ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ್ ಪ್ರೀಮಿಯರ್ ಲೀಗ್‌ಗಿಂತ ಐಪಿಎಲ್ ಶ್ರೇಷ್ಠ: ಕಾರಣ ನೀಡಿದ ವಾಸಿಮ್ ಅಕ್ರಮ್

Wasim Akram Highlights Major Difference Between Two Major T20 Leagues

ಸದ್ಯ ಕ್ರಿಕೆಟ್‌ನಲ್ಲಿ ಟಿ20 ಲೀಗ್ ಟೂರ್ನಿಗಳು ಸಾಕಷ್ಟು ಸದ್ದು ಮಾಡುತ್ತಿದೆ. ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳು ತಮ್ಮದೇ ಆದ ಲೀಗ್‌ಗಳನ್ನು ಹೊಂದಿದ್ದು ಈ ಮೂಲಕ ಮನರಂಜನೆ ಹಾಗೂ ಆರ್ಥಿಕ ದೃಷ್ಟಿಯಿಂದ ಸಾಕಷ್ಟು ಲಾಭಗಳಿಸುತ್ತಿದೆ. ಆದರೆ ಇದರಲ್ಲಿ ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್ ಇತರ ಎಲ್ಲಾ ಲೀಗ್‌ಗಳು ಕಂಡಿಲ್ಲದ ಯಶಸ್ಸನ್ನು ಕಂಡು ಮುನ್ನುಗ್ಗುತ್ತಿದೆ.

ಇನ್ನು ಮತ್ತೊಂದೆಡೆ ಆಸ್ಟ್ರೇಲಿಯಾದ 'ಬಿಗ್ ಬ್ಯಾಷ್' ಟೂರ್ನಿ, ವೆಸ್ಟ್ ಇಂಡೀಸ್ ಮಂಡಳಿಯ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನದ ಪಾಕಿಸ್ತಾನ್ ಸೂಪರ್ ಲೀಗ್ ಇತರ ಕೆಲ ಪ್ರಮುಖ ಲೀಗ್‌ಗಳಾಗಿದೆ. ಆದರೆ ಈ ಲೀಗ್‌ಗಳ ಶ್ರೇಷ್ಠತೆಯ ವಿಚಾರವಾಗಿ ಸ್ವತಃ ಪಾಕಿಸ್ತಾನದ ಮಾಜಿ ನಾಯಕ ದಿಗ್ಗಜ ಬೌಲರ್ ವಾಸಿಮ್ ಅಕ್ರಮ್ ಐಪಿಎಲ್‌ಅನ್ನು ಹಾಡಿ ಹೊಗಳಿದ್ದಾರೆ.

ಐಪಿಎಲ್‌ನಲ್ಲಿ ಕಾಮೆಂಟೇಟರ್ ಆಗಿ ಸೇರಿಸಿಕೊಳ್ಳಿ: ಬಿಸಿಸಿಐ ಕೋರಿದ ಮಂಜ್ರೇಕರ್ಐಪಿಎಲ್‌ನಲ್ಲಿ ಕಾಮೆಂಟೇಟರ್ ಆಗಿ ಸೇರಿಸಿಕೊಳ್ಳಿ: ಬಿಸಿಸಿಐ ಕೋರಿದ ಮಂಜ್ರೇಕರ್

ಸ್ವತಃ ಪಾಕಿಸ್ತಾನ ಮಂಡಳಿ ಕ್ರಿಕೆಟ್ ಲೀಗ್ ಹೊಂದಿದ್ದರೂ ಬಿಸಿಸಿಐ ನೇತೃತ್ವದ ಐಪಿಎಲ್ ಎಲ್ಲಾ ಕ್ರಿಕೆಟ್ ಲೀಗ್‌ ಟೂರ್ನಿಗಳಿಗಿಂತ ಶ್ರೇಷ್ಠವಾಗಿದೆ ಎಂದಿದ್ದಾರೆ ವಾಸಿಮ್ ಅಕ್ರಮ್. ಅದಕ್ಕೆ ಅವರು ಸೂಕ್ತ ಕಾರಣವನ್ನೂ ನೀಡಿದ್ದಾರೆ. ಐಪಿಎಲ್‌ನಿಂದ ಗಳಿಸುವ ಆದಾಯವನ್ನ ಬಿಸಿಸಿಐ ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದ್ದು ಇದು ಅದರ ಶ್ರೇಷ್ಠತೆಯನ್ನು ಹೆಚ್ಚಿಸಿದೆ ಎಂದಿದ್ದಾರೆ.

ಐಪಿಎಲ್ ಹಾಗೂ ಪಿಎಸ್‌ಎಲ್ ಮಧ್ಯೆ ವ್ಯತ್ಯಾಸವಿದೆ. ಕಳೆದ ಐದಾರು ವರ್ಷಗಳಲ್ಲಿ ಈ ವ್ಯತ್ಯಾಸ ಸಾಕಷ್ಟು ದೊಡ್ಡದಾಗಿದೆ. ಅವರು ಸಾಕಷ್ಟು ಹಣವನ್ನು ಹೂಡಿದ್ದಾರೆ. ಹೀಗಾಗಿ ಐಪಿಎಲ್ ವಿಶ್ವದ ಅತಿ ದೊಡ್ಡ ಪಂದ್ಯಾವಳಿ ಎನಿಸಿದೆ ಎಂದು ವಾಸಿಮ್ ಅಕ್ರಮ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ': ನ್ಯೂಜಿಲೆಂಡ್ ಮಾರಕ ವೇಗಿ'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ': ನ್ಯೂಜಿಲೆಂಡ್ ಮಾರಕ ವೇಗಿ

ಆದರೆ ಐಪಿಎಲ್‌ನಿಂದ ಬರುವ ಆದಾಯವನ್ನು ಬಿಸಿಸಿಐ ಭಾರತದ ಪ್ರಥಮ ದರ್ಜೆ ಕ್ರಿಕೆಟ್ ಮೇಲೆ ಹೂಡುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಯುವ ಕ್ರಿಕೆಟಿಗರನ್ನು ಪ್ರೋತ್ಸಾಹಿಸಲು ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ಭಾರತದಲ್ಲಿ ಯುವ ಪ್ರತಿಭೆಗಳು ಬಹಳ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ವಾಸಿಮ್ ಅಕ್ರಮ್ ಐಪಿಎಲ್‌ನಲ್ಲಿ ಕೆಕೆಆರ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ

Story first published: Friday, July 31, 2020, 15:35 [IST]
Other articles published on Jul 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X