ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಾಫರ್ ರಾಜೀನಾಮೆ ಬೆನ್ನಲ್ಲೇ ಆರೋಪ, ಪ್ರತ್ಯಾರೋಪ: ಕುಂಬ್ಳೆ, ದೊಡ್ಡ ಗಣೇಶ್ ಬೆಂಬಲ

Wasim Jaffer denies communal bias allegations after resignation

ಉತ್ತರಾಖಂಡ್ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಸಿಂ ಜಾಫರ್ ಕಳೆದ ಎರಡು ದಿನಗಳ ಹಿಂದೆ ರಾಜೀನಾಮೆಯನ್ನು ನೀಡಿದರು. ಈ ರಾಜೀನಾಮೆ ವಿಚಾರ ಈಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ. ರಾಜೀನಾಮೆ ಪತ್ರದಲ್ಲಿ ತಮ್ಮ ಈ ನಿರ್ಧಾರಕ್ಕೆ ಕಾರಣವೇನು ಎಂಬ ಬಗ್ಗೆ ಖಾರವಾಗಿಯೇ ತಿಳಿಸಿದ್ದರು. ಆಯ್ಕೆ ಸಮಿತಿ ಪ್ರತಿಭಾವಂತರನ್ನು ಆಯ್ಕೆ ಮಾಡುವ ಬದಲಾಗಿ ಪಕ್ಷಪಾತದಿಂದ ತಮಗೆ ಬೇಕಾದವನ್ನು ಆಯ್ಕೆ ಮಾಡುತ್ತಿದೆ ಎಂದು ಇದರಲ್ಲಿ ಹೇಳಿದ್ದರು.

ಆದರೆ ಮರುದಿನವೇ ಈ ರಾಜೀನಾಮೆ ಪ್ರಸಂಗ ಬೇರೆಯದ್ದೇ ರೂಪವನ್ನು ಪಡೆದುಕೊಂಡಿತು. ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ವಿರುದ್ಧವೇ ಆರೋಪಗಳು ಕೇಳಿ ಬಂದವು. ವಾಸಿಮ್ ಜಾಫರ್ ಅವರೇ ಆಟಗಾರರ ಪ್ರತಿಭೆಗೆ ಮನ್ನಣೆ ನೀಡುವ ಬದಲಾಗಿ ಧರ್ಮದ ಆಧಾರದಲ್ಲಿ ತಂಡವನ್ನು ಪ್ರತ್ಯೇಕಿಸಿದರು ಎಂಬ ಆರೋಪವನ್ನು ಉತ್ತರಾಖಂಡ್ ಕ್ರಿಕೆಟ್ ಅಸೊಸಿಯೇಶನ್‌ನ ಪದಾಧಿಕಾರಿಗಳು ಮಾಡಿದ್ದರು.

ಯುರೋ ಮಿಲಿಯನ್‌ನಲ್ಲಿ ಈ ವಾರ 163 ಮಿಲಿಯನ್ ಯೂರೋ ಗೆಲ್ಲಲು ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.ಯುರೋ ಮಿಲಿಯನ್‌ನಲ್ಲಿ ಈ ವಾರ 163 ಮಿಲಿಯನ್ ಯೂರೋ ಗೆಲ್ಲಲು ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.

ಆರೋಪ ನಿರಾಕರಿಸಿದ ಜಾಫರ್

ಆರೋಪ ನಿರಾಕರಿಸಿದ ಜಾಫರ್

ಈ ಆರೋಪವನ್ನು ವಾಸಿಮ್ ಜಾಫರ್ ನಿರಾಕರಿಸಿದ್ದಾರೆ. ಈ ವಿಚಾರಕ್ಕೂ ಕೋಮು ಬಣ್ಣ ನೀಡಿರುವುದು ನನಗೆ ದುಃಖ ತರಿಸಿದೆ. ನಾನು ಜಾತಿವಾದಿಯಲ್ಲ. ಜಾತಿ ಧರ್ಮದ ಆಧಾರದಲ್ಲಿ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಲ್ಲ. ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದರು. ತಂಡದ ಆಯ್ಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳ ಹಸ್ತಕ್ಷೇಪ ಮತ್ತು ಪಕ್ಷಪಾತಿ ಧೋರಣೆಯಿಂದ ಬೇಸತ್ತು ನಾನು ರಾಜೀನಾಮೆ ನೀಡಿದ್ದೆ. ನಾನು ಜಾತಿವಾದಿಯಾಗಿದ್ದರೆ ನನ್ನನ್ನು ಕಿತ್ತೊಗೆಯುತ್ತಿದ್ದರು. ಆದರೆ ನಾನೇ ರಾಜೀನಾನೆಯನ್ನು ನೀಡಿದ್ದೇನೆ ಎಂದಿದ್ದಾರೆ. ಇದರ ಜೊತೆಯಲ್ಲಿ ಉತ್ತರಾಖಂಡ್ ಕ್ರಿಕೆಟ್ ಅಸೋಸಿಯೇಶನ್‌ನ ಪದಾಧಿಕಾರಿಗಳ ಆರೋಪಗಳಿಗೆ ಕೆಲ ಪ್ರತ್ಯಿತ್ತರಗಳನ್ನು ಕೂಡ ಟ್ವಿಟ್ಟರ್‌ನಲ್ಲಿ ನೀಡಿದ್ದಾರೆ.

ಬೆಂಬಲಕ್ಕೆ ನಿಂತ ಮಾಜಿ ಕ್ರಿಕೆಟಿಗರು

ಬೆಂಬಲಕ್ಕೆ ನಿಂತ ಮಾಜಿ ಕ್ರಿಕೆಟಿಗರು

ಇನ್ನು ಈ ವಿಚಾರ ವಿವಾದವಾಗುತ್ತಿದ್ದಂತೆಯೇ ವಾಸಿಮ್ ಜಾಫರ್‌ಗೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ದೊಡ್ಡ ಗಣೇಶ್ ಬೆಂಬಲಕ್ಕೆ ನಿಂತಿದ್ದಾರೆ. ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅನಿಲ್ ಕುಂಬ್ಳೆ "ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಜಾಫರ್, ನೀವು ಸರಿಯಾಗಿದ್ದನ್ನೇ ಮಾಡಿದ್ದೀರಿ. ನಿಮ್ಮ ಮಾರ್ಗದರ್ಶನವನ್ನು ಕಳೆದುಕೊಂಡ ಆಟಗಾರರು ದುರದೃಷ್ಟವಂತರು" ಎಂದಿದ್ದಾರೆ. ಇನ್ನು ದೊಡ್ಡ ಗಣೇಶ್ ಕೂಡ ಟ್ವಿಟ್ಟರ್‌ನಲ್ಲಿ ಜಾಫರ್‌ಗೆ ಬೆಂಬಲವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಮತ್ತೆ ಆರೋಪ ಮಾಡಿದ ಮಹಿಮ್ ವರ್ಮ

ಮತ್ತೆ ಆರೋಪ ಮಾಡಿದ ಮಹಿಮ್ ವರ್ಮ

ಈ ಮಧ್ಯೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಮಹಿಮ್ ವರ್ಮ ವಾಸಿಮ್ ಜಾಫರ್ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಗೈದಿದ್ದಾರೆ. "ವಾಸಿಮ್ ಜಾಫರ್ ಹೇಳುತ್ತಿರುವುದು ಎಲ್ಲವೂ ಸುಳ್ಳು. ಆತನ ಮನವಿಯ ನಂತರವೇ ನಾವು ಎಲ್ಲಾ ಚಟುವಟಿಕೆಗಳನ್ನು ಮಾಡಿದ್ದೆವು. ಆದರೆ ವಾಸಿಮ್ ಜಾಫರ್ ವರ್ತನೆ ಸರಿಯಿರಲಿಲ್ಲ. ಆತನಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಉತ್ತಮ ಕ್ರಿಕೆಟ್‌ ವಾತಾವರಣದ ಉದ್ದೇಶದೊಂದಿಗೆ ನಾವು ಅವರನ್ನು ಸೇರಿಸಿಕೊಂಡಿದ್ದೆವು" ಎಂದಿದ್ದಾರೆ.

Story first published: Thursday, February 11, 2021, 17:02 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X