರ್ಮಿಸಿದ್ದಾರೆ.

ಮೊದಲ ಟಿ20: ನಬಿ ಆಕರ್ಷಕ ಆಟ, ಐರ್ಲೆಂಡ್ ವಿರುದ್ಧ ಅಫ್ಘಾನ್‌ಗೆ ಜಯಮೊದಲ ಟಿ20: ನಬಿ ಆಕರ್ಷಕ ಆಟ, ಐರ್ಲೆಂಡ್ ವಿರುದ್ಧ ಅಫ್ಘಾನ್‌ಗೆ ಜಯ

ಅಂತೂ 124 ಟೆಸ್ಟ್ ಪಂದ್ಯಗಳ ಬಳಿಕ ಆಮ್ಲಾ ಇನ್ನಿಂಗ್ಸ್ ಆರಂಭಿಕ ಎಸೆತಕ್ಕೆ ವಿಕೆಟ್ ಒಪ್ಪಿಸಿದಂತಾಗಿದೆ. ಪಂದ್ಯದಲ್ಲಿ ಫರ್ನಾಂಡೋ ಅವರು ಆಫ್ರಿಕಾದ ಡೀನ್ ಎಲ್ಗರ್ (6 ರನ್), ಆಮ್ಲಾ (0), ಡುವಾನ್ನೆ ಒಲಿವಿಯರ್ (0) ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ 62 ರನ್ನಿಗೆ 3 ವಿಕೆಟ್ ಪಡೆದ ಸಾಧನೆಗೂ ಗಮನ ಸೆಳೆದರು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ, ಏಡೆನ್ ಮಾರ್ಕ್ರಾಮ್ 60, ಕ್ವಿಂಟನ್ ಡಿ ಕಾಕ್ 86 ರನ್ ನೆರವಿನೊಂದಿಗೆ 61.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 222 ಪೇರಿಸಿ ಆರಂಭಿಕ ಇನ್ನಿಂಗ್ಸ್‌ ಮುಗಿಸಿದೆ. ಇನ್ನಿಂಗ್ಸ್‌ಗೆ ಇಳಿದಿರುವ ಲಂಕಾ, ಗುರುವಾರ (ಫೆ.21) ದಿನದಾಟದ ಅಂತ್ಯಕ್ಕೆ 20 ಓವರ್‌ಗೆ 3 ವಿಕೆಟ್ ಕಳೆದು 60 ರನ್ ಬಾರಿಸಿತ್ತು.

Story first published: Friday, February 22, 2019, 12:50 [IST]
Other articles published on Feb 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X