ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಬಲಿಷ್ಠ ಆಡುವ ಬಳಗ ಹೆಸರಿಸಿದ ಲಕ್ಷ್ಮಣ್

VVS Laxman Picked his Indias ODI XI for the Series against Sri Lanka

ಬೆಂಗಳೂರು, ಜುಲೈ 6: ಶ್ರೀಲಂಕಾ ವಿರುದ್ಧದ ಸರಣಿಗೆ ಶಿಖರ್ ಧವನ್ ನೇತೃತ್ವದ ಭಾರತದ ಯುವ ಪಡೆ ಸರ್ವ ಸನ್ನಧವಾಗುತ್ತಿದೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ತರಬೇತಿಯನ್ನು ಟೀಮ್ ಇಂಡಿಯಾ ಬಳಗ ನಡೆಸುತ್ತಿದೆ. ಇನ್ನೊಂದು ವಾರದಲ್ಲಿ ಏಕದಿನ ಸರಣಿ ಆರಂಭವಾಗಲಿದೆ.

ಈ ಏಕದಿನ ತಂಡದಲ್ಲಿ ಯಾವೆಲ್ಲಾ ಆಟಗಾರರು ಆಯ್ಕೆಯಾಗಲಿದ್ದಾರೆ ಎಂಬುದು ಈಗ ಎಲ್ಲರಲ್ಲಿರುವ ಕುತೂಹಲ. ಅನುಭವಿ ಹಾಗೂ ಯುವ ಆಟಗಾರರನ್ನು ಹೊಂದಿರುವ ಈ ತಂಡದಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ತೀವ್ರ ಪೈಪೋಟಿಯಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಸಂಭಾವ್ಯ ಆಡುವ ಬಳಗವನ್ನು ಹೆಸರಿಸಿದ್ದಾರೆ.

ಪ್ರಥಮದರ್ಜೆನಲ್ಲಿ ದಾಖಲೆ ಬರೆದ ಆಂಗ್ಲ ವೇಗಿ ಜೇಮ್ಸ್ ಆ್ಯಂಡರ್ಸನ್ಪ್ರಥಮದರ್ಜೆನಲ್ಲಿ ದಾಖಲೆ ಬರೆದ ಆಂಗ್ಲ ವೇಗಿ ಜೇಮ್ಸ್ ಆ್ಯಂಡರ್ಸನ್

ಹಾಗಾದರೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೆಸರಿಸಿದ ಟೀಮ್ ಇಂಡಿಯಾದ ಸಂಭಾವ್ಯ ಆಡುವ ಬಳಗದಲ್ಲಿ ಯಾರೆಲ್ಲಾ ಇದ್ದರೆ ಎಂಬುದನ್ನು ನೋಡಲು ಮುಂದೆ ಓದಿ..

ಆರಂಭಿಕನಾಗಿ ಪಡಿಕ್ಕಲ್‌ಗಿಲ್ಲ ಸ್ಥಾನ

ಆರಂಭಿಕನಾಗಿ ಪಡಿಕ್ಕಲ್‌ಗಿಲ್ಲ ಸ್ಥಾನ

ವಿವಿಎಸ್ ಲಕ್ಷ್ಮಣ್ ಹೆಸರಿಸಿದ ಈ ಆಡುವ ಬಳಗದಲ್ಲಿ ಯಾವುದೇ ಹೊಸ ಆಟಗಾರರಿಗೆ ಮಣೆ ಹಾಕಿಲ್ಲ ಎಂಬುದು ಗಮನಾರ್ಹ. ಈಗಾಗಲೇ ಭಾರತ ತಂಡದವನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ ಅನುಭವ ಹೊಂದಿರುವ ಆಟಗಾರರೇ ಇದ್ದಾರೆ. ಹೀಗಾಗಿ ಆರಂಭಿಕನಾಗಿ ಕನ್ನಡಿಗ ದೇವದತ್ ಪಡಿಕ್ಕಲ್‌ ಬದಲಿಗೆ ದೇಶೀಯ ಕ್ರಿಕೆಟ್‌ನಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ ಪೃಥ್ವಿ ಶಾಗೆ ಅವಕಾಶವನ್ನು ನೀಡಲಾಗಿದ್ದು ಶಿಖರ್ ಧವನ್‌ಗೆ ಸಾಥ್ ನೀಡಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಯಾರು?

ಮಧ್ಯಮ ಕ್ರಮಾಂಕದಲ್ಲಿ ಯಾರು?

ಮೂರನೇ ಕ್ರಮಾಂಕದಲ್ಲಿ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್‌ ಮೇಲೆ ಭರವಸೆಯಿಟ್ಟು ಹೆಸರಿಸಿದ್ದಾರೆ ಲಕ್ಷ್ಮಣ್. ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿದ್ದು ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಹೆಸರಿಸಲಾಗಿದೆ ಹಾಗೂ ಅನುಭವಿ ಮನೀಶ್ ಪಾಂಡೆ ಐದನೇ ಕ್ರಮಾಂಕದಲ್ಲಿ ಹೆಸರಿಸಲ್ಪಟ್ಟಿದ್ದಾರೆ.

ಕೆಳ ಕ್ರಮಾಂಕ ಮತ್ತು ಆಲ್‌ರೌಂಡರ್

ಕೆಳ ಕ್ರಮಾಂಕ ಮತ್ತು ಆಲ್‌ರೌಂಡರ್

ಇನ್ನು ಈ ತಂಡದಲ್ಲಿ ವಿವಿಎಸ್ ಲಕ್ಷ್ಮಣ್ ಹಾರ್ದಿಕ್ ಪಾಂಡ್ಯ ಅವರನ್ನು ಆರನೇ ಕ್ರಮಾಂಕದಲ್ಲಿ ಹೆಸರಿಸಿದ್ದಾರೆ. ಆದರೆ ಬೆನ್ನು ನೋವಿನ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಕಣಕ್ಕಿಳಿಯುವುದು ಅನುಮಾನ. ಪೂರ್ಣಪ್ರಮಾಣದ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇನ್ನು ಕೃಣಾಲ್ ಪಾಂಡ್ಯ ಅವರನ್ನು ಆಲ್‌ರೌಂಡರ್ ಆಗಿ ಹೆಸರಿಸಲಾಗಿದೆ

ದ್ರಾವಿಡ್ ಸರ್ ಜೊತೆ ಸಿಕ್ಕಿರುವ ಅವಕಾಶವನ್ನು ಬಾಚಿಕೊಳ್ತೀನಿ ಎಂದ ಪೃಥ್ವಿ ಶಾ | Oneindia Kannada
ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಇನ್ನು ಬೌಲಿಂಗ್ ವಿಭಾಗದಲ್ಲಿ ಉಪನಾಯಕ ಭುವನೇಶ್ವರ್ ಕುಮಾರ್ ನೇತೃತ್ವ ವಹಿಸಲಿದ್ದು ವೇಗದ ಬೌಲರ್ ಆಗಿ ದೀಪಕ್ ಚಾಹರ್ ಸಾಥ್ ನೀಡಲಿದ್ದಾರೆ. ಕುಲ್‌ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಅವರನ್ನು ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ವಿವಿಎಸ್ ಲಕ್ಷ್ಮಣ್ ಹೆಸರಿಸಿದ್ದಾರೆ.

Story first published: Wednesday, July 7, 2021, 10:01 [IST]
Other articles published on Jul 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X