ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಮತ್ತು ತೆಂಡೂಲ್ಕರ್ ನಡುವಿನ ವ್ಯತ್ಯಾಸ ಹೇಳಿದ ವಾಸಿಮ್ ಅಕ್ರಮ್

Wasim Akram Explains Difference Between Kohli, Tendulkar

ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಶ್ರೇಷ್ಠತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಸಚಿನ್ ಮಾಡಿದ ಕೆಲ ದಾಖಲೆಗಳನ್ನು ವಿರಾಟ್ ಕೊಹ್ಲಿ ಈಗಾಗಲೆ ಮುರಿದಿದ್ದು ಕೆಲ ಪ್ರಮುಖ ದಾಖಲೆಗಳ ಬೆನ್ನತ್ತಿದ್ದಾರೆ. ಆದರೆ ಇನ್ನೂ ಕೆಲವು ದಾಖಲೆಗಳು ವಿರಾಟ್ ಕೊಹ್ಲಿಗೆ ಅಸಾಧ್ಯವೇನೋ ಅನ್ನುವಷ್ಟು ದೂರದಲ್ಲಿದೆ ಎನ್ನುವೂ ನಿಜ.

ಈ ಮಧ್ಯೆ ಪಾಕಿಸ್ತಾನದ ಮಾಜಿ ವೇಗಿ ವಾಸಿಮ್ ಅಕ್ರಮ್ ಸಚಿನ್ ಮತ್ತು ವಿರಾಟ್ ಕೊಹ್ಲಿ ಯಾವ ರೀತಿಯಾಗಿ ಭಿನ್ನವಾಗಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಆಡುವ ಕಾಲದಲ್ಲಿ ವಾಸಿಮ್ ಅಕ್ರಮ್ ಸಚಿನ್ ಸಾಕಷ್ಟು ಬಾರಿ ಬೌಲಿಂಗ್ ಮಾಡಿದ್ದಾರೆ. ಆದರೆ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕರೆ ಸಚಿನ್‌ಗಿಂತ ಹೆಚ್ಚಿನ ಬಾರಿ ಔಟ್ ಮಾಡುತ್ತಿದ್ದೆ ಎಂದಿದ್ದಾರೆ.

ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್

ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರ. ಸಚಿನ್ ಜೊತೆಗೆ ಹೋಲಿಕೆ ಮಾಡಿದರೆ ಇಬ್ಬರೂ ಭಿನ್ನ ಆಟಗಾರರು. ವಿರಾಟ್ ವೈಯಕ್ತಿಕವಾಗಿ ಮತ್ತು ಆಟಗಾರನಾಗಿ ಅಗ್ರೆಸ್ಸಿವ್ ವ್ಯಕ್ತಿ. ಅದು ಸಕಾರಾತ್ಮಕವಾಗಿ. ಆದರೆ ಸಚಿನ್ ಹಾಗಲ್ಲ, ಆತ ತಾಳ್ಮೆಯ ವ್ಯಕ್ತಿ. ಆತನ ಆಂಗಿಕ ಭಾಷೆಯೂ ಭಿನ್ನ ಎಂದು ಆಕಾಶ್ ಚೋಪ್ರಾ ಜೊತೆಗೆ ಯೂಟ್ಯೂಬ್ ಸಂವಾದದಲ್ಲಿ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರನ್ನು ಸ್ಲೆಡ್ಜ್ ಮಾಡಿದರೆ ಆತ ಹೆಚ್ಚಿನ ಧೃಡತೆಯನ್ನು ಪಡೆದುಕೊಳ್ಳುತ್ತಾರೆ ಇದು ನಾನು ಗಮನಿಸಿದ್ದು ಆದರೆ ವಿರಾಟ್ ಕೊಹ್ಲಿ ಹಾಗಲ್ಲ, ಕೊಹ್ಲಿಯನ್ನು ಕೆಣಕಿದರೆ ಆತ ಇನ್ನಷ್ಟು ಕೋಪಗೊಳ್ಳುತ್ತಾನೆ, ಆತನನ್ನು ಅಂತಾ ಸಂದರ್ಭದಲ್ಲಿ ವಿಚಲಿತಗೊಳಿಸಿ ವಿಕೆಟ್ ಪಡೆಯಲು ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದು ಅಕ್ರಮ್ ಹೇಳಿದ್ದಾರೆ.

ಆರ್ಥಿಕ ಸಂಕಷ್ಟದ ಭೀತಿಯಲ್ಲಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ!ಆರ್ಥಿಕ ಸಂಕಷ್ಟದ ಭೀತಿಯಲ್ಲಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ!

ಈವರೆಗಿನ ವಿರಾಟ್ ಕೊಹ್ಲಿಯ ಕೌಶಲ್ಯವನ್ನು ನೋಡಿದಾಗ ಆತ ಬೌಲರ್‌ಗಳ ಪಾಲಿಗೆ ಖಂಡಿತಾ ಸಿಂಹಸ್ವಪ್ನವಾಗಿ ಮುಂದುವರಿಯಲಿದ್ದಾರೆ. ನಾನು ಇಬ್ಬರನ್ನೂ ಹೋಲಿಕೆ ಮಾಡಲು ಬಯಸುವುದಿಲ್ಲ. ಆದರೆ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ, ಆದರೆ ಸಚಿನ್ ದಾಖಲೆಗಳನ್ನೆಲ್ಲಾ ಮುರಿಯುತ್ತಾರಾ ಎಂದು ಕೇಳಿದರೆ ನಾನು ಅನುಮಾನ ಪಡುತ್ತೇನೆ ಎಂದು ವಾಸಿಮ್ ಅಕ್ರಮ್ ಹೇಳಿದ್ದಾರೆ.

Story first published: Thursday, May 14, 2020, 10:59 [IST]
Other articles published on May 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X