ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್ಪ್ರೀತ್ ಬೂಮ್ರಾಗೆ ಅಮೂಲ್ಯ ಸಲಹೆ ನೀಡಿದ ಪಾಕ್ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್

Wasim Akram Feels That Jasprit Bumrah Shouldn’t Run After County Cricket

ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಮ್ ಅಕ್ರಮ್ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾಗೆ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಅವಕಾಶ ಸಿಕ್ಕಿತೆಂದು ಯಾವುದೇ ಕಾರಣಕ್ಕೂ ನೀನು ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.

ಈಗಾಗಲೇ ಜಸ್ಪ್ರೀತ್ ಬೂಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಮಾದರಿಯಲ್ಲೂ ಆಡುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಕೌಂಟಿ ಕ್ರಿಕೆಟ್ ಕೂಡ ಆಡಿದರೆ ಅವರು ಹೆಚ್ಚಿನ ಬಳಲಿಕೆಗೆ ಒಳಗಾಗುತ್ತಾರೆ. ಅದರ ಬದಲಾಗಿ ಸಮಯ ಸಿಕ್ಕಾಗ ವಿಶ್ರಾಂತಿಯನ್ನು ಪಡೆಯುವುದು ಸೂಕ್ತ ಎಂದು ಅಕ್ರಮ್ ಹೇಳಿದರು.

ಕೌಂಟಿಯಂತಾ ಅವಕಾಶಗಳು ಯುವ ಆಟಗಾರರಿಗೆ ಸೂಕ್ತ. ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಪ್ರಥಮ ದರ್ಜೆ ಕ್ರಿಕೆಟನ್ನು ಆಡಬೇಕು ಇದರಿಂದ ಯುವ ಆಟಗಾರರ ಪ್ರತಿಭೆಯ ಮಟ್ಟ ಸಾಕಷ್ಟು ಸುಧಾರಿಸುತ್ತದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಮ್ ಅಕ್ರಮ್ ಹೇಳಿದ್ದಾರೆ.

ಗಮನಿಸಬೇಕಾದ ಅಂಶವೇನೆಂದರೆ ಜಸ್ಪ್ರೀತ್ ಬೂಮ್ರಾ ಈವರೆಗೂ ಕೌಂಟಿ ಕ್ರಿಕೆಟ್‌ನ ಭಾಗವಾಗಿಲ್ಲ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬೂಮ್ರಾ ಐಪಿಎಲ್‌ನಲ್ಲು ಮಿಂಚುತ್ತಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ತಂಡದ ಪರವಾಗಿ ಬೂಮ್ರಾ ಆಡುತ್ತಿದ್ದಾರೆ. ತನ್ನ ನಿಖರ ಯಾರ್ಕರ್ ದಾಳಿಯ ಮೂಲಕ ಎದುರಾಳಿ ಬೌಲರ್‌ಗಳನ್ನು ಅವರು ಕಂಗೆಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಬಗ್ಗೆಯೂ ಹೇಳಿಕೊಂಡ ವಾಸಿಮ್ ಅಕ್ರಮ್ ತಮ್ಮ ಪ್ರತಿಭೆಯ ಬಗ್ಗೆ ಆರಂಭದಲ್ಲಿ ನನಗೆ ಅರಿವಿರಲಿಲ್ಲ ಎಂದು ಹೇಳಿದ್ದಾರೆ. ಇಮ್ರಾನ್ ಖಾನ್, ಜಾವೇದ್ ಮಿಯಾಂದಾದ್ ಮತ್ತು ಮುದಾಸ್ಸರ್ ನಜರ್ ನನ್ನ ಪ್ರತಿಭೆಯ ಬಗ್ಗೆ ಮಾತಿನಾಡಿಕೊಳ್ಳುತ್ತಿರುವುದುನ್ನು ಕೇಳಿಸಿಕೊಂಡಿದ್ದೆ ಎಂದರು. ಮತ್ತು ವೇಗದ ಬೌಲಿಂಗ್ ಜೊತೆಗೆ ಸ್ವಿಂಗ್ ಮಾಡುವ ಕಲೆಯನ್ನು ಅಭ್ಯಾಸ ಮಾಡುಕೊಳ್ಳುವಂತೆ ಇಮ್ರಾನ್ ಖಾನ್ ನನಗೆ ಸಲಹೆಯನ್ನು ನೀಡಿದ್ದರು ಎಂದು ಅಕ್ರಮ್ ನೆನಪಿಸಿಕೊಂಡಿದ್ದಾರೆ.

Story first published: Monday, May 11, 2020, 21:37 [IST]
Other articles published on May 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X