ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಒಂದಿನ ನೀವು ಟ್ರೋಫಿ ಗೆದ್ದೇ ಗೆಲ್ಲುತ್ತೀರಿ': ಭಾರತದ ಬೆನ್ನು ತಟ್ಟಿದ ದಿಗ್ಗಜರು!

Viv Richards’ message to India women’s team after loss in final

ಮೆಲ್ಬರ್ನ್, ಮಾರ್ಚ್ 9: ಮಹಿಳಾ ಟಿ20 ವಿಶ್ವಕಪ್‌ ಫೈನಲ್‌ಗೆ ಚೊಚ್ಚಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿದ್ದ ಭಾರತೀಯ ವನಿತೆಯರಿಗೆ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಚಿನ್ನದಂತ ಅವಕಾಶವಿತ್ತು. ಟೂರ್ನಿಯಲ್ಲಿ ಒಂದೂ ಸೋಲು ಕಂಡಿರದ ಭಾರತೀಯ ವನಿತಾ ತಂಡ ಟ್ರೋಫಿ ಜಯಿಸಲಿದೆ ಎಂಬ ನಿರೀಕ್ಷೆಯೂ ಭಾರತೀಯರೆಲ್ಲರದ್ದಾಗಿತ್ತು.

ಟಿ20 ವಿಶ್ವಕಪ್: 7 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿದ ಶೆಫಾಲಿ ವರ್ಮಾ!ಟಿ20 ವಿಶ್ವಕಪ್: 7 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿದ ಶೆಫಾಲಿ ವರ್ಮಾ!

ಆದರೆ ಫೈನಲ್ ಪಂದ್ಯದ ಫಲಿತಾಂಶ ಬಂದಿದ್ದೇ ಬೇರೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ವನಿತೆಯರನ್ನು 17 ರನ್‌ನಿಂದ ಸೋಲಿಸಿದ್ದ ಭಾರತ, ಟೂರ್ನಿ ಕೊನೇ ಪಂದ್ಯದಲ್ಲಿ ಅದೇ ಆಸ್ಟ್ರೇಲಿಯಾ ವಿರುದ್ಧ 85 ರನ್‌ನಿಂದ ಪರಾಭವಗೊಂಡು ಟ್ರೋಫಿ ಗೆಲ್ಲುವ ಬಂಗಾರದ ಅವಕಾಶವನ್ನು ಕೈಚೆಲ್ಲಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ

ಗೆಲ್ಲುತ್ತೇವೆ ಅಂದುಕೊಂಡಿದ್ದ ಪಂದ್ಯ ಸೋತಾಗ ಮನಸ್ಸಿಗಾಗೋ ದುಖಃ ತಡೆಯಲಾಗೋಲ್ಲ. ಇಂಥದ್ದೇ ಆಘಾತದಲ್ಲಿರುವ ಭಾರತದ ಮಹಿಳಾ ತಂಡಕ್ಕೆ ವಿಶ್ವ ಕ್ರಿಕೆಟ್‌ನ ದಂತಕತೆಗಳೆಲ್ಲ ಸಾತ್ವನಿಸಿದ್ದಾರೆ. ಭಾರತೀಯ ತಂಡಕ್ಕೆ ಸ್ಫೂರ್ತಿ ತುಂಬಿ ಕೆಲ ದಿಗ್ಗಜರು ಮಾಡಿರುವ ಟ್ವೀಟ್‌ಗಳು ಕೆಳಗಿವೆ.

ಬ್ಯಾಟಿಂಗ್-ಬೌಲಿಂಗ್ ವಿಭಾಗದ ವೈಫಲ್ಯ

ಬ್ಯಾಟಿಂಗ್-ಬೌಲಿಂಗ್ ವಿಭಾಗದ ವೈಫಲ್ಯ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ವನಿತಾ ತಂಡ, ಅಲಿಸಾ ಹೀಲಿ 75 (39 ಎಸೆತ), ಬೆತ್ ಮೂನಿ 78 (54 ಎಸೆತ) ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್‌ ಕಳೆದು 184 ರನ್ ಮಾಡಿತ್ತು. ಗುರಿ ಬೆನ್ನತ್ತಿದ ಭಾರತದ ವನಿತೆಯರು 19.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 99 ರನ್ ಬಾರಿಸಲಷ್ಟೇ ಶಕ್ತರಾದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಭಾರತದ ಪ್ರದರ್ಶನ ಕಾಣಲಿಲ್ಲ. ಇದೇ ಸೋಲಿಗೆ ಕಾರಣವಾಯ್ತು (ಭಾರತದ ಮಹಿಳಾ ತಂಡದ ಫೈನಲ್ ವರೆಗಿನ ಸಾಧನೆ ಶ್ಲಾಘಿಸಿ ಭಾರತದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಮಾಡಿರುವ ಟ್ವೀಟ್ ಮೇಲಿದೆ).

ಯಾವತ್ತೂ ಕುಸಿದು ಕೂರಬೇಡಿ

ಭಾರತದ ವನಿತಾ ತಂಡಕ್ಕೆ ಸ್ಫೂರ್ತಿಯ ಮಾತುಗಳನ್ನಾಡಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಸರ್ ವಿವಿಯನ್ ರಿಚರ್ಡ್ಸ್ ಟ್ವೀಟ್‌ ಮಾಡಿದ್ದಾರೆ. 'ಯಾವತ್ತೂ ಕುಸಿದು ಕೂರಬೇಡಿ. ಟೂರ್ನಿಯುದ್ದಕ್ಕೂ ನೀವು ಅದ್ಭುತ ಆಟವಾಡಿದ್ದೀರಿ. ಮುಂದೊಂದು ದಿನ ನಿಮ್ಮ ಕೈಗೂ ವಿಶ್ವಕಪ್ ಟ್ರೋಫಿ ಬರಲಿದೆ. ಯಾವತ್ತೂ ಈ ನಂಬಿಕೆಯನ್ನು ಜೀವಂತವಾಗಿರಿಸಿಕೊಳ್ಳಿ,' ಎಂದು ರಿಚರ್ಡ್ಸ್ ಬರೆದುಕೊಂಡಿದ್ದಾರೆ.

ಭರವಸೆ ಎಂದಿಗೂ ಇರಲಿ

ನಮ್ಮ ಮಹಿಳಾ ತಂಡ ಕಿರಿಯರದ್ದು. ಮುಂದೊಮ್ಮೆ ಇದು ಬಲಿಷ್ಠ ತಂಡವಾಗಿ ಹೊರಹೊಮ್ಮಲಿದೆ. ಭಾರತದ ವನಿತೆಯರೆ, ನೀವು ವಿಶ್ವದಗಲ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ. ಪರಿಶ್ರಮ ಮುಂದುವರೆಸಿ. ಯಾವತ್ತಿಗೂ ಭರವಸೆ ಕಳೆದುಕೊಳ್ಳಬೇಡಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಕಪ್‌ ಬರುತ್ತದೆ ಹೋಗುತ್ತದೆ

ಕಪ್‌ ಬರುತ್ತದೆ ಹೋಗುತ್ತದೆ

ಕೆಲ ವರ್ಷಗಳ ಹಿಂದೆ ಭಾರತದ ವನಿತಾ ತಂಡ ವಿಶ್ವಕಪ್‌ ಫೈನಲ್‌ಗೆ ಬರುತ್ತದೆ, ವಿಶ್ವದ ಕಣ್ಣು ಆ ಪಂದ್ಯದತ್ತ ತಿರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ನೀವು ಆ ಸಾಧನೆ ಮಾಡಿದ್ದೀರಿ. ಕಪ್ ಬರುತ್ತದೆ ಹೋಗುತ್ತದೆ. ನೀವು ಫೈನಲ್ ತಲುಪಿದ್ದೇ ಒಂದು ದೊಡ್ಡ ಗೆಲುವು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪೀಳಿಗೆಗೆ ನೀವು ಸ್ಫೂರ್ತಿಯಾಗಿದ್ದೀರಿ

ವಿಶ್ವಕಪ್ ಟ್ರೋಫಿ ಗೆಲುವಿನ ಸಮೀಪಕ್ಕೆ ಬಂದು ಸೋತಾಗ ಎಷ್ಟು ನೋವಾಗುತ್ತದೆ ಅನ್ನೋದು ನನಗೆ ಗೊತ್ತು. ಆದರೆ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಫಲಿತಾಂಶ ಎನೇ ಬಂದಿರಲಿ, ಆದರೆ ನೀವು ಇಡೀ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದೀರಿ ಅನ್ನೋದಂತೂ ನಿಜ,' ಎಂದು ಭಾರತದ ಜಾಂಟಿ ರೋಡ್ಸ್ ಖ್ಯಾತಿಯ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

Story first published: Monday, March 9, 2020, 12:06 [IST]
Other articles published on Mar 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X