ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಅನುಭವಿ ಬೌಲರ್‌ಗಳ ನಿರ್ಧಾರಕ್ಕೆ ಕೋಚ್ ಅಸಮಾಧಾನ

Wahab Riaz, Mohammad Amir Left Us Wrong Time- Waqar Younis

ಪಾಕಿಸ್ತಾನ ತಂಡದ ಇಬ್ಬರು ಅನುಭವಿ ವೇಗದ ಬೌಲರ್‌ಗಳಾದ ರಿಯಾಝ್ ಮತ್ತು ಆಮಿರ್‌ ಪಾಕಿಸ್ತಾನ ತಂಡಕ್ಕೆ ದ್ರೋಹ ಬಗೆದಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ನ ಮುಖ್ಯ ಕೋಚ್ ವಕಾರ್ ಯೂನಿಸ್ ಆರೋಪಮಾಡಿದ್ದಾರೆ. ಇಬ್ಬರೂ ಆಟಗಾರರು ಯಾವುದೇ ಮುನ್ಸೂಚನೆ ನೀಡದೆ ನಿವೃತ್ತಿ ಪ್ರಕಟಿಸಿದ ಬಗ್ಗೆ ಪಾಕ್ ಕೋಚ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಳಿಕ ಪಾಕಿಸ್ತಾನ ತಂಡದ ವೇಗದ ಬೌಲರ್‌ಗಳಾದ ಮೊಹಮ್ಮದ್‌ ಆಮಿರ್ ಮತ್ತು ವಹಾಬ್‌ ರಿಯಾಝ್‌ ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದರು. ಈ ನಿರ್ಧಾರ ಸಾಕಷ್ಟು ಟೀಕೆಗೂ ಕಾರಣವಾಗಿತ್ತು. ಪಾಕಿಸ್ತಾನದ ಮಾಜಿ ಆಟಗಾರರು ಇದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

'ಆಸಿಸ್ ಕ್ರಿಕೆಟಿಗರು ಕೊಹ್ಲಿಯನ್ನು ಕೆಣಕಲು ಭಯಪಡುತ್ತಿದ್ದಾರೆ, ಅದಕ್ಕೆ ಕಾರಣ...': ಕ್ಲಾರ್ಕ್'ಆಸಿಸ್ ಕ್ರಿಕೆಟಿಗರು ಕೊಹ್ಲಿಯನ್ನು ಕೆಣಕಲು ಭಯಪಡುತ್ತಿದ್ದಾರೆ, ಅದಕ್ಕೆ ಕಾರಣ...': ಕ್ಲಾರ್ಕ್

ಪಾಕಿಸ್ತಾನದ ಅನುಭವಿ ಬೌಲರ್‌ಗಳ ಈ ನಿರ್ಧಾರದಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅನನುಭವಿ ಆಟಗಾರರನ್ನು ಆಯ್ಕೆ ಮಾಡಬೇಕಾಯಿತು. ಆಸ್ಟ್ರೇಲಿಯಾ ವಿರುದ್ಧದ ಆ ಸರಣಿಯಲ್ಲಿ ಪಾಕಿಸ್ತಾನ 0-2 ಅಂತರದಿಂದ ಹೀನಾಯವಾಗಿ ಸೋಲುಕಂಡಿತ್ತು. ಪಾಕಿಸ್ತಾನದ ಅನುಭವಿ ಬೌಲರ್‌ಗಳ ನಿರ್ಧಾರವೇ ಈ ಸೋಲಿಗೆ ಕಾರಣ ಎಂದು ಪಾಕ್ ಮಾಜಿ ಆಟಗಾರರು ಟೀಕೆಯನ್ನು ಮಾಡಿದ್ದರು.

"ಪ್ರಮುಖರ ನಿವೃತ್ತಿಯಿಂದಾಗಿ ನಾವು ಇಬ್ಬರು ಮೂವರು ಅನನುಭವಿ ವೇಗಿಗಳೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳಿದ್ದೆವು. ಆಮಿರ್-ರಿಯಾಝ್ ಆಸೀಸ್‌ ಪ್ರವಾಸಕ್ಕೂ ಮುನ್ನ ನಿವೃತ್ತಿ ಘೋಷಿಸಿ ತಂಡಕ್ಕೆ ದ್ರೋಹ ಬಗೆದರು. ಮ್ಯಾನೇಜ್ಮೆಂಟ್‌ ಜೊತೆಗೆ ಚರ್ಚಿಸದೇ ನಿವೃತ್ತಿ ಘೋಶಿಸಿದ್ದು ಬಹಳಾ ನೋವನ್ನುಂಟು ಮಾಡಿತು," ಎಂದು ವಕಾರ್‌ ಹೇಳಿದ್ದಾರೆ.

'ಕನಸು ಕಾಣುತ್ತಿರಿ' ಎಂದು ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡಿದ ಚಾಹಲ್ !'ಕನಸು ಕಾಣುತ್ತಿರಿ' ಎಂದು ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡಿದ ಚಾಹಲ್ !

"ಇಂದು ವಿಶ್ವದ ವಿವಿಧ ಭಾಗಗಳಲ್ಲಿ ಹಲವು ಲೀಗ್‌ ಟೂರ್ನಿಗಳು ನಡೆಯುತ್ತಿದ್ದು, ಆಟಗಾರರಿಗೆ ಹೆಚ್ಚು ಹಣ ಗಳಿಸುವ ಅವಕಾಶವಿದೆ. 4 ಓವರ್‌ ಎಸೆದು ವಿಶ್ರಾಂತಿ ಪಡೆಯುವುದು. ಇಂತಹ ಆರಾಮದಾಯಕ ಕ್ರಿಕೆಟ್‌ ಕಡೆಗೆ ಆಟಗಾರರು ಮುಂದಾಗುತ್ತಿರುವುದು ರಾಷ್ಟ್ರೀಯ ತಂಡಕ್ಕೆ ನಷ್ಟ ತಂದೊಡ್ಡುತ್ತಿದೆ. ಟ್ವಿಟರ್‌ ಮೂಲಕವೇ ನಿವೃತ್ತಿ ಘೋಷಿಸಿಬಿಡುವುದು ಬಹಳ ಬೇಸರ ತರುತ್ತದೆ," ಎಂದು ಪಾಕಿಸ್ತಾನ ತಂಡದ ಬೌಲಿಂಗ್‌ ಕೋಚ್‌ ಆಗಿರುವ ವಕಾರ್‌ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Story first published: Tuesday, April 7, 2020, 19:49 [IST]
Other articles published on Apr 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X