ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎದುರಾಳಿಯನ್ನು ಕಾಡುತ್ತಿದೆ RCB ಸ್ಪಿನ್ ಜೋಡಿ: ಚಹಾಲ್‌ ಜೊತೆಗೆ ಬೌಲಿಂಗ್ ಮಾಡುವುದೇ ದೊಡ್ಡ ಸಂತೋಷ ಎಂದ ಸುಂದರ್

Washington Sundar Enjoys Bowling With Yuzvendra Chahal

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವಳಿ ಸ್ಪಿನ್ನರ್‌ಗಳಾದ ಯುಜವೇಂದ್ರ ಚಹಾಲ್ ಮತ್ತು ವಾಷಿಂಗ್ಟನ್ ಸುಂದರ್ ಬೊಂಬಾಟ್ ಪ್ರದರ್ಶನ ತೋರುತ್ತಿದ್ದಾರೆ. ಎದುರಾಳಿಗೆ ಸಿಂಹಸ್ವಪ್ನವಾಗಿರುವ ಈ ಲೆಗ್‌ ಸ್ಪಿನ್ ಹಾಗೂ ಆಫ್ ಸ್ಪಿನ್ ಜೋಡಿ ಆರ್‌ಸಿಬಿ ಬೌಲಿಂಗ್ ಶಕ್ತಿಯಾಗಿ ರೂಪುಗೊಂಡಿದ್ದಾರೆ.

ಆರ್‌ಸಿಬಿಯ ಕೀ ಪ್ಲೇಯರ್‌ ಆಗಿರುವ ಯುಜವೇಂದ್ರ ಚಹಾಲ್ ವಿಕೆಟ್ ಬೇಟೆಯಾಡುವುದರಲ್ಲಿ ನಿಸ್ಸೀಮ. ಆದರೆ ವಾಷಿಂಗ್ಟನ್ ಸುಂದರ್ ಅವರಷ್ಟು ವಿಕೆಟ್ ಗಳಿಸಿಲ್ಲವಾದರೂ, ರನ್‌ಗಳನ್ನು ಬಿಟ್ಟುಕೊಡದೆ ಎದುರಾಳಿಯನ್ನು ಕಾಡಬಲ್ಲರು. ಈ ಜೋಡಿ ಒಟ್ಟಾಗಿ ಬೌಲಿಂಗ್ ಮಾಡುವ ರೀತಿ ಆರ್‌ಸಿಬಿಗೆ ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರಿದ್ದು, ತಂಡದಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ.

ಏಳು ಪಂದ್ಯದಲ್ಲಿ 4.90 ರ ಎಕಾನಮಿ ರೇಟ್

ಏಳು ಪಂದ್ಯದಲ್ಲಿ 4.90 ರ ಎಕಾನಮಿ ರೇಟ್

ವಾಷಿಂಗ್ಟನ್ ಸುಂದರ್ ಏಳು ಪಂದ್ಯಗಳಿಂದ 4.90 ರ ಎಕಾನಮಿ ರೇಟ್ ಹೊಂದಿದ್ದಾರೆ, ತಂಡದ ಸಹ ಆಟಗಾರ ಕ್ರಿಸ್ ಮೋರಿಸ್ (4.50) ಮಾತ್ರ ಉತ್ತಮರಾಗಿದ್ದಾರೆ. ಆದರೆ ಅವರು ಕೇವಲ ಎರಡು ಪಂದ್ಯಗಳನ್ನು ಆಡಿದ್ದಾರೆ.

ಒಂದೇ ಬೌಂಡರಿಗೆ ಕೊಹ್ಲಿ ಸಂಭ್ರಮ, ಟ್ವಿಟರ್‌ನಲ್ಲಿ ಟ್ರೋಲ್ ಆದ ವಿರಾಟ್

ಕೆಕೆಆರ್ ವಿರುದ್ಧ 2 ವಿಕೆಟ್ ಪಡೆದ ಸುಂದರ್

ಕೆಕೆಆರ್ ವಿರುದ್ಧ 2 ವಿಕೆಟ್ ಪಡೆದ ಸುಂದರ್

ಸೋಮವಾರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ ಕೇವಲ 20 ರನ್ ನೀಡಿದ ಸುಂದರ್ 2 ವಿಕೆಟ್ ಕಬಳಿಸಿದ್ರು. ನಿತೀಶ್ ರಾನಾ, ಇಯಾನ್ ಮಾರ್ಗನ್‌ರಂತಹ ಸ್ಫೋಟಕ ಆಟಗಾರರನ್ನು ತನ್ನ ಖೆಡ್ಡಾದಲ್ಲಿ ಕೆಡವಿದ.

"ನಾನು ವಿಷಯಗಳನ್ನು ಸರಳವಾಗಿ ಇರಿಸಲು ಬಯಸುತ್ತೇನೆ, ಅದು ಮತ್ತೆ ಮತ್ತೆ, ಈ ನಿರ್ದಿಷ್ಟ ಋತುವಿನಲ್ಲಿ ನನಗೆ ಕೆಲಸ ಮಾಡುತ್ತಿದೆ. ನಾವು ಶಾರ್ಜಾದಲ್ಲಿ ಆಡುತ್ತಿದ್ದ ಕಾರಣ ನಾನು ಹಲವಾರು ವಿಷಯಗಳನ್ನು ಪ್ರಯತ್ನಿಸಲು ಬಯಸಲಿಲ್ಲ'' ಎಂದು ಆರ್‌ಸಿಬಿಯ 82 ರನ್‌ಗಳ ಗೆಲುವಿನ ನಂತರ ಸುಂದರ್ ಹೇಳಿದರು.

 ಚಹಾಲ್‌ಗೆ ಸಖತ್ತಾದ ಜೋಡಿ ಈ ತಮಿಳುನಾಡು ಆಫ್‌ಸ್ಪಿನ್ನರ್

ಚಹಾಲ್‌ಗೆ ಸಖತ್ತಾದ ಜೋಡಿ ಈ ತಮಿಳುನಾಡು ಆಫ್‌ಸ್ಪಿನ್ನರ್

ಯುಜವೇಂದ್ರ ಚಹಾಲ್ ಆರ್‌ಸಿಬಿಯ ಪ್ರಮುಖ ಬೌಲಿಂಗ್ ಶಕ್ತಿಯಾಗಿದ್ದು, ಪ್ರತಿ ಪಂದ್ಯದಲ್ಲೂ ತಂಡದ ಕೀ ಪ್ಲೇಯರ್ ಆಗಿ ಗುರುತಿಸಿಕೊಳ್ಳುತ್ತಾರೆ. ಕೆಕೆಆರ್ ವಿರುದ್ಧ ನಾಲ್ಕು ಓವರ್ ಮಾಡಿ ಕೇವಲ 12ರನ್ ನೀಡಿದ ಚಹಾಲ್, ಒಂದು ವಿಕೆಟ್ ಕಬಳಿಸಿ ತನ್ನ ತಾಕತ್ತನ್ನು ಪ್ರದರ್ಶಿಸಿದ್ರು. ಈ ಸೀಸನ್‌ನಲ್ಲಿ ವಾಷಿಂಗ್ಟನ್ ಸುಂದರ್ ಬೌಲಿಂಗ್ ಕೂಡ ತುಂಬಾ ಪರಿಣಾಮಕಾರಿಯಾಗಿದ್ದು, ಚಹಾಲ್‌ಗೆ ಸಖತ್ ಜೋಡಿಯಾಗಿದೆ.

ಚೇತರಿಸಿಕೊಂಡ ಗೇಲ್, ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ

ಚಹಾಲ್ ಜೊತೆ ಬೌಲಿಂಗ್ ಮಾಡುವುದೇ ಒಂದು ಸಂತಸ

ಚಹಾಲ್ ಜೊತೆ ಬೌಲಿಂಗ್ ಮಾಡುವುದೇ ಒಂದು ಸಂತಸ

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಎಲ್ಲಾ ಬೌಲರ್‌ಗಳು ಕನಿಷ್ಠ ಒಂದು ವಿಕೆಟ್ ಪಡೆದುಕೊಂಡಿದ್ದರಿಂದ ಆರ್‌ಸಿಬಿ ಎದುರಾಳಿಯನ್ನ ಕೇವಲ 112 ರನ್‌ಗಳಿಗೆ ಕಟ್ಟಿ ಹಾಕಿತು. ನವದೀಪ್ ಸೈನಿ, ಉದಾನ, ಸಿರಾಜ್ ತಮ್ಮ ಬೌಲಿಂಗ್ ಕೋಟಾ ಕೂಡ ಮುಗಿಸದೇ ಕೆಕೆಆರ್ ಇನ್ನಿಂಗ್ಸ್‌ ಮುಗಿಯಿತು.

ಆದರೆ ಸ್ಪಿನ್ ಜೋಡಿಗಳ ಜೊತೆ ಕ್ರಿಸ್ ಮೋರಿಸ್ ನಾಲ್ಕು ಓವರ್‌ಗಳನ್ನು ಅಂತಿಮಗೊಳಿಸಿದರು. ಆದರೆ ಇಲ್ಲಿ ಅತ್ಯಂತ ಯಶಸ್ವಿಯಾಗಿ ಗುರುತಿಸಿಕೊಂಡಿದ್ದು ಚಹಾಲ್-ಸುಂದರ್ ಜೋಡಿ.

"ಈ ನಿರ್ದಿಷ್ಟ ಋತುವಿನಲ್ಲಿ ಪಂದ್ಯಾವಳಿಯ ಮಧ್ಯದ ಹಂತದಲ್ಲಾದರೂ ಸ್ಪಿನ್ನರ್‌ಗಳು ಸಾಕಷ್ಟು ಪರಿಣಾಮಕಾರಿ ಪ್ರದರ್ಶನ ತೋರುತ್ತೇವೆ ಎಂದು ನಮಗೆ ತಿಳಿದಿತ್ತು ಮತ್ತು ಚಹಾಲ್ ಅವರೊಂದಿಗೆ ಒಟ್ಟಾಗಿ ಬೌಲಿಂಗ್ ಮಾಡಲು ನನಗೆ ತುಂಬಾ ಸಂತೋಷವಾಗಿದೆ'' ಎಂದು ವಾಷಿಂಗ್ಟನ್ ಸುಂದರ್ ಹೇಳಿದ್ದಾರೆ.

ಒಟ್ನಲ್ಲಿ ಈ ಲೆಗ್ ಸ್ಪಿನ್-ಆಫ್ ಸ್ಪಿನ್ ಜೋಡಿ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ತೋರುತ್ತಿರುವುದು ಕ್ಯಾಪ್ಟನ್ ಕೊಹ್ಲಿಗೆ ಸಂತಸದ ಜೊತೆಗೆ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ.

Story first published: Tuesday, October 13, 2020, 17:44 [IST]
Other articles published on Oct 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X