ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ 'ಟೆಸ್ಟ್‌ನ ಪವರ್‌ ಹೌಸ್‌' ಆಗಿದೆ ಯಾಕೆ ಎಂದು ಕಾರಣ ಹೇಳಿದ ಪಾಕ್‌ ದಿಗ್ಗಜ

Waqar Younis Identifies Why India Has Emerged As A Test Powerhouse

ಟೀಮ್ ಇಂಡಿಯಾ ಟೆಸ್ಟ್‌ನ ಪವರ್‌ ಹೌಸ್‌ ಎಂದು ಪಾಕಿಸ್ತಾನದ ದಿಗ್ಗಜ ಬೌಲರ್ ಹೇಳಿಕೆಯನ್ನು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ತೋರುತ್ತಿರುವ ಪ್ರದರ್ಶನವೇ ಈ ಹೇಳಿಕೆಗೆ ಕಾರಣವಾಗಿದೆ. ಆದರೆ ಭಾರತ ತನ್ನ ಪ್ರದರ್ಶನದಲ್ಲಿ ಈ ಮಟ್ಟಕ್ಕೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳು ಕಾರಣ ಏನು ಎನ್ನುವುದನ್ನು ಪಾಕ್‌ನ ಮಾಜಿ ನಾಯಕ ಹೇಳಿದ್ದಾರೆ.

ಟೀಮ್ ಇಂಡಿಯಾ ಬಗ್ಗೆ ಈ ರೀತಿ ಹೊಗಳಿಕೆಯ ಮಾತನ್ನಾಡಿರುವುದು ಪಾಕಿಸ್ತಾನದ ಮಾಜಿ ನಾಯಕ ವಾಕರ್ ಯೂನಿಸ್. ಟೀಮ್ ಇಂಡಿಯಾದಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬೆಳವಣಿಗೆಯ ಬಗ್ಗೆ ವಾಕರ್ ಯೂನಿಸ್ ತಮ್ಮದೇ ರೀತಿಯಲ್ಲಿ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸೌರವ್ ಗಂಗೂಲಿ ಉಲ್ಲೇಖಿಸಿ ಪಿಸಿಬಿ ಮೇಲೆ ಕಿಡಿಕಾರಿದ ಶೋಯೆಬ್ ಅಖ್ತರ್ಸೌರವ್ ಗಂಗೂಲಿ ಉಲ್ಲೇಖಿಸಿ ಪಿಸಿಬಿ ಮೇಲೆ ಕಿಡಿಕಾರಿದ ಶೋಯೆಬ್ ಅಖ್ತರ್

ಟೀಮ್ ಇಂಡಿಯಾ ಪ್ರಸಕ್ತ ಪ್ರಭಲವಾಗಿ ಕಂಡಿಬರುತ್ತಿದೆಯೆಂದರೆ ಅದಕ್ಕೆ ಭಾರತ ತಂಡದಲ್ಲಿರುವ ಬೌಲರ್‌ಗಳು ಕಾರಣ ಎಂದಿದ್ದಾರೆ ವಾಕರ್ ಯೂನಿಸ್. ಟೀಮ್ ಇಂಡಿಯಾದಲ್ಲಿ ವೇಗದ ಬೌಲಿಂಗ್ ಕಾಂಬಿನೇಶನ್ ಅತ್ಯಂತ ಉತ್ಕೃಷ್ಟವಾಗಿದೆ ಎಂದಿದ್ದಾರೆ.

ವೇಗದ ಬೌಲರ್‌ಗಳಿಗೆ ಪೂರಕವಾದ ವಾತಾವರಣ ಟೀಮ್ ಇಮಡಿಯಾದಲ್ಲಿದೆ. ಎಲ್ಲಾ ಕಂಡೀಷನ್‌ಗಳಲ್ಲಿ ಆಡುವಂತಾ ಧೈರ್ಯವನ್ನು ಟೀಮ್ ಇಂಡಿಯಾದ ವೇಗಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಟೀಮ್ ಇಂಡಿಯಾ ನಿರಂತರವಾಗಿ 140 ಕಿ.ಮೀ ಗೂ ಅಧಿಕ ವೇಗಿವಾಗಿ ಬೌಲಿಂಗ್ ಮಾಡುವ ವೇಗಿಗಳನ್ನು ಸಿದ್ದಪಡಿಸಿಕೊಳ್ಳುತ್ತಿದೆ ರೂಪಿಸುತ್ತಿದೆ ಎಂದಿದ್ದಾರೆ ವಾಕರ್ ಯೂನಿಸ್.

ಈ ಹಿಂದೆ ಟೀಮ್ ಇಂಡಿಯಾದಲ್ಲಿ ಹೀಗೆ ಇರಲಿಲ್ಲ. ಆದರೆ ಈಗಿನ ವೇಗಿಗಳಾದ ಜಸ್ಪ್ರಿತ್ ಬೂಮ್ರಾ, ಮೊಹಮದ್ ಶಮಿ ಮತ್ತು ಇಶಾಂತ್ ಶರ್ಮಾ ಟೀಮ್ ಇಂಡಿಯಾವನ್ನು ಎತ್ತರಕ್ಕೇರಿಸಿದ್ದಾರೆ ಎಂದು ವಾಕರ್ ಯೂನಿಸ್ ಮನಸಾರೆ ಟೀಮ್ ಇಂಡಿಯಾ ಬೌಲರ್‌ಗಳನ್ನು ಹೊಗಳಿದ್ದಾರೆ.

Story first published: Wednesday, March 18, 2020, 16:54 [IST]
Other articles published on Mar 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X