ವೇಗವನ್ನು ಹೆಚ್ಚಿಸಲು ಮಾದಕ ದ್ರವ್ಯ ಬಳಸಲು ಒತ್ತಾಯಿಸಿದ್ದರು: ಶೋಯೆಬ್ ಅಖ್ತರ್

ಪಾಕಿಸ್ತಾನ ಕ್ರಿಕೆಟ್‌ನ ದಿಗ್ಗಜ ಬೌಲರ್ ಶೋಯೆಬ್ ಅಖ್ತರ್ ಕ್ರಿಕೆಟ್‌ನ ಅತ್ಯಂತ ವೇಗದ ಬೌಲರ್ ಎನಿಸಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಲು ತನಗೆ ಅನೇಕ ಸಂದರ್ಭಗಳಲ್ಲಿ ಡ್ರಗ್ಸ್ ಸೇವನೆಗೆ ಒತ್ತಾಯಿಸಲಾಗಿತ್ತು ಎಂಬ ಸಂಗತಿಯನ್ನು ಶೋಯೆಬ್ ಅಖ್ತರ್ ಬಹಿರಂಗಪಡಿಸಿದ್ದಾರೆ.

ಉದ್ದೀಪನ ಮದ್ದು ಸೇವನೆ ಮಾಡದ ಹೊರತು ಬೌಲಿಂಗ್‌ನ ವೇಗ ಹೆಚ್ಚಿಸಲು ಸಾದ್ಯವಿಲ್ಲ. ಹೀಗಾಗಿ ನೀನು ಡಗ್ಸ್ ಸೇವನೆ ಮಾಡು ಎಂಬ ಸಲಹೆಗಳು ತನಗೆ ಅನೇಕ ಸಂದರ್ಭಗಳಲ್ಲಿ ಬಂದಿತ್ತು. ಆದರೆ ಪ್ರತಿ ಬಾರಿಯೂ ನಾನು ಅದನ್ನು ನಿರಾಕರಿಸಿದ್ದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಇಬ್ಬರು ಕನ್ನಡಿಗರನ್ನು ಪ್ರಮುಖ ಆಟಗಾರರ ಅಲಭ್ಯತೆಯನ್ನು ತುಂಬಬಲ್ಲ ಆಟಗಾರರು ಎಂದ ಸ್ಟೀವ್ ಸ್ಮಿತ್

ಪ್ರಥಮ ದರ್ಜೆ ಕ್ರಿಕೆಟಿಗರ ಭವಿಷ್ಯ ಅಂತ್ಯವಾಗಿದೆ

ಪ್ರಥಮ ದರ್ಜೆ ಕ್ರಿಕೆಟಿಗರ ಭವಿಷ್ಯ ಅಂತ್ಯವಾಗಿದೆ

ಪಾಕಿಸ್ತಾನದ ಮಾದಕವಸ್ತು ವಿರೋಧಿ ಪಡೆ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡುದ್ದ ಶೋಯೆಬ್ ಅಖ್ತರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಾದಕ ವಸ್ತುಗಳ ಕಾರಣಕ್ಕೆ ಕೆಲ ಪ್ರಥಮದರ್ಜೆ ಕ್ರಿಕೆಟಿಗರ ಭವಿಷ್ಯ ಅಂತ್ಯ ಕಂಡಿದೆ ಎಂದ ಅಖ್ತರ್ ಯಾವುದೇ ಆಟಗಾರರ ಹೆಸರನ್ನು ಬಹಿರಂಗಪಡಿಸಲಿಲ್ಲ.

ವೇಗ ಗಳಿಸಲು ಉದ್ದೀಪನ ಬಳಸಲೇಬೇಕು

ನಾನು ಕ್ರಿಕೆಟ್ ಪ್ರಾರಂಭಿಸಿದಾಗ ನಿಮಗೆ ವೇಗವಾಗಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಗಂಟೆಗೆ 100 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಲು ನೀವು ಡಗ್ಸ್‌ಗಳನ್ನು ಬಳಸಬೇಕಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ನಾನು ಅದನ್ನು ನಿರಾಕರಿಸುತ್ತಿದ್ದೇನೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಅತ್ಯಂತ ವೇಗದ ಬೌಲಿಂಗ್ ದಾಖಲೆ

ಅತ್ಯಂತ ವೇಗದ ಬೌಲಿಂಗ್ ದಾಖಲೆ

ಏಕದಿನ ಕ್ರಿಕೆಟ್‌ನಲ್ಲಿ ಶೋಯೆಬ್ ಅಖ್ತರ್ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ಬೌಲರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. 2002ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಖ್ತರ್ ಗಂಟೆಗೆ 161 ಕಿಮಿ ವೇಗದಲ್ಲಿ ಬೌಲಿಂಗ್ ಮಾಡಿದ್ದು ದಾಖಲೆಯಾಗಿ ಉಳಿದಿದೆ. ವೃತ್ತಿ ಜೀವನದಲ್ಲಿ 151 khpಗಿಂತ ವೇಗದ ಬೌಲಿಂಗ್‌ಅನ್ನು ಅಖ್ತರ್ ನಿರಂತರವಾಗಿ ಮಾಡಿಕೊಂಡಿ ಬಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, November 24, 2020, 20:17 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X