ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ಪಾಕ್‌ನ ಮತ್ತೊಬ್ಬ ವೇಗಿ!

Wahab Riaz Test Cricket

ಲಾಹೋರ್‌, ಆಗಸ್ಟ್‌ 02: ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ತಂಡದ ಸ್ಟಾರ್‌ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ತಂಡದ ಮತ್ತೊಬ್ಬ ಅನುಭವಿ ಎಡಗೈ ವೇಗಿ ವಹಾಬ್‌ ರಿಯಾಝ್‌ ಟೆಸ್ಟ್‌ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ.

ಸದ್ಯ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಆಡುತ್ತಿರುವ ವಹಾಬ್‌ ರಿಯಾಝ್‌, ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ವಿಚಾರವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಗೆ ತಿಳಿಸಿದ್ದು, ತಾಯ್ನಾಡಿಗೆ ಹಿಂದಿರುಗಿದ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ ಎಂದು ಪಾಕ್‌ನ ಸ್ಥಳೀಯ ಮಾದ್ಯಮಗಳಲ್ಲಿ ವರದಿಯಾಗಿದೆ.

ಭಾರತ ವಿರುದ್ಧದ ಟಿ20 ಕದನಕ್ಕೂ ಮೊದಲೇ ವಿಂಡೀಸ್‌ಗೆ ಬಿಗ್‌ ಶಾಕ್‌!

ಎಡಗೈ ವೇಗದ ಬೌಲರ್‌ ರಿಯಾಝ್‌, ಪಾಕಿಸ್ತಾನ ತಂಡದ ಪರ 27 ಟೆಸ್ಟ್‌ ಪಂದ್ಯಗಳನ್ನಾಡಿದ್ದು 83 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನಿಂಗ್ಸ್‌ ಒಂದರಲ್ಲಿ 63ಕ್ಕೆ 5 ವಿಕೆಟ್‌ ಪಡೆದಿರುವುದು ಅವರ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಇನ್ನು ವಹಾಬ್‌, 2018ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿದ್ದಾರೆ.

ಕಿಂಗ್‌ ಕೊಹ್ಲಿಯ ಕಟ್ಟುನಿಟ್ಟಿನ ಡಯೆಟ್‌ ಬಗ್ಗೆ ಕೋಚ್‌ ಅಭಿಪ್ರಾಯವಿದು!ಕಿಂಗ್‌ ಕೊಹ್ಲಿಯ ಕಟ್ಟುನಿಟ್ಟಿನ ಡಯೆಟ್‌ ಬಗ್ಗೆ ಕೋಚ್‌ ಅಭಿಪ್ರಾಯವಿದು!

ಇನ್ನು ಆಮಿರ್‌ ಹಠಾತ್ತನೆ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ಗಳಾದ ವಾಸಿಂ ಅಕ್ರಮ್‌ ಮತ್ತು ಶೊಯೇಬ್‌ ಅಖ್ತರ್‌ ಕಟುವಾಗಿ ಟೀಕಿಸಿದ್ದರು. ಆದರೆ ಪಾಕ್‌ ತಂಡದ ಕೋಚ್‌ ಮಿಕಿ ಆರ್ಥರ್‌ ಅವರು ಆಮಿರ್‌ ನಿವೃತ್ತಿ ವಿಚಾರ ತಮಗೆ ತಿಳಿದಿತ್ತು ಎಂದು ಹೇಳಿದ್ದರು.

"ಬಹಳ ಸಮಯದಿಂದ ಈ ವಿಚಾರ ಹರಿದಾಡುತ್ತಿತ್ತು. ಟೆಸ್ಟ್‌ನಿಂದ ನಿವೃತ್ತಿ ಹೊಂದುವ ಕುರಿತಾಗಿ ಆಮಿರ್‌ ನನ್ನ ಬಳಿ ಚರ್ಚಿಸಿದ್ದರು. ಅವರ ಟೆಸ್ಟ್‌ ವೃತ್ತಿ ಬದುಕಿನಿಂದ ದೈಹಿಕವಾಗಿ ಬಹಳ ದಣಿಯುತ್ತಿದ್ದರು," ಎಂದು ಮಿಕಿ ಆರ್ಥರ್‌ ಕ್ರಿಕೆಟ್‌ಇನ್ಫೋಗೆ ಹೇಳಿಕೆ ನೀಡಿದ್ದರು.

ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಆಗಲು ಬಯಸಿದ 'ದಾದಾ'ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಆಗಲು ಬಯಸಿದ 'ದಾದಾ'

"ನಾವು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಎಲ್ಲವೂ ನಿರ್ಧರಿತವಾಗಿರುತ್ತದೆ. ಟೆಸ್ಟ್‌ ಕ್ರಿಕೆಟ್‌ ಆಡಬೇಕೆಂಬ ಹಂಬಲವನ್ನೂ ಆಧರಿಸಿರುತ್ತದೆ. ಆದರೆ, ಟೆಸ್ಟ್‌ ಕ್ರಿಕೆಟ್‌ ತಮ್ಮ ದೇಹದ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನೂ ಪರಿಗಣಿಸಬೇಕು. ಹೀಗಾಗಿ ಆಮಿರ್‌ ಅವರ ನಿರ್ಧಾರವನ್ನು ನಾನು ಒಪ್ಪಿಕೊಳ್ಳುತ್ತೇನೆ. ತಮ್ಮ ಪ್ರದರ್ಶನ ಮಟ್ಟ ಸಲುವಾಗಿ ಅವರು ಏನು ಮಾಡಬೇಕೋ ಅದನ್ನೇ ಮಾಡಿದ್ದಾರೆ," ಎಂದಿದ್ದರು.

Story first published: Friday, August 2, 2019, 21:07 [IST]
Other articles published on Aug 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X