ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸ್ ಮೂಲಕ ಖಾತೆ ಓಪನ್ ರಿಷಬ್ ಪಂತ್ ರಿಂದ ದಾಖಲೆ

By Mahesh
Rishabh Pant becomes the first Indian player to get off the mark in Tests with a six

ನ್ಯಾಟಿಂಗ್ ಹ್ಯಾಮ್, ಆಗಸ್ಟ್ 19: ಪ್ರವಾಸಿ ಭಾರತ ಹಾಗೂ ಅತಿಥೇಯ ಇಂಗ್ಲೆಂಡ್ ನಡುವಿನ ನ್ಯಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಉತ್ತಮ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಗಮನ ಸೆಳೆದರು. ಜತೆಗೆ ಚೊಚ್ಚಲ ಪಂದ್ಯವಾಡುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರು ತಮ್ಮ ಮೊದಲ ಟೆಸ್ಟ್ ರನ್ ಗಳಿಸಿದ ರೀತಿ ಎಲ್ಲರನ್ನು ಅಚ್ಚರಿಗೆ ದೂಡಿತು.

ಸಿಕ್ಸರ್ ಬಾರಿಸುವ ಮೂಲಕ ತಮ್ಮ ಖಾತೆ ಓಪನ್ ಮಾಡಿದ ರಿಷಬ್ ಅವರು 24ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. 307 ಸ್ಕೋರಿನಿಂದ ಮುಂದುವರೆಸಿದ ಭಾರತವು ಭಾನುವಾರದ ದಿನದ ಆರಂಭದಲ್ಲೇ ರಿಷಪ್ ಪಂತ್ ವಿಕೆಟ್ ಕಳೆದುಕೊಂಡಿತು. ಆಫ್ ಸ್ಟಂಪಿನಿಂದ ಹೊರಗೆ ಹೋಗುತ್ತಿದ್ದ ಚೆಂಡನ್ನು ಕೆಣಕಲು ಹೋಗಿ ಇನ್ ಸೈಡ್ ಎಡ್ಜ್ ಮಾಡಿಕೊಂಡು ಬ್ರಾಡ್ ಎಸೆತದಲ್ಲಿ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು. 94.5 ಓವರ್ ಗಳಲ್ಲಿ 329ಕ್ಕೆ ಭಾರತ ಆಲೌಟ್ ಆಯಿತು.

1
42376


97ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಔಟ್ ಆದ ಬಳಿಕ ಕ್ರೀಸ್​​ಗೆ ಬಂದ ರಿಷಬ್ ಪಂತ್ ಅವರು ತಾವು ಎದುರಿಸಿದ ಎರಡನೇ ಎಸೆತದಲ್ಲಿ ಸಿಕ್ಸ್ ಬಾರಿಸಿ, ತಮ್ಮ ವೃತ್ತಿ ಬದುಕಿನ ಮೊದಲ ರನ್ ಗಳಿಸಿದರು.

 ವಿದೇಶಿ ನೆಲದಲ್ಲಿ ರನ್ ಗಳಿಕೆ : ನಾಯಕನಾಗಿ ಕೊಹ್ಲಿ ದಾಖಲೆ! ವಿದೇಶಿ ನೆಲದಲ್ಲಿ ರನ್ ಗಳಿಕೆ : ನಾಯಕನಾಗಿ ಕೊಹ್ಲಿ ದಾಖಲೆ!

* ಈ ಮೂಲಕ ಸಿಕ್ಸ್ ಬಾರಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ ರನ್ ಖಾತೆ ತೆರೆದ ಭಾರತದ ಮೊದಲ ಬ್ಯಾಟ್ಸ್​ಮನ್​ ಹಾಗೂ ವಿಶ್ವದ 12ನೇ ಬ್ಯಾಟ್ಸ್​ಮನ್​​​ ಎಂಬ ಸಾಧನೆ ಮಾಡಿದರು.

* 20 ವರ್ಷ 318ದಿನಗಳು ವಯಸ್ಸಿನ ಪಂತ್ ಅವರು ಭಾರತದ ಪರ ಚೊಚ್ಚಲ ಟೆಸ್ಟ್ ಆಡುತ್ತಿರುವ ಐದನೇ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
* ಪಾರ್ಥೀವ್ ಪಟೇಲ್ ಅವರು 17 ವರ್ಷ ಹಾಗೂ 152 ದಿನಗಳಾಗಿದ್ದಾಗ ಮೊದಲ ಟೆಸ್ಟ್ ಪಂದ್ಯವಾಡಿದ್ದರು.

* 12 ಆಟಗಾರರ ಪೈಕಿ ನ್ಯೂಜಿಲೆಂಡಿನ ಮಾರ್ಕ್ ಕ್ರೇಗ್ ಮೊದಲ ಎಸೆತ, ಆಸ್ಟ್ರೇಲಿಯಾದ ಎರಿಕ್ ಫ್ರೀಮನ್ ಹಾಗೂ ಪಂತ್ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದಾರೆ.

Story first published: Saturday, August 25, 2018, 13:07 [IST]
Other articles published on Aug 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X