ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಪರ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕನಸು ವ್ಯಕ್ತಪಡಿಸಿದ ವಾಶಿಂಗ್ಟನ್ ಸುಂದರ್

Washington Sundar ready to open innings for team india in test

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದು ಸ್ಮರಣೀಯ ಪದಾರ್ಪಣೆ ಮಾಡಿದ ಯುವ ಆಟಗಾರ ವಾಶಿಂಗ್ಟನ್ ಸುಂದರ್ ಸರಣಿ ಗೆಲುವಿನಲ್ಲಿ ಉತ್ತಮ ಕೊಡುಗೆ ನೀಡಿ ಮಿಂಚಿದ್ದರು. ಈ ಮೂಲಕ ಬ್ಯಾಟ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಟೀಮ್ ಇಂಡಿಯಾಗೆ ಭವಿಷ್ಯದ ತಾರೆಯಾಗುವ ಭರವಸೆ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ವಾಶಿಂಗ್ಟನ್ ಸುಂದರ್ ಹೊಸ ಕನಸೊಂದನ್ನು ವ್ಯಕ್ತಪಡಿಸಿದ್ದಾರೆ.

"ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ದೊರೆತರೆ ಅದು ನನ್ನ ಜೀವನದಲ್ಲಿ ದೊರೆಯ ದೊಡ್ಡ ಆಶೀರ್ವಾದ ಎಂದು ಭಾವಿಸುತ್ತೇನೆ. ಬಹುಶಃ ನನ್ನ ಕೋಚ್ ರವಿ ಶಾಸ್ತ್ರಿ ಅವರಂತೆಯೇ ಆವರ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಎದುರಿಸಿದಂತೆಯೇ ಸವಾಲುಗಳನ್ನು ನಾನು ಸ್ವೀಕರಿಸಬಲ್ಲವನಾಗಿದ್ದೇನೆ" ಎಂದು ವಾಶಿಂಗ್ಟನ್ ಸುಂದರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಚೇತೇಶ್ವರ ಪೂಜಾರ ಟೆಸ್ಟ್ ದಾಖಲೆಗಳು, ಅಚ್ಚರಿಯ ಅಂಕಿ-ಅಂಶಗಳು!ಚೇತೇಶ್ವರ ಪೂಜಾರ ಟೆಸ್ಟ್ ದಾಖಲೆಗಳು, ಅಚ್ಚರಿಯ ಅಂಕಿ-ಅಂಶಗಳು!

ಈ ಸಂದರ್ಭದಲ್ಲಿ ವಾಶಿಂಗ್ಟನ್ ಸುಂದರ್, ಹಾಲಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ತಮ್ಮ ಆಟದ ದಿನಗಳ ಸಮಯದ ಬಹಳ ಸ್ಪೂರ್ತಿದಾಯಕ ಕಥೆಗಳನ್ನು ಹೇಳುವ ಮೂಲಕ ಆಟಗಾರರನ್ನು ಹೇಗೆ ಪ್ರೇರೇಪಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದರು. ತಮ್ಮ ಆಡುವ ಸಮಯದ ಸ್ಪೂರ್ತಿದಾಯಕ ಕತೆಗಳನ್ನು ನಮ್ಮ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿ ಸ್ಪೂರ್ತಿ ತುಂಬುತ್ತಾರೆ ಎಂದಿದ್ದಾರೆ ವಾಶಿಂಗ್ಟನ್ ಸುಂದರ್.

"ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅವರು ಸ್ಪಿನ್ ಬೌಲಿಂಗ್ ಸ್ಪೆಶಲಿಸ್ಟ್ ಆಗಿ ಕಣಕ್ಕಿಳಿದಿದ್ದರು, ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು. ಬ್ಯಾಟಿಂಗ್‌ನಲ್ಲಿ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಲ್ಲಿಂದ ಅವರು ಹೇಗೆ ಟೆಸ್ಟ್ ಕ್ರಿಕೆಟ್‌ನ ಆರಂಭಿಕ ಬ್ಯಾಟ್ಸ್‌ಮನ್ ಆಗಿ ರೂಪುಗೊಂಡು ಶ್ರೇಷ್ಠವಾದ ವೇಗಿಗಳ ಎಸೆತಗಳನ್ನು ಎದುರಿಸಿದರು ಎಂಬುದನ್ನು ವಿವರಿಸಿದ್ದಾರೆ. ನಾನು ಕೂಡ ಅವರಂತೆಯೇ ಟೆಸ್ಟ್ರ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವುದನ್ನು ಇಷ್ಟಪಡಡುತ್ತೇನೆ" ಎಂದಿದ್ದಾರೆ ವಾಶಿಂಗ್ಟನ್ ಸುಂದರ್.

ಚೇತೇಶ್ವರ ಪೂಜಾರ ಹುಟ್ಟುಹಬ್ಬ, 'ವಾಲ್‌2'ಗೆ ಶುಭಾಶಯಗಳ ಮಹಾಪೂರಚೇತೇಶ್ವರ ಪೂಜಾರ ಹುಟ್ಟುಹಬ್ಬ, 'ವಾಲ್‌2'ಗೆ ಶುಭಾಶಯಗಳ ಮಹಾಪೂರ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚುಹರಿಸಿದ ವಾಶಿಂಗ್ಟನ್ ಸುಂದರ್ ನಿರೀಕ್ಷೆಯಂತೆಯೇ ಫೆಬ್ರವರಿ 5 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಆಸಿಸ್ ನೆಲದಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಸುಂದರ್ ಭಾರತದ ನೆಲದಲ್ಲೇ ನಡೆಯುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದ್ದಾರೆ.

Story first published: Monday, January 25, 2021, 16:13 [IST]
Other articles published on Jan 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X