ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ತಂಡಕ್ಕೆ ಕೋಚ್ ಆದ ದೇಶೀಯ ಕ್ರಿಕೆಟ್‌ನ ದಿಗ್ಗಜ ವಾಸಿಮ್ ಜಾಫರ್

Wasim Jaffer Appointed Uttarakhand Head Coach

ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ರಣಜಿ ಕ್ರಿಕೆಟ್‌ನ ದಿಗ್ಗಜ ವಾಸಿಂ ಜಾಫರ್ ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೆ ಉತ್ತರಾಖಂಡ್ ರಾಜ್ಯ ತಂಡಕ್ಕೆ ಮುಖ್ಯಕೋಚ್ ಆಗಿ ನೇಮಕಗೊಂಡಿದ್ದಾರೆ. ತಮ್ಮ ನೇಮಕವನ್ನು ಜಾಫರ್ ಪಿಟಿಐ ಸುದ್ದಿ ಸಂಸ್ಥೆಗೆ ಖಚಿತಪಡಿಸಿದ್ದು ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿಹೆಚ್ಚು ರನ್ ಪೇರಿಸಿದ ದಾಖಲೆ ಹೊಂದಿರುವ ಜಾಫರ್, ಕಳೆದ ಮಾರ್ಚ್ ತಿಂಗಳಲ್ಲಿ ಜಾಫರ್ 20 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಹೇಳಿದ್ದರು. ಮುಂಬೈ ಹಾಗೂ ವಿದರ್ಭ ತಂಡಗಳನ್ನು ಜಾಫರ್ ಪ್ರತಿನಿಧಿಸಿದ್ದರು. ಇದೀಗ ಮೊದಲ ಬಾರಿಗೆ ತಂಡವೊಂದಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

'ಮೊದಲ ಬಾರಿಗೆ ತಂಡವೊಂದಕ್ಕೆ ಮುಖ್ಯಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದೀಗ ಹೊಸ ಸವಾಲು ಎದುರಾಗಿದ್ದು, ನನ್ನ ಪಾಲಿಗೆ ವಿಶೇಷವಾಗಿದೆ. ಹೊಸ ಸವಾಲಿಗೆ ಸಿದ್ಧವಾಗಿದ್ದೇನೆ' ಎಂದು ಜಾಫರ್ ಹೇಳಿಕೊಂಡಿದ್ದಾರೆ. ಉತ್ತರಾಖಂಡ್ ಹೊಸ ತಂಡ, 2018-19ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್‌ಗೇರಿತ್ತು.

ಉತ್ತರಾಖಂಡ್‌ನಿಂದ ಸಾಕಷ್ಟು ಪ್ರತಿಭಾನ್ವಿರ ಆಟಗಾರರು ಬರುತ್ತಿದ್ದಾರೆ ಎಂದು ತಿಳಿದುಕೊಂಡಿದ್ದೇನೆ. ಅವರನ್ನು ಅತ್ಯುತ್ತಮ ಕ್ರಿಕೆಟಿಗರನ್ನಾಗಿ ತಯಾರು ಮಾಡಲು ಸಾಧ್ಯವಾಗುತ್ತದ ಎಂದು ಭಾವಿಸುತ್ತೇನೆ. ಜೊತೆಗೆ ಉತ್ತರಾಖಂಡ್ ತಂಡವನ್ನು ಅತ್ಯುತ್ತಮ ತಂಡನ್ನಾಗಿ ರೂಪಿಸಲು ಪ್ರಯತ್ನಿಸುತ್ತೇನೆ ಎಂದು ಜಾಫರ್ ಪ್ರತಿಕ್ರಿಯಿಸಿದ್ದಾರೆ

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಾಕ್‌ಗೆ ಆಘಾತ, ಮೂವರಿಗೆ ಕೊರೊನಾ ವೈರಸ್ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಾಕ್‌ಗೆ ಆಘಾತ, ಮೂವರಿಗೆ ಕೊರೊನಾ ವೈರಸ್

ಇದೀಗ ಪ್ಲೇಟ್ ಗುಂಪಿನಲ್ಲಿದ್ದು, ಕೆಳ ಹಂತದಿಂದ ತಂಡವನ್ನು ಮೇಲಕ್ಕೇತ್ತಬೇಕಿದೆ ಎಂದು 42 ವರ್ಷದ ಜಾಫರ್ ತಿಳಿಸಿದ್ದಾರೆ. ಜಾಫರ್ ರಾಷ್ಟ್ರೀಯ ತಂಡದ ಪರ 31 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳನ್ನಾಡಿದ್ದಾರೆ. 260 ಪ್ರಥಮ ದರ್ಜೆ ಪಂದ್ಯಗಳಿಂದ 57 ಶತಕ, 91 ಅರ್ಧಶತಕ ಒಳಗೊಂಡಂತೆ 19410 ರನ್ ಗಳಿಸಿದ್ದಾರೆ. ಉತ್ತರಾಖಂಡ ತಂಡ ರಣಜಿಗೆ ಪದಾರ್ಪಣೆ ಮಾಡಿದ 2018-19ನೇ ಸಾಲಿನಲ್ಲೇ ಎಂಟರಘಟ್ಟಕ್ಕೇರಿತ್ತು.

Story first published: Wednesday, June 24, 2020, 13:47 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X