ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾಮಾಜಿಕ ಜಾಲತಾಣದಲ್ಲಿ ಎಲ್ಲೆ ಮೀರದಿರಲು ಅಫ್ರಿದಿ, ಗಂಭೀರ್‌ಗೆ ಯೂನಿಸ್ ಸಲಹೆ

Waqar Younis says Shahid Afridi and Gautam Gambhir to act sensibly on social media

ಲಾಹೋರ್, ಜೂನ್ 1: ಪಾಕಿಸ್ತಾನ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ ಮತ್ತು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಸಾಮಾಜಿಕ ಜಾಲತಾಣದಲ್ಲಿ ಸಂವೇದನಾಶೀಲರಾಗಿ ವರ್ತಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್, ಮಾಜಿ ಕ್ರಿಕೆಟಿಗ ವಾಕರ್ ಯೂನಿಸ್ ಹೇಳಿದ್ದಾರೆ.

ಮದುವೆಗೂ ಮೊದಲೇ ಅಪ್ಪನಾದ ಹಾರ್ದಿಕ್: ತಮಾಷೆಯ ಮೀಮ್ಸ್‌ ಇಲ್ಲಿವೆಮದುವೆಗೂ ಮೊದಲೇ ಅಪ್ಪನಾದ ಹಾರ್ದಿಕ್: ತಮಾಷೆಯ ಮೀಮ್ಸ್‌ ಇಲ್ಲಿವೆ

ಶಾಹಿದ್ ಅಫ್ರಿದಿ ಮತ್ತು ಗೌತಮ್ ಗಂಭೀರ್ ಆಗೀಗ ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ವಿರುದ್ಧ ಒಬ್ಬರು ಅಸಮಾಧಾನ ತೋರಿಕೊಳ್ಳುತ್ತಿರುತ್ತಾರೆ. ಆಗುಹೋಗುಗಳ ಬಗ್ಗೆಯೂ ಇಬ್ಬರೂ ಖಾರವಾಗಿ ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತಿರುತ್ತಾರೆ. ಮುಖ್ಯವಾಗಿ ಅಫ್ರಿದಿ ಕೊಂಚ ಎಲ್ಲ ಮೀರಿ ವರ್ತಿಸುತ್ತಿರುತ್ತಾರೆ. ಇವೆಲ್ಲವನ್ನೂ ಇಬ್ಬರೂ ನಿಯಂತ್ರಿಕೊಂಡರೆ ಚೆನ್ನ ಎಂದು ವಾಕರ್ ಸಲಹೆ ನೀಡಿದ್ದಾರೆ.

ತನ್ನ ಆತ್ಮಚರಿತ್ರೆ ಬರೆಯುವಾಗ ಅಫ್ರಿದಿ, ಯಾರೋ ಒಬ್ಬ ಆಟಗಾರ ತಾನು ಡಾನ್ ಬ್ರಾಡ್ಮನ್ ಮತ್ತು ಜೇಮ್ಸ್ ಬಾಂಡ್‌ನ ಮಿಶ್ರಣವೆಂಬಂತೆ ವರ್ತಿಸುತ್ತಾರೆ. ದೊಡ್ಡಸ್ತಿಕೆ ತೋರುವ ಆತನದ್ದು ಗಮನಾರ್ಹ ದಾಖಲೆಯೇನೂ ಇಲ್ಲ ಎಂಬಂತೆ ಬರೆದುಕೊಂಡಿದ್ದರು. ಇದು ಗೌತಮ್‌ ಅವರನ್ನು ಕೆಣಕಿತ್ತು.

ಎಲ್ಲಾ ಕ್ರಿಕೆಟ್ ಪಂದ್ಯಗಳೂ ಫಿಕ್ಸ್ಡ್: ಆರೋಪಿತ ಬುಕ್ಕಿ ಸಂಜೀವ್ ಚಾವ್ಲಾಎಲ್ಲಾ ಕ್ರಿಕೆಟ್ ಪಂದ್ಯಗಳೂ ಫಿಕ್ಸ್ಡ್: ಆರೋಪಿತ ಬುಕ್ಕಿ ಸಂಜೀವ್ ಚಾವ್ಲಾ

ಅಫ್ರಿದಿಗೆ ಪ್ರತಿಯಾಗಿ ಗಂಭೀರ್ ಕೂಡ, ನಿನ್ನನ್ನು ನಾನು ವೈಯಕ್ತಿಕವಾಗಿ ಮನೋವೈದ್ಯರ ಬಳಿಕ ಕರೆದೊಯ್ಯುವುದಾಗಿ ಹೇಳಿದ್ದರು. ಇಬ್ಬರ ಈ ಜಗಳ ದೀರ್ಘವಾಗಿ ಮುಂದುವರೆದಿತ್ತು. ಟ್ವಿಟರ್‌ನಲ್ಲಿ ಇಬ್ಬರೂ ಪರಸ್ಪರ ಟ್ವೀಟ್ ಸಮರ ಮಾಡಿಕೊಂಡಿದ್ದರು. ಇದನ್ನೇ ಉದ್ದೇಶಿಸಿ ಯೂನಿಸ್ ಇಬ್ಬರೂ ಎಲ್ಲೆ ಮೀರದಂತೆ ಸಲಹೆ ನೀಡಿದ್ದಾರೆ.

'ಬಹಳ ಕಾಲದಿಂದಲೂ ಗಂಭೀರ್ ಮತ್ತು ಅಫ್ರಿದಿ ನಡುವಿನ ವೈಮನಸ್ಸು ಮುಂದುವರೆದುಕೊಂಡು ಬಂದಿದೆ. ಇಬ್ಬರೂ ಒಳ್ಳೆಯವರು, ಸಂವೇದನಾಶೀಲರು, ತಾಳ್ಮೆಯುಳ್ಳವರು ಎಂಬುದು ನಾನು ಭಾವಿಸುತ್ತೇನೆ. ವಿಚಾರಗಳನ್ನು ಸಾಮಾಜಿಕ ಜಾಲತಾಣಕ್ಕೆ ತರಬಾರದು. ಸಾಮಾಜಿಕ ಜಾಲತಾಣವನ್ನು ಸಂವೇದನಾಶೀಲರಾಗಿ ಬಳಸಬೇಕು,' ಎಂದು ಯೂನಿಸ್ ಸಲಹೆ ನೀಡಿದ್ದಾರೆ.

Story first published: Monday, June 1, 2020, 16:17 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X