ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ವೇಗಿ ಮೊಹಮ್ಮದ್ ಅಮೀರ್ ಮೇಲೆ ಸಿಡುಕಾಡಿದ ಅಕ್ರಮ್, ಅಖ್ತರ್!

Wasim Akram, Shoaib Akhtar slam Mohammad Amir for retiring from Tests

ಇಸ್ಲಮಾಬಾದ್, ಜುಲೈ 27: ಪಾಕಿಸ್ತಾ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ವಾಸಿಮ್ ಅಕ್ರಮ್ ಮತ್ತು ಶೋಯೆಬ್ ಅಖ್ತರ್ ಅವರು ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಅಮೀರ್ ನಿವೃತ್ತಿ ಘೋಷಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುವಕರಾಗಿದ್ದೂ ಅಮೀರ್ ಟೆಸ್ಟ್ ನಿವೃತ್ತಿ ಹೇಳಿದ್ದಕ್ಕೆ ಇಬ್ಬರೂ ಬೇಸರ ವ್ಯಕ್ತಪಡಿಸಿದ್ದಾರೆ.

ಶಹಬಾಝ್‌ಗೆ 10 ವಿಕೆಟ್, ವೆಸ್ಟ್ ಇಂಡೀಸ್ 'ಎ' ವಿರುದ್ಧ ಗೆಲುವಿನತ್ತ ಭಾರತ 'ಎ'ಶಹಬಾಝ್‌ಗೆ 10 ವಿಕೆಟ್, ವೆಸ್ಟ್ ಇಂಡೀಸ್ 'ಎ' ವಿರುದ್ಧ ಗೆಲುವಿನತ್ತ ಭಾರತ 'ಎ'

ಶುಕ್ರವಾರ (ಜುಲೈ 26) ಮೊಹಮ್ಮದ್ ಅಮೀರ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇತ್ತೀಚೆಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮುಕ್ತಾಯಗೊಂಡ ಐಸಿಸಿ ವಿಶ್ವಕಪ್ 2019ರಲ್ಲಿ ಪಾಕಿಸ್ತಾನ ತಂಡದ ಪರ ಅಮೀರ್‌ ಅತ್ಯಧಿಕ ವಿಕೆಟ್ ಪಡೆದಿದ್ದರು. ಎಂಟು ಪಂದ್ಯಗಳಲ್ಲಿ ಅಮೀರ್ 17 ವಿಕೆಟ್ ಮುರಿದಿದ್ದರು. ಅವರಿಗೀಗ 27ರ ಹರೆಯ.

ಅಮೀರ್ ನಿವೃತ್ತಿಗೆ ಬೇಸರಿಸಿ ಟ್ವೀಟ್ ಮಾಡಿರುವ ಅಕ್ರಮ್, 'ನನಗೆ ಮೊಹಮ್ಮದ್ ಅಮೀರ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದನ್ನು ಕೇಳಿ ಅಚ್ಚರಿಯಾಯ್ತು. ಯಾಕೆಂದರೆ 27-28ರ ವಯಸ್ಸಿನಲ್ಲೇ ನೀವು ಸಾಧಿಸಲು ಒಳ್ಳೆಯ ಹರೆಯ. ಅಲ್ಲದೆ ಟೆಸ್ಟ್ ಕ್ರಿಕೆಟ್‌ ವಿರುದ್ಧ ಹೀಗೆ ನಿರ್ಧಾರಕ್ಕೆ ಬಂದಿದ್ದು ತಪ್ಪು. ಯಾಕೆಂದರೆ ಇದೊಂದು ಅದ್ಭುತ ಕ್ರಿಕೆಟ್ ಮಾದರಿ' ಎಂದು ಬರೆದುಕೊಂಡಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಖ್ತರ್, 'ಮೊಹಮ್ಮದ್ ಅಮೀರ್ ನಿವೃತ್ತಿಯ ಬಳಿಕ ಬಹುಶಃ ಹಸನ್ ಅಲಿ, ವಹಾಬ್ ರಿಯಾಝ್, ಜುನೈದ್ ಖಾನ್ ಕೂಡ ಟೆಸ್ಟ್‌ಗೆ ನಿವೃತ್ತಿ ಘೋಷಿಸಬಹುದು. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಏನಾಗುತ್ತಿದೆ ಅನ್ನೋದೇ ನನಗೆ ಅರ್ಥವಾಗುತ್ತಿಲ್ಲ. 27ರ ಹರೆಯದಲ್ಲಿ ಅಮೀರ್ ಅದು ಹೇಗೆ ನಿವೃತ್ತಿ ನೀಡಿದರು?' ಎಂದು ಪ್ರಶ್ನಿಸಿದ್ದಾರೆ.

Story first published: Saturday, July 27, 2019, 17:54 [IST]
Other articles published on Jul 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X