ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಹೊಸ ಮ್ಯಾಚ್‌ವಿನ್ನರ್‌ಗಳು ಸಿಗಲಿದ್ದಾರೆ: ವಿವಿಎಸ್ ಲಕ್ಷ್ಮಣ್

VVS Laxman believes new Indian heroes to emerge in Boxing Day Test

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಹೀನಾಯ ಸೋಲನ್ನು ಟೀಮ್ ಇಂಡಿಯಾ ಹಿಂದಕ್ಕೆ ಬಿಟ್ಟು ಮುಂದುವರಿಯಬೇಕು ಹಾಗೂ ಹೊಸ ಆರಂಭವನ್ನು ಈ ಮೂಲಕ ಪಡೆದುಕೊಳ್ಳಬೇಕು. ಇದು ಆಟಗಾರರ ಬಲ ಹಾಗೂ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಇದೆ ಸಂದರ್ಭದಲ್ಲಿ ವಿವಿಎಸ್ ಲಕ್ಷ್ಮಣ್ ಒಂದು ಕೆಟ್ಟ ಸಂದರ್ಭದ ಪ್ರದರ್ಶನದಿಂದ ಭಾರತದ ಆಟದ ಗುಣಮಟ್ಟವನ್ನು ವ್ಯಾಖ್ಯಾನಿಸಲಾಗದು. ಈಗ ಭಾರತ ತಂಡದಲ್ಲಿ ಹೊಸ ಹೀರೋಗಳು ಹುಟ್ಟಲು ಉತ್ತಮ ಅವಕಾಶವಿದೆ. ಈ ಸಂದರ್ಭವನ್ನು ನೋಡಿಕೊಂಡು ಸಮಯವನ್ನು ಅದ್ಭುತವಾಗಿ ಬಳಸಿಕೊಳ್ಳಬಹುದು ಎಂದಿದ್ದಾರೆ.

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟ

"ಈ ಕೆಟ್ಟ ಸಂದರ್ಭ ಆಟಗಾರರ ಗುಣಮಟ್ಟವನ್ನು ವ್ಯಾಖ್ಯಾನಿಸಲಾಗದು. ಅವರೆಲ್ಲಾ ವಿಶ್ವದ ಅನೇಕ ಕಡೆಗಳಲ್ಲಿ ಸಾಕಷ್ಟು ಆಟವನ್ನು ಆಡಿದವರಾಗಿದ್ದಾರೆ. ಮೊದಲ ಟೆಸ್ಟ್‌ನ ಮೊದಲ ಆರು ಸೆಶನ್‌ಗಳಲ್ಲಿ ಭಾತರತ ಉತ್ತಮ ಆಟವನ್ನು ಪ್ರದರ್ಶಿಸಿತ್ತು. ಆದರೆ 70 ನಿಮಿಷಗಳ ಕೆಟ್ಟ ಸಂದರ್ಭ ಎಲ್ಲವನ್ನೂ ಹಾಳು ಮಾಡಿತ್ತು" ಎಂದು ವಿವಿಎಸ್ ಲಕ್ಷ್ಮಣ್ ಟೈಮ್ಸ್‌ ಆಫ್ ಇಂಡಿಯಾಗೆ ಬರೆದ ಅಂಕಣದಲ್ಲಿ ಹೇಳಿದ್ದಾರೆ.

"ಈಗ ಟೆಸ್ಟ್ ಸರಣಿಯ ಕಾಲು ಭಾಗ ಮಾತ್ರವೇ ಅಂತ್ಯವಾಗಿದೆ. ಇನ್ನೂ ಮೂರು ಪಂದ್ಯಗಳು ನಡೆಯಬೇಕಾಗಿರುವುದರಿಂದ ಆಡಲು ಎಲ್ಲವೂ ಇದೆ. ಇದು ತಂಡದ ಸಾಮರ್ಥ್ಯ ಹಾಗೂ ಬಲದ ನಿಜವಾದ ಪರೀಕ್ಷೆಯಾಗಿರಲಿದೆ" ಎಮದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಪುನರಾರಂಭಿಸಲು ಮೆಲ್ಬರ್ನ್‌ಗೆ ಬಂದ ಕೆಎಲ್ ರಾಹುಲ್ಟೆಸ್ಟ್ ಕ್ರಿಕೆಟ್ ಪುನರಾರಂಭಿಸಲು ಮೆಲ್ಬರ್ನ್‌ಗೆ ಬಂದ ಕೆಎಲ್ ರಾಹುಲ್

"ತಂಡದಲ್ಲಿ ಹೊಸ ಮ್ಯಾಚ್‌ವಿನ್ನರ್‌ಗಳು ಸೃಷ್ಟಿಯಾಗಲು ಇದು ನಿಜಕ್ಕೂ ಅತ್ಯುತ್ತಮವಾದ ಸಂದರ್ಭವಾಗಿದೆ. ಈ ಸಂದರ್ಭವನ್ನು ಬಳಸಿಕೊಂಡು ತಮ್ಮ ಕೇ ಮೇಲೆತ್ತಿ ತಂಡಕ್ಕೆ ಆಸರೆಯಾಗಬಹುದು. ಇದು ಅಡಿಲೇಡ್ ಸೋಲನ್ನು ಹಿಂದಕ್ಕೆ ತಳ್ಳಿ ಹೊಸ ಆರಂಬವನ್ನು ಪಡೆಯಲು ಅತ್ಯುತ್ತಮವಾದ ಸಂದರ್ಭ" ಎಂದು ವಿವಿಎಸ್ ಲಕ್ಷ್ಮಣ್ ತಮ್ಮ ಅಂಕಣದಲ್ಲಿ ಸ್ಪೂರ್ತಿಯ ಮಾತುಗಳನ್ನು ಆಡಿದ್ದಾರೆ.

Story first published: Thursday, December 24, 2020, 16:26 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X