ವಾಷಿಂಗ್ಟನ್ ಸುಂದರ್‌ಗೆ ಮತ್ತೆ ಇಂಜ್ಯುರಿ: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ಔಟ್‌?

ಟೀಂ ಇಂಡಿಯಾ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲು ಸಾಕಷ್ಟು ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಮತ್ತೆ ಇಂಜ್ಯುರಿಗೆ ಒಳಗಾಗಿದ್ದು, ಮುಂಬರುವ ಜಿಂಬಾಬ್ವೆ ಸರಣಿಯಲ್ಲಿ ಆಡುವುದು ಬಹುತೇಕ ಅನುಮಾನವಾಗಿದೆ.

ರಾಯಲ್ ಲಂಡನ್ ಏಕದಿನ ಚಾಂಪಿಯನ್‌ಶಿಪ್‌ನಲ್ಲಿ ಲ್ಯಾಂಕಶೈರ್ ಇನ್ ಪರ ಆಡುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಬುಧವಾರ ಫೀಲ್ಡಿಂಗ್ ವೇಳೆಯಲ್ಲಿ ಭುಜಕ್ಕೆ ಪೆಟ್ಟಾಗಿದ್ದು, ಪಂದ್ಯದಿಂದ ಕೂಡ ಹೊರನಡೆದಿದ್ದಾರೆ.

ಪ್ರಾಥಮಿಕ ಚಿಕಿತ್ಸೆ ಪಡೆದು ಸ್ಕ್ಯಾನಿಂಗ್‌ಗೆ ಒಳಗಾದ ವಾಷಿಂಗ್ಟನ್ ಸುಂದರ್

ಪ್ರಾಥಮಿಕ ಚಿಕಿತ್ಸೆ ಪಡೆದು ಸ್ಕ್ಯಾನಿಂಗ್‌ಗೆ ಒಳಗಾದ ವಾಷಿಂಗ್ಟನ್ ಸುಂದರ್

ಮೂರನೇ ಪಂದ್ಯದಲ್ಲಿ ವೋರ್ಸೆಸ್ಟರ್‌ಶೈರ್ ಎದುರು ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಡೈವ್ ಮಾಡಿದ ವಾಷಿಂಗ್ಟನ್ ಸುಂದರ್ ಇಂಜ್ಯುರಿಗೆ ತುತ್ತಾಗಿದ್ದು, ಕೂಡಲೇ ಅಲ್ಲಿಯೇ ಚಿಕಿತ್ಸೆ ಪಡೆದು ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಆದ್ರೆ ಸುಂದರ್‌ ಭುಜಕ್ಕೆ ಎಷ್ಟರ ಮಟ್ಟಿಗೆ ತೀವ್ರ ಗಾಯಗೊಂಡಿದೆ ಎಂಬುದಷ್ಟೇ ಮುಂದಿನ ದಿನಗಳಲ್ಲಿ ಬಹಿರಂಗವಾಗಬೇಕಿದೆ. 22 ವರ್ಷದ ಸುಂದರ್ ಇಂಜ್ಯುರಿಯಿಂದ ಚೇತರಿಸಿಕೊಂಡು ಕೆಲವೇ ವಾರಗಳಷ್ಟೇ ಉರುಳಿದ್ದವು.

ಏಷ್ಯಾಕಪ್‌ನಲ್ಲಿ ಭಾರತವನ್ನು ಮುನ್ನಡೆಸಿರುವ ಒಟ್ಟು 8 ನಾಯಕರಲ್ಲಿ ಕಪ್ ಗೆಲ್ಲಿಸಲಾಗದೇ ಸೋತವರು!

ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಸುಂದರ್

ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಸುಂದರ್

ಹೌದು ವಾಷಿಂಗ್ಟನ್ ಸುಂದರ್ ಸುಮಾರು ಒಂದು ವರ್ಷಕ್ಕೂ ಅಧಿಕ ಸಮಯದಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಕೊನೆಯದಾಗಿ ಮಾರ್ಚ್ 2021 ರಲ್ಲಿ ಭಾರತಕ್ಕಾಗಿ ಆಡಿದ್ದರು. ಗಾಯಗಳ ಕಾರಣ ತಂಡದಿಂದ ಹೊರಬಿದ್ದ ಬಳಿಕ ಚೇತರಿಸಿಕೊಂಡರು ಮತ್ತು ವಿಜಯ್ ಹಜಾರೆ ಟ್ರೋಫಿಗಾಗಿ ತಮಿಳುನಾಡು ತಂಡದ ಭಾಗವಾಗಿದ್ದರು.

ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಇವರನ್ನ ಇದೇ ವರ್ಷ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದ್ರೆ ದುರಾದೃಷ್ಟವಶಾತ್ ಸುಂದರ್ ಕೋವಿಡ್‌-19 ಪಾಸಿಟಿವ್ ಆದ ಕಾರಣ ದಕ್ಷಿಣ ಆಫ್ರಿಕಾ ಸರಣಿಯಿಂದ ವಂಚಿತರಾದರು. ಇದಾದ ಬಳಿಕ ತಂಡಕ್ಕೆ ಕಂಬ್ಯಾಕ್ ಮಾಡು ಕನಸು ಕಾಣುತ್ತಿದ್ದ ವಾಷಿಂಗ್ಟನ್ ಮುಂಬರುವ ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ರು.

ಹೆಚ್ಚಾಯ್ತು ಲೀಗ್‌ ಕ್ರಿಕೆಟ್‌ನ ಅಬ್ಬರ: ಬಿಸಿಸಿಐಗೆ ನಿದ್ದೆಗೆಡಿಸಿದೆ ಐಪಿಎಲ್ ಫ್ರಾಂಚೈಸಿಗಳ ಈ ನಡೆ!

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗಿದ್ದ ಸುಂದರ್

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗಿದ್ದ ಸುಂದರ್

ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆಗಸ್ಟ್‌ 18ರಂದು ಹರಾರೆಯಲ್ಲಿ ಪ್ರಾರಂಭಗೊಳ್ಳಲಿದೆ. ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾ ಸ್ಕ್ವಾಡ್‌ನಲ್ಲಿ ವಾಷಿಂಗ್ಟನ್ ಸುಂದರ್ ಕೂಡ ಅವಕಾಶ ಪಡೆದಿದ್ದರು. ಆದ್ರೆ ಈಗ ಭುಜದ ಇಂಜ್ಯುರಿಯಿಂದಾಗಿ ವಾಷಿಂಗ್ಟನ್ ಸುಂದರ್ ಜಿಂಬಾಬ್ವೆ ಸರಣಿಯಲ್ಲಿ ಭಾಗಿಯಾವುದು ಅನುಮಾನ ಮೂಡಿಸಿದೆ.

ಹೆಚ್ಚಾಯ್ತು ಲೀಗ್‌ ಕ್ರಿಕೆಟ್‌ನ ಅಬ್ಬರ: ಬಿಸಿಸಿಐಗೆ ನಿದ್ದೆಗೆಡಿಸಿದೆ ಐಪಿಎಲ್ ಫ್ರಾಂಚೈಸಿಗಳ ಈ ನಡೆ!

ಐಪಿಎಲ್ 2022ರ ಸೀಸನ್‌ ವೇಳೆ ಗಾಯಗೊಂಡಿದ್ದ ಸುಂದರ್

ಐಪಿಎಲ್ 2022ರ ಸೀಸನ್‌ ವೇಳೆ ಗಾಯಗೊಂಡಿದ್ದ ಸುಂದರ್

ಐಪಿಎಲ್ 2022ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡವನ್ನ ಪ್ರತಿನಿಧಿಸಿದ ವಾಷಿಂಗ್ಟನ್ ಸುಂದರ್ ಕೈ ಇಂಜ್ಯುರಿಯಿಂದ ಉಳಿದ ಪಂದ್ಯಗಳಲ್ಲಿ ಮಿಸ್ ಆಗಿದ್ದರು. ಚೇತರಿಸಿಕೊಂಡ ಬಳಿಕ ಆತ ಕಳೆದ ತಿಂಗಳಷ್ಟೇ ಲ್ಯಾಂಕಶೈರ್ ಪರ ಫಾರ್ಮ್‌ಗೆ ಮರಳಲು ಸೇರಿಕೊಂಡಿದ್ದರು. ಇಂಗ್ಲೀಷ್ ಕೌಂಟಿ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು.

ಅಂಡರ್-19 ಕ್ರಿಕೆಟ್ ಮೂಲಕ ಶೈನ್ ಆಗಿ ಟೀಂ ಇಂಡಿಯಾ ಸೇರಿದ ವಾಷಿಂಗ್ಟನ್ ಸುಂದರ್‌, ಡಿಸೆಂಬರ್ 13, 2017ರಲ್ಲಿ ಭಾರತ ಪರ ಪದಾರ್ಪಣೆ ಮಾಡಿದ್ದರು. ಇದುವರೆಗೂ 4 ಟೆಸ್ಟ್‌, 31 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಪರ ಆಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ ಪತ್ನಿ ದೀಪಿಕಾ ಪಲ್ಳಿಕಲ್ ಸಾಧನೆಗೆ ದಿನೇಶ್ ಕಾರ್ತಿಕ್ ಫಿದಾ | *Cricket
ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್‌

ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್‌

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.

For Quick Alerts
ALLOW NOTIFICATIONS
For Daily Alerts
Story first published: Thursday, August 11, 2022, 12:35 [IST]
Other articles published on Aug 11, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X