ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಸರಣಿಗೂ ಮುನ್ನ ಪ್ರತಿಜ್ಞೆ ಮಾಡಿದ ಡೇವಿಡ್ ವಾರ್ನರ್

Warner prefers his bat to do the talking against india series

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅಗ್ರೆಸ್ಸಿವ್ ಆಟಗಾರ ಎಂಬುದು ಎಲ್ಲರಿಗೂ ತಿಳಿದಿದೆ. ಅಂಗಳದಲ್ಲಿ ಎದುರಾಳಿಗಳನ್ನು ತಮ್ಮ ಮಾತಿನ ಮೂಲಕ ಅನೇಕ ಸಂದರ್ಭದಗಳಲ್ಲಿ ತಿವಿದಿದ್ದಾರೆ. ಆದರೆ ಭಾರತದ ವಿರುದ್ದದ ಸರಣಿಯಲ್ಲಿ ಡೇವಿಡ್ ವಾರ್ನರ್ ಪ್ರತಿಜ್ಷೆಯೊಂದನ್ನು ಮಾಡಿದ್ದಾರೆ.

ಹೌದು, ಡೇವಿಡ್ ವಾರ್ನರ್ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸಿದ್ದಾರೆ. ಅದರಲ್ಲೂ ಭಾರತದ ವಿರುದ್ದದ ಸರಣಿಯಲ್ಲಿ ತಾನು ತನ್ನ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಾಗಿ ಅವರು ಪ್ರತಿಜ್ಞೆಯನ್ನು ಮಾಡಿದ್ದಾರೆ. ಈ ಮೂಲಕ ಭಾರತದ ಸರಣಿಗೂ ಮುನ್ನ ವಾರ್ನರ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್

ಭಾರತದ ವಿರುದ್ಧದ ಸರಣಿಯಲ್ಲಿ ನಾನು ನನ್ನ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತೇನೆ. ವಿರಾಟ್ ಕೊಹ್ಲಿ ಪಡೆ ಮಾತಿನ ಮೂಲಕ ಕೆಣಕಿದರೂ ಕೂಡ ಅದಕ್ಕೆ ಬ್ಯಾಟ್‌ನಿಂದಲೇ ಉತ್ತರವನ್ನು ನೀಡುವುದಾಗಿ ಡೇವಿಡ್ ವಾರ್ನರ್ ಹೇಳಿಕೆಯನ್ನು ನೀಡಿದ್ದಾರೆ. ನಾವು ಕಳೆದ ಬಾರಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ ಭಾರತ ತಂಡ ಕೂಡ ನಮ್ಮನ್ನು ಇದೇ ರೀತಿಯ ತಂತ್ರವನ್ನು ಮಾಡಿತ್ತು ಎಂದಿದ್ದಾರೆ ವಾರ್ನರ್.

ನಾವು ಇದನ್ನು ಕಾಲಕ್ರಮೇಣ ಕಲಿಯುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ನಾನು. ಮಾತಿನ ಚಕಮಕಿಯ ಮೂಲಕ ನಮ್ಮನ್ನು ಕೆಣಕುವ ಪ್ರಯತ್ನ ಮಾಡಿದರೆ ಅದಕ್ಕೆ ಪ್ರತಿಯಾಗಿ ಬ್ಯಾಟ್‌ನಿಮದ ಉತ್ತರವನ್ನು ನೀಡಬೇಕು, ಆಗ ಎದುರಾಳಿಯ ಪ್ರಯತ್ನವನ್ನು ಹಿಮ್ಮೆಟ್ಟಿಸಬಹುದು ಎಂದು ವಾರ್ನರ್ ಹೇಳಿದ್ದಾರೆ.

ಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆ

ನೀವು ನಿಮ್ಮ ತಾಳ್ಮೆಯನ್ನು ಕಳೆದುಕೊಂಡರೆ ಅದರ ಒತ್ತಡ ತಂಡದ ಇತರ ಸದಸ್ಯರ ಮೇಲೆ ಬೀಳುತ್ತದೆ. ಹಾಗಾಗಿ ಎದುರಾಳಿ ತಂಡದ ಬಗ್ಗೆ ಮತ್ತಷ್ಟು ಗೌರವಯುತವಾಗಿ ಹಾಗೂ ವಿನಮ್ರವಾಗಿ ವರ್ತಿಸಬೇಕು ಎಂದು ಡೇವಿಡ್ ವಾರ್ನರ್ ಹೇಳಿಕೆಯನ್ನು ನೀಡಿದ್ದಾರೆ.

Story first published: Tuesday, November 24, 2020, 9:49 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X