ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಆರ್ ಅಶ್ವಿನ್ ತಂತ್ರಗಾರಿಕೆಯನ್ನು ಮೆಚ್ಚಿದ ವಿವಿಎಸ್ ಲಕ್ಷ್ಮಣ್

VVS Laxman praise intelligent R Ashwin for planning every batsmans dismissal

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರು ಪಂದ್ಯಗಳಲ್ಲಿ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರವಾಗಿದ್ದಾರೆ ಆರ್ ಅಶ್ವಿನ್. ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಆರ್ ಅಶ್ವಿನ್ ಕೊಡುಗೆಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಆರ್ ಅಶ್ವಿನ್ ಬೌಲಿಂಗ್ ಹಾಘೂ ಅವರಲ್ಲಿನ ತಂತ್ರಗಾರಿಕೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸ್ಟಾರ್‌ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ "ನನ್ನ ಪ್ರಕಾರ ಅವರು ಅತ್ಯಂತ ಬುದ್ಧವಂತ ವ್ಯಕ್ತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀವು ಆಡುವಾಗ ನಿಮ್ಮಲ್ಲಿ ಕೇವಲ ಕೌಶಲ್ಯ ಮಾತ್ರವೇ ಇದ್ದರೆ ಸಾಲದು. ನಿಮ್ಮ ಪೂರ್ವಸಿದ್ಧತೆ, ನಿಮ್ಮ ಯೋಜನೆಗಳು ಹಾಗೂ ಅದನ್ನು ಪೂರೈಸುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಆತ ಎದುರಾಳಿ ಬ್ಯಾಟ್ಸ್‌ಮನ್‌ನ ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅದಕ್ಕೆ ಪೂರಕವಾಗಿ ವಿಕೆಟ್ ಪಡೆಯಲು ಜೋಜನೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆ

"ನಾವು ಇತ್ತೀಚೆಗೆ ಆಸ್ಟ್ರೇಲಿಯಾ ಸರಣಿಯಲ್ಲೂ ಆರ್ ಅಶ್ವಿನ್ ಅವರ ಬುದ್ಧಿವಂತಿಕೆಯನ್ನು ಗಮನಿಸಿದ್ದೇವೆ. ಯಾವ ರೀತಿ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಿದ್ದರು ಎಂಬುದನ್ನು ಕಂಡಿದ್ದೇವೆ. ಸ್ಟೀವ್ ಸ್ಮಿತ್ ಅವರಂತಾ ಆಟಗಾರರಿಗೆ ಸಮಸ್ಯೆ ತಂದೊಡ್ಡಿದ್ದರು. ಹೀಗಾಗಿ ಆರ್ ಅಶ್ವಿನ್ ಎಂತಾ ಚಾಂಪಿಯನ್ ಬೌಲರ್, ಅವರು ಎಷ್ಟು ವಿಶೇಷವಾದ ವ್ಯಕ್ತಿ ಎಂದು ಎನಿಸುತ್ತಾರೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.

ಆರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ 400ನೇ ಟೆಸ್ಟ್ ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ವೇಗವಾಗಿ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಆರ್ ಅಶ್ವಿನ್ ಪಾಲಾಗಿದೆ.

ಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋ

ಆರ್ ಅಶ್ವಿನ್ 400 ವಿಕೆಟ್‌ಗಳನ್ನು ಕೇವಲ 77ನೇ ಪಂದ್ಯದಲ್ಲಿ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಬೌಲಿಂಗ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಇದ್ದಾರೆ. ಮುರಳೀಧರನ್ 400 ವಿಕೆಟ್‌ಗಳ ಮೈಲಿಗಲ್ಲು ತಲುಪಲು ಕೇವಲ 72 ಪಂದ್ಯಗಳನ್ನು ಮಾತ್ರವೇ ತೆಗೆದುಕೊಂಡಿದ್ದಾರೆ.

Story first published: Wednesday, March 3, 2021, 11:44 [IST]
Other articles published on Mar 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X