ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್, ವಿರಾಟ್ or ರೋಹಿತ್?: ಬೆಸ್ಟ್ ವೈಟ್‌ ಬಾಲ್ ಕ್ರಿಕೆಟರ್ ಹೆಸರಿಸಿದ ಜಾಫರ್

Wasim Jaffer names India’s ‘best white-ball’ cricketer

ನವದೆಹಲಿ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಜಗತ್ತು 'ಕ್ರಿಕೆಟ್ ದೇವರು' ಎಂದು ಕರೆಯುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ಹೆಸರಿನಲ್ಲಿ ಈಗಲೂ ಅನೇಕ ವಿಶ್ವದಾಖಲೆಗಳಿವೆ. ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ 'ರನ್ ಮೆಷೀನ್' ಅಂತ ಕರೆಯಲ್ಪಡುತ್ತಿದ್ದಾರೆ. ಸಚಿನ್ ದಾಖಲೆಗಳನ್ನು ಕೊಹ್ಲಿ ಸರಿಗಟ್ಟುತ್ತಾ ಬರುತ್ತಿರುವುದೇ ಕೊಹ್ಲಿಗೆ ಈ ಹೆಸರು ಬರಲು ಕಾರಣ. ಇನ್ನು ಹಿಟ್‌ ಮ್ಯಾನ್ ಖ್ಯಾತಿಯ ಭಾರತದ ಉಪನಾಯಕ ರೋಹಿತ್ ಶರ್ಮಾ ಕೂಡ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಬಲು ಆಕ್ರಮಣಕಾರಿ ಬ್ಯಾಟ್ಸ್‌ಮನ್‌.

ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್ ದಾಖಲೆ ಬರೆದಿರುವ ಟಾಪ್ 5 ಫೀಲ್ಡರ್‌ಗಳು!ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್ ದಾಖಲೆ ಬರೆದಿರುವ ಟಾಪ್ 5 ಫೀಲ್ಡರ್‌ಗಳು!

ಹಾಗಾದರೆ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಭಾರತದ ಬೆಸ್ಟ್ ಬ್ಯಾಟ್ಸ್‌ಮನ್‌ನನ್ನು ಹೆಸರಿಸಿ ಅಂತ ನಿಮ್ಮಲ್ಲಿ ಕೇಳಿದರೆ ನೀವು ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಮೂವರಲ್ಲಿ ಯಾರನ್ನು ಆರಿಸುತ್ತೀರಿ?

ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!

ಇದೇ ಪ್ರಶ್ನೆಯನ್ನು ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ಅವರ ಮುಂದಿಟ್ಟಾಗ ಜಾಫರ್ ಇದಕ್ಕೆ ಸುಲಭವಾಗಿ ಉತ್ತರಿಸಿದ್ದಾರೆ.

ಸಚಿನ್ ಹೆಸರಲ್ಲಿ ಹಲವಾರು ದಾಖಲೆ

ಸಚಿನ್ ಹೆಸರಲ್ಲಿ ಹಲವಾರು ದಾಖಲೆ

ಆಧುನಿಕ ಯುಗದ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ಸಚಿನ್ ತೆಂಡೂಲ್ಕರ್ ಅವರಿಗಿದೆ. 463 ಏಕದಿನ ಪಂದ್ಯಗಳನ್ನಾಡಿರುವ ಸಚಿನ್, 44.83ರ ಸರಾಸರಿಯಲ್ಲಿ ವಿಶ್ವ ದಾಖಲೆಯ 18426 ರನ್ ಕಲೆ ಹಾಕಿದ್ದಾರೆ. 49 ಶತಕಗಳ ದಾಖಲೆಯೂ ಸಚಿನ್ ಹೆಸರಿನಲ್ಲಿದೆ. ಆದರೆ ಟಿ20 ಕ್ರಿಕೆಟ್ ವಿಚಾರಕ್ಕೆ ಬಂದರೆ ಸಚಿನ್ ಹೆಚ್ಚು ಪಂದ್ಯಗಳನ್ನಾಡಿಲ್ಲ. ಕೇವಲ 1 ಟಿ20ಐ ಪಂದ್ಯವನ್ನಾಡಿರುವ ಸಚಿನ್ 10 ರನ್ ಗಳಿಸಿದ್ದಾರೆ.

ಅತ್ಯಧಿಕ ರನ್ ವಿಶ್ವದಾಖಲೆ

ಅತ್ಯಧಿಕ ರನ್ ವಿಶ್ವದಾಖಲೆ

ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ವಿಶ್ವದಾಖಲೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. 224 ಏಕದಿನ ಪಂದ್ಯಗಳಲ್ಲಿ ರೋಹಿತ್ 49.27ರ ಸರಾಸರಿಯಲ್ಲಿ 9115 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 29 ಶತಕಗಳು ಸೇರಿವೆ. ಅಲ್ಲದೆ ಒಂದೇ ಟೂರ್ನಿಯಲ್ಲಿ ಐದು ಶತಕಗಳ ದಾಖಲೆಯೂ ರೋಹಿತ್ ಮಾಡಿದ್ದಾರೆ. ಅಷ್ಟೇ ಅಲ್ಲ, ಏಕದಿನದಲ್ಲಿ ವೈಯಕ್ತಿಕ ಅತ್ಯಧಿಕ ರನ್ (264 ರನ್) ವಿಶ್ವ ದಾಖಲೆಯೂ ಹಿಟ್ ಮ್ಯಾನ್ ನಿರ್ಮಿಸಿದ್ದಾರೆ.

ಭಾರತದ ಬೆಸ್ಟ್ ವೈಟ್‌ಬಾಲ್ ಕ್ರಿಕೆಟರ್

ಭಾರತದ ಬೆಸ್ಟ್ ವೈಟ್‌ಬಾಲ್ ಕ್ರಿಕೆಟರ್

ಭಾರತದ ಬೆಸ್ಟ್ ವೈಟ್‌ಬಾಲ್ ಕ್ರಿಕೆಟರ್ ಯಾರು ಎಂಬ ಪ್ರಶ್ನೆ ಕೇಳಿ, ವಾಸಿಮ್ ಜಾಫರ್ ಮುಂದೆ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಮೂರು ಆಯ್ಕೆಗಳನ್ನು ನೀಡಲಾಗಿತ್ತು. ಈ ವೇಳೆ ಜಾಫರ್ ತಡಕಾಡದೆ ಕೊಹ್ಲಿಯನ್ನು ಆರಿಸಿದ್ದಾರೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಭಾರತದ ಬೆಸ್ಟ್ ವೈಟ್ ಬಾಲ್ ಕ್ರಿಕೆಟಿಗ ಎಂದು ಜಾಫರ್ ಹೇಳಿದ್ದಾರೆ.

ಸರಾಸರಿಯಲ್ಲಿ ಕೊಹ್ಲಿ ಮೇಲು

ಸರಾಸರಿಯಲ್ಲಿ ಕೊಹ್ಲಿ ಮೇಲು

ವೈಟ್‌ ಬಾಲ್‌ನಲ್ಲಿ ವಿರಾಟ್ ಕೊಹ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಅಂತ ಜಾಫರ್ ಹೇಳಲು ಕಾರಣವಿದೆ. ಏಕದಿನ ಕ್ರಿಕೆಟ್‌ನ ಸರಾಸರಿ ಗಮನಿಸಿದರೆ ಸಚಿನ್, ರೋಹಿತ್‌ಗಿಂತ ಕೊಹ್ಲಿಯದ್ದೇ ಹೆಚ್ಚಿದೆ. 248 ಏಕದಿನ ಪಂದ್ಯಗಳನ್ನಾಡಿರುವ ಕೊಹ್ಲಿ 59.34ರ ಸರಾಸರಿಯಲ್ಲಿ 11867 ರನ್ ಗಳಿಸಿದ್ದಾರೆ. ಇದರಲ್ಲಿ 43 ಶತಕಗಳು ಸೇರಿವೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲೂ ವಿರಾಟ್ ಉತ್ತಮ ರನ್ ಸಾಧನೆ ಹೊಂದಿದ್ದಾರೆ.

Story first published: Saturday, July 4, 2020, 9:47 [IST]
Other articles published on Jul 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X