ಹೆಚ್ಚು ರನ್ ಗಳಿಸಿದ್ದರೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು: ಗಂಗೂಲಿ

ಕೋಲ್ಕತ್ತಾ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷ, ಮಾಜಿ ನಾಯಕ ಸೌರವ್ ಗಂಗೂಲಿಗೆ 2007ರಲ್ಲಿ ಟೀಮ್ ಇಂಡಿಯಾದಿಂದ ಕೈಬಿಟ್ಟಿದ್ದನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಆವತ್ತು ತಾನು ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ್ದರೂ ತನ್ನನ್ನು ತಂಡದಿಂದ ಕೈಬಿಡಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 2003ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿದ್ದ ಭಾರತ ತಂಡ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿತ್ತು.

'ಒಬ್ಬ ಭಾರತೀಯನೂ ಸೇರಿ 3 ದಿಗ್ಗಜರ ವಿಕೆಟ್ ಪಡೆಯೋದು ನನ್ನ ಕನಸು'

ವಿಶ್ವಕಪ್ ಬಳಿಕ ತಂಡದಿಂದ ಬಹಳಷ್ಟು ಆಟಗಾರರನ್ನು ಕೈ ಬಿಡಲಾಗಿತ್ತು. 2015ರಲ್ಲಿ ಗ್ರೆಗ್ ಚಾಪೆಲ್ ತಂಡದ ತರಬೇತುದಾರರಾಗಿ ಆಯ್ಕೆಯಾಗೋ ವೇಳೆಗೆ ಗಂಗೂಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.

ಇಂಗ್ಲೆಂಡ್ vs ವಿಂಡೀಸ್: 1ನೇ ಟೆಸ್ಟ್‌ ವೇಳೆ ಗಮ್ಮತ್ತು ನಡೆದಿತ್ತು ಗಮನಿಸಿದ್ದೀರಾ?!

ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ ಸೌರವ್ ಗಂಗೂಲಿ, ತನ್ನ ವೃತ್ತಿ ಜೀವನದ ಕೆಟ್ಟ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಗಂಗೂಲಿ ಬ್ಯಾಟಿಂಗ್ ಅಬ್ಬರ

ಗಂಗೂಲಿ ಬ್ಯಾಟಿಂಗ್ ಅಬ್ಬರ

2003ರ ವಿಶ್ವಕಪ್‌ ಬಳಿಕ ತಂಡದಿಂದ ಹೊರಗಿಟ್ಟು, ನಾಯಕತ್ವದಿಂದ ಕೆಳಗಿಸಲಾಗಿದ್ದರೂ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮತ್ತೆ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡಿದ್ದ ಎಡಗೈ ಬ್ಯಾಟ್ಸ್‌ಮನ್-ಬಂಗಾಳ ಹುಲಿ ಗಂಗೂಲಿ, ಬ್ಯಾಟಿಂಗ್ ಅಬ್ಬರ ನಡೆಸಿದ್ದರು. ಹೆಚ್ಚಿನ ರನ್ ಗಳಿಸಲಾರಂಭಿಸಿದ್ದರು.

ದಾದಾ, ದ್ರಾವಿಡ್‌ಗೆ ಕೊಕ್

ದಾದಾ, ದ್ರಾವಿಡ್‌ಗೆ ಕೊಕ್

ಉತ್ತಮ ಪ್ರದರ್ಶನ ನೀಡಿಯೂ 2007-08ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸೌರವ್ ಗಂಗೂಲಿ ಮತ್ತು ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿತ್ತು. ಆಗ ಎಂಎಸ್ ಧೋನಿ ತಂಡದ ನಾಯಕರಾಗಿದ್ದರು. ಅದಾಗಿ ಒಂದು ವರ್ಷ ಕಳೆಯುತ್ತಲೇ ಗಂಗೂಲಿ ನಿವೃತ್ತಿ ಘೋಷಿಸಿದ್ದರು.

ವೇದಿಕೆಯನ್ನೇ ಕಿತ್ತುಕೊಳ್ಳಲಾಯಿತು

ವೇದಿಕೆಯನ್ನೇ ಕಿತ್ತುಕೊಳ್ಳಲಾಯಿತು

ಬೆಂಗಾಲ್ ಡೈಲಿಯೊಂದರ ಜೊತೆ ಮಾತನಾಡಿದ ಗಂಗೂಲಿ, 'ಇದೊಂಥರಾ ನಂಬಲಾಗದ್ದು. ಆ ಕ್ಯಾಲೆಂಡರ್ ವರ್ಷದಲ್ಲಿ ನಾನು ಅತ್ಯಧಿಕ ರನ್ ಗಳಿಸಿದ್ದರೂ 2007ರಲ್ಲಿ ನನ್ನನ್ನು ತಂಡದಿಂದ ಕೈಬಿಡಲಾಯಿತು. ನೀವೆಷ್ಟೇ ಪ್ರತಿಭಾವಂತಾಗಿದ್ದರೂ ನಿಮ್ಮಿಂದ ವೇದಿಕೆಯನ್ನೇ ಕಿತ್ತುಕೊಂಡರೆ ನಿಮ್ಮ ಪ್ರತಿಭೆಯನ್ನು ನೀವು ಹೇಗೆ ಸಾಬೀತುಪಡಿಸುತ್ತೀರಿ? ಇದು ಬೇರ್ಯಾರಿಗೂ ಅಲ್ಲ, ನನಗೇ ಆಗಿತ್ತು,' ಎಂದಿದ್ದಾರೆ.

ಖಂಡಿತಾ ಹೆಚ್ಚು ರನ್ ಗಳಿಸುತ್ತಿದ್ದೆ

ಖಂಡಿತಾ ಹೆಚ್ಚು ರನ್ ಗಳಿಸುತ್ತಿದ್ದೆ

'ಆವತ್ತು ನನಗೆ ಏಕದಿನದಲ್ಲಿ ಇನ್ನೆರಡು ಸರಣಿಗಳಲ್ಲಿ ಆಡಲು ಅವಕಾಶ ನೀಡಿದ್ದರೆ ನಾನು ಇನ್ನೂ ಹೆಚ್ಚಿಗೆ ರನ್ ಗಳಿಸುತ್ತಿದ್ದೆ. ನಾನೊಂದು ವೇಳೆ ನಾಗ್ಪುರದಲ್ಲಿ (ನವೆಂಬರ್ 2008ರಲ್ಲಿ) ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸದಿದ್ದರೆ ಮುಂದಿನ ಎರಡು ಟೆಸ್ಟ್ ಸರಣಿಗಳಲ್ಲೂ ಹೆಚ್ಚಿನ ರನ್ ಗಳಿಸುತ್ತಿದ್ದೆ,' ಎಂದು 48ರ ಹರೆಯದ ಗಂಗೂಲಿ ಹೇಳಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, July 17, 2020, 18:37 [IST]
Other articles published on Jul 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X