ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಲೆಳೆದ ಮೈಕಲ್ ವಾನ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ವಾಸಿಂ ಜಾಫರ್

Michael vaughan vs wasim jaffer

ಕೇಪ್‌ಟೌನ್‌ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್‌ಗಳ ಸೋಲಿನ ಮೂಲಕ, ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊಟ್ಟ ಮೊದಲ ಸರಣಿ ಜಯಿಸುವ ಅವಕಾಶ ಕಳೆದುಕೊಂಡಿತು. ಭಾರತ ನೀಡಿದ 212 ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಹರಿಣಗಳು ಒಂದು ದಿನ ಬಾಕಿಗೂ ಮೊದಲೇ ಪಂದ್ಯ ಗೆದ್ದು ಬೀಗಿತು.

ಟೆಸ್ಟ್‌ ಮಾನ್ಯತೆ ಪಡೆದಿರುವ ಎಲ್ಲಾ ರಾಷ್ಟ್ರಗಳಲ್ಲಿ ಸರಣಿ ಗೆದ್ದಿರುವ ಭಾರತಕ್ಕೆ ಈ ಬಾರಿಯೂ ದಕ್ಷಿಣ ಆಫ್ರಿಕಾದಲ್ಲಿ ಗೆಲುವು ಸಾಧ್ಯವಾಗಲಿಲ್ಲ. ಈ ಸೋಲು ವಿರಾಟ್ ಕೊಹ್ಲಿಗೆ ಅಷ್ಟೇ ಅಲ್ಲದೆ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಮೊದಲ ಪರಾಜಯವಾಗಿದೆ.

ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗ ಮತ್ತೊಮ್ಮೆ ಕೈ ಕೊಟ್ಟಿದ್ದು, ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಯಿತು. ಭಾರತಕ್ಕೆ ಇದ್ದಂತಹ ಚಿನ್ನದಂತಹ ಅವಕಾಶ ಈ ಬಾರಿಯೂ ಕೈ ತಪ್ಪಿ ಹೋಗಿತು. ಈ ಕುರಿತಾಗಿ ಅನೇಕ ಮಾಜಿ ಕ್ರಿಕೆಟಿಗರು ಟೀಂ ಇಂಡಿಯಾ ಪ್ರದರ್ಶನದ ಕುರಿತು ತಮ್ಮ ವಾದ ಮಂಡಿಸಿದ್ದಾರೆ. ಇನ್ನೂ ಕೆಲವರು ಟೀಕೆಗಳನ್ನ ಸಹ ಮಾಡಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಇದ್ರಿಂದ ಹೊರತಾಗಿಲ್ಲ. ತನ್ನ ಸೋಶಿಯಲ್ ಮೀಡಿಯಾದ ಸ್ಪರ್ಧಿ ಭಾರತದ ವಾಸಿಂ ಜಾಫರ್‌ಗೆ ಕಾಲೆಳೆದಿದ್ದಾರೆ. ವಾಸಿಂ ಜಾಫರ್ ಅವರನ್ನು ಟ್ಯಾಗ್ ಮಾಡಿ ಸದ್ಯ ನೀವು ಸರಿಯಾಗಿದ್ದೀರಾ? ಎಂದು ಪರಿಶೀಲಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಬೊಂಬಾಟ್ ಉತ್ತರ ನೀಡಿದ ವಾಸಿಂ ಜಾಫರ್ ಹಾ ಆಲ್ ಗುಡ್ ಮೈಕೆಲ್, ನಾವು ಇನ್ನೂ 2-1 ರಿಂದ ಟೆಸ್ಟ್ ಸರಣಿಯಲ್ಲಿ ನಿಮಗಿಂತ ಮುಂದಿದ್ದೇವೆ ಎಂಬುದನ್ನ ಮರೆಯಬೇಡಿ ಎಂದು ಟಾಂಗ್ ನೀಡಿದ್ದಾರೆ.

ಕಳೆದ ವರ್ಷ ಭಾರತ ಮತ್ತು ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ನಾಲ್ಕು ಪಂದ್ಯಗಳ ಮುಕ್ತಾಯದ ನಂತರ ಭಾರತವು 2-1 ರಿಂದ ಸರಣಿಯಲ್ಲಿ ಲೀಡ್ ಪಡೆದಿತ್ತು. ಆದ್ರೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಐದನೇ ಪಂದ್ಯವನ್ನು ಕೋವಿಡ್-19 ಕಾಳಜಿಯಿಂದಾಗಿ ಮುಂದೂಡಲಾಯಿತು. ಅನಿರ್ದಿಷ್ಟವಧಿ ಪಂದ್ಯ ಈ ವರ್ಷದ ಕೊನೆಯಲ್ಲಿ ನಡೆಯಲಿದೆ.

ಆ್ಯಶಸ್ 5ನೇ ಟೆಸ್ಟ್‌: ಆಸ್ಟ್ರೇಲಿಯಾವನ್ನ 300 ರನ್ ಗಡಿಯೊಳಗೆ ಆಲೌಟ್ ಮಾಡಲು ಇಂಗ್ಲೆಂಡ್ ಪ್ಲ್ಯಾನ್ LIVE SCOREಆ್ಯಶಸ್ 5ನೇ ಟೆಸ್ಟ್‌: ಆಸ್ಟ್ರೇಲಿಯಾವನ್ನ 300 ರನ್ ಗಡಿಯೊಳಗೆ ಆಲೌಟ್ ಮಾಡಲು ಇಂಗ್ಲೆಂಡ್ ಪ್ಲ್ಯಾನ್ LIVE SCORE

Rahane ಮತ್ತು Pujara ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಫುಲ್ ಗರಂ ಆಗಿ Virat Kohli ಹೇಳಿದ್ದೇನು? |Oneindia Kannada

ಹೀಗಾಗಿ ಈ ವಿಚಾರದ ಕುರಿತು ಮೈಕಲ್ ವಾನ್‌ಗೆ ನೆನಪಿಸಿದ ವಾಸಿಂ ಜಾಫರ್ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ ಎಂದು ಜ್ಞಾಪಿಸಿದ್ದಾರೆ. ಆದ್ರೆ ಈ ಸೋಲಿನಿಂದ ಅಷ್ಟು ಸುಲಭವಾಗಿ ಆತ್ಮವಿಶ್ವಾಸ ಕಳೆದುಕೊಳ್ಳದ ಭಾರತ ಏಕದಿನ ಸರಣಿಯಲ್ಲಿ ಕಂಬ್ಯಾಕ್ ಮಾಡುವ ಛಲ ಹೊಂದಿದೆ. ಜನವರಿ 19ರಿಂದ ಆರಂಭಗೊಳ್ಳಲಿರುವ 50 ಓವರ್‌ಗಳ ಮೂರು ಏಕದಿನ ಪಂದ್ಯಗಳನ್ನು ಭಾರತ ಆಡಲಿದೆ.

Story first published: Saturday, January 15, 2022, 13:18 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X