ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಮೊದಲ ಟಿ20ಗೂ ಮುನ್ನ ಭಾರತಕ್ಕೆ ಲಕ್ಷ್ಮಣ್ 'ಸ್ಪೆಷಲ್' ಸಲಹೆ

VVS Laxman has some interesting suggestions for Virat Kohli and Co

ಲಾಡರ್‌ಹಿಲ್, ಆಗಸ್ಟ್ 3: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಶನಿವಾರ (ಆಗಸ್ಟ್ 3) ಆತಿಥೇಯರ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡುತ್ತಿದೆ. ಈ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿ ಬಳಗಕ್ಕೆ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ಟ್ರೋಲ್‌ ಮಾಡಿ ತಾನೇ ಫಜೀತಿಗೆ ಸಿಲುಕಿದ ಜೇಮ್ಸ್ ನೀಶಮ್!ವಿರಾಟ್ ಕೊಹ್ಲಿ ಟ್ರೋಲ್‌ ಮಾಡಿ ತಾನೇ ಫಜೀತಿಗೆ ಸಿಲುಕಿದ ಜೇಮ್ಸ್ ನೀಶಮ್!

'ಗಾಯದಿಂದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ರೋಹಿತ್ ಶರ್ಮಾ-ಧವನ್ ಜೋಡಿ ಬಲಿಷ್ಠಗೊಂಡಿದೆ. ಹೀಗಾಗಿ ಕೆಎಲ್ ರಾಹುಲ್ ವಿಶ್ವಕಪ್ ವೇಳೆ ತೋರಿಸಿದ್ದ ಫಾರ್ಮ್‌ ಹೆಚ್ಚಿಸಿಕೊಳ್ಳುವುದನ್ನು ಮತ್ತು 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುವುದನ್ನು ನೋಡಬಯಸಿದ್ದೇನೆ,' ಎಂದು ಲಕ್ಷ್ಮಣ್ ಹೇಳಿಕೊಂಡಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್, ಮೊದಲ ಟಿ20, Live ಸ್ಕೋರ್‌ಕಾರ್ಡ್

1
46244

ಮಾತು ಮುಂದುವರೆಸಿದ 'ವೆರಿ ವೆರಿ ಸ್ಪೆಷಲ್' ಲಕ್ಷ್ಮಣ್, 'ಇದರ ಜೊತೆಗೆ ರಿಷಬ್ ಪಂತ್ ಹೇಗೆ ಆಡುತ್ತಾರೆ ಎಂದು ನೋಡಲು ಆಸಕ್ತಿ ತಾಳಿದ್ದೇನೆ. ಎಲ್ಲಾ ಕ್ರಿಕೆಟ್‌ ಮಾದರಿಯಲ್ಲಿ ಪಂತ್‌ ಈಗ ನಿಶ್ಚಿತರಾಗುತ್ತಿದ್ದಾರೆ,' ಎಂದು ನುಡಿದರು. ವಿಂಡೀಸ್ ಪ್ರವಾಸ ಸರಣಿಯಲ್ಲಿ ಭಾರತ ಒಟ್ಟು 3 ಟಿ20 ಪಂದ್ಯಗಳನ್ನಾಡಲಿದೆ.

ವಿರಾಟ್ ಕೊಹ್ಲಿ, ಬಾಬರ್ ಹಿಂದಿಕ್ಕಿ ವಿಶ್ವದಾಖಲೆ ಬರೆಯಲಿದ್ದಾರೆ ರಾಹುಲ್!ವಿರಾಟ್ ಕೊಹ್ಲಿ, ಬಾಬರ್ ಹಿಂದಿಕ್ಕಿ ವಿಶ್ವದಾಖಲೆ ಬರೆಯಲಿದ್ದಾರೆ ರಾಹುಲ್!

ಆದರೆ ವಿವಿಎಲ್‌ ಲಕ್ಷ್ಮಣ್ ಸಲಹೆಯನ್ನು ಟೀಮ್ ಇಂಡಿಯಾ ಗಣನೆಗೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಎಲ್ ರಾಹುಲ್‌ ಅವರನ್ನು ಆಡುವ 11 ಆಟಗಾರರಲ್ಲಿ ಹೆಸರಿಸಿಲ್ಲ. ರಾಹುಲ್ ಬದಲಿಗೆ ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

Story first published: Saturday, August 3, 2019, 20:02 [IST]
Other articles published on Aug 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X