ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ವರ್ಲ್ಡ್ ಟಾಪ್ ಬೌಲರ್‌ಗೆ ಆಫರ್ ನೀಡಿದ ಕಿಂಗ್ಸ್ ಪಂಜಾಬ್

Wasim jaffer Gives Offer To mitchell starc For Ipl 2021

2020ನೇ ವರ್ಷದ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡಿತಾದರೂ ಪ್ಲೇ ಆಫ್ ಹಂತ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್‌ವಾಲ್, ಪೂರಾನ್ ಈ ಆವೃತ್ತಿಯಲ್ಲಿ ಮಿಂಚಿದರು. ಮ್ಯಾಕ್ಸ್ ವೆಲ್ ಕಡೆಯಿಂದ ನಿರೀಕ್ಷಿತ ಆಟ ಬಂದಿಲ್ಲ.

ಬೌಲಿಂಗ್ ವಿಭಾಗದಲ್ಲಿ ಮುರುಗನ್ ಅಶ್ವಿನ್, ರವಿ ಬಿಷ್ಣೋಯಿ ಗಮನ ಸೆಳೆದರು. ವೇಗದಲ್ಲಿ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಬಿಟ್ಟರೆ ಬೇರೆ ಯಾವ ಬೌಲರ್ ಸಹ ಪಂಜಾಬ್ ತಂಡದಲ್ಲಿ ಮೋಡಿ ಮಾಡಲಿಲ್ಲ.

ಪಂಜಾಬ್ ತಂಡಕ್ಕೆ ಸೂಕ್ತವಾದ ವೇಗದ ಬೌಲರ್ ಅವಶ್ಯಕತೆ ಇದೆ ಎಂಬ ಅಭಿಪ್ರಾಯಗಳು ಸಹ ಚರ್ಚೆಯಾಗಿದ್ದವು. ಈ ಹಂತದಲ್ಲಿ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸೀಮ್ ಜಾಫರ್ ವಿಶ್ವದ ಟಾಪ್ ಬೌಲರ್‌ ಒಬ್ಬರಿಗೆ ನಮ್ಮ ತಂಡದಲ್ಲಿ ಆಡುವಂತೆ ಆಫರ್ ನೀಡಿದ್ದಾರೆ.

Wasim jaffer Gives Offer To mitchell starc For Ipl 2021

ಆಸ್ಟ್ರೇಲಿಯಾ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರಿಗೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ತಂಡದ ಪರ ಆಡಿ ಎಂದು ಭಾರತೀಯ ಟೆಸ್ಟ್ ತಂಡದ ಮಾಜಿ ಆಟಗಾರ ಆಫರ್ ನೀಡಿದ್ದಾರೆ. ಟ್ವಿಟ್ಟರ್ ಮೂಲಕ ಆಹ್ವಾನ ನೀಡಿರುವ ಜಾಫರ್ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದ್ಹಾಗೆ, ಬಿಗ್ ಬ್ಯಾಷ್ ಲೀಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ಸಿಡ್ನಿ ಸಿಕ್ಸರ್ ತಂಡದ ಪರವಾಗಿ ಆಡಲು ಒಪ್ಪಿಗೆ ಸೂಚಿಸಿದ್ದಾರೆ. 2014-15 ರಿಂದ ಮಿಚೆಲ್ ಸ್ಟಾರ್ಕ್ ಬಿಗ್ ಬ್ಯಾಷ್ ಲೀಗ್ ಆಡಿಲ್ಲ. ಸುಮಾರು 6 ವರ್ಷದ ನಂತರ ಲೀಗ್‌ಗೆ ಕಂಬ್ಯಾಕ್ ಮಾಡಿರುವ ಬೌಲರ್ ಸಿಡ್ನಿ ತಂಡಕ್ಕೆ ಮರಳಿದ್ದಾರೆ. ಜೋಶ್ ಹಜಲ್‌ವುಡ್ ಮತ್ತು ಸ್ಟೀವ್ ಸ್ಮಿತ್ ಅಲಭ್ಯರಾದ ಕಾರಣ ಮಿಚೆಲ್ ಸ್ಟಾರ್ಕ್ ಅವರನ್ನ ಕರೆತರುವಲ್ಲಿ ಸಿಡ್ನಿ ತಂಡ ಯಶಸ್ವಿಯಾಗಿದೆ.

ಮಿಚೆಲ್ ಸ್ಟಾರ್ಕ್ ಬಿಗ್‌ ಬ್ಯಾಷ್ ಗೆ ಎಂಟ್ರಿ ಕೊಟ್ಟ ಬೆನ್ನಲ್ಲೆ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲೂ ಆಡಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಅನುಮತಿ ನೀಡುತ್ತೋ ಇಲ್ವೋ, ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸೀಮ್ ಜಾಫರ್ ಮಾತ್ರ ಸಮ್ಮತಿ ನೀಡಿ ಆಫರ್ ಸಹ ನೀಡಿದ್ದಾರೆ.

ವಾಸೀಮ್ ಜಾಫರ್ ಗಂಭೀರವಾಗಿ ಟ್ವೀಟ್ ಮಾಡದೇ ಹೋದರು, ಮಿರ್ಜಾಪುರ್ ವೆಬ್‌ ಸಿರೀಸ್‌ನ ಚಿತ್ರದ ಮೇಮ್‌ವೊಂದನ್ನು ಹಂಚಿಕೊಂಡಿದ್ದಾರೆ.

ಮಿಚೆಲ್ ಸ್ಟಾರ್ಕ್ ಐಪಿಎಲ್ ಜರ್ನಿ

2014-15 ಎರಡು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡಿ ಮಿಚೆಲ್ ಸ್ಟಾರ್ಕ್ ನಂತರ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. 2018ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೆ ಆಯ್ಕೆಯಾದರೂ ತಂಡದಲ್ಲಿ ಆಡಲಿಲ್ಲ. ಮತ್ತೆ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದರು.

Story first published: Tuesday, November 10, 2020, 20:09 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X