ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಾಫರ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಟೀಮ್ ಇಂಡಿಯಾ ಏಕದಿನ ತಂಡ ಹೇಗಿದೆ ನೋಡಿ!

wasim jaffer, team india, virat kohli, odi, ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ, ಏಕದಿನ

ಕೊರೊನಾ ವೈರಸ್‌ನಿಂದ ಸಂಪೂರ್ಣವಾಗ ಕ್ರೀಡಾ ಚಟುವಟಿಕೆಗಳು ನಿಂತ ಬಳಿಕ ಅನೇಕ ಕ್ರಿಕೆಟಿಗರು ತಮ್ಮ ಸಾರ್ವಕಾಲಿಕ ಶ್ರೇಷ್ಠ ತಂಡಗಳನ್ನು ಪ್ರಕಟಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರ ರಣಜಿ ಕ್ರಿಕೆಟ್‌ನ ದಿಗ್ಗಜ ವಾಸಿಮ್ ಜಾಫರ್ ಕೂಡ ತಮ್ಮ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡವನ್ನು ಪ್ರಕಟಿಸಿದ್ದಾರೆ.

ಅಚ್ಚರಿಯೇನೆಂದರೆ ಟೀಮ್ ಇಂಡಿಯಾದ ಇಬ್ಬರು ಮಾಜಿ ಪ್ರಮುಖ ಆಟಗಾರರನ್ನು ಈ ತಂಡದಿಂದ ಹೊರಗಿಟ್ಟಿದ್ದಾರೆ. ಅವರ ಬದಲಿಗೆ ಇಬ್ಬರು ಹಾಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಇದು ಜಾಫರ್ ತಂಡದಲ್ಲಿರುವ ಅಚ್ಚರಿಯಗಳಾಗಿದೆ. ಹಾಗಾದರೆ ಜಾಫರ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಟೀಮ್ ಇಂಡಿಯಾ ಏಕದಿನ ತಂಡ ಹೇಗಿದೆ ಮುಂದೆ ಓದಿ..

ಸೆಹ್ವಾಗ್, ದ್ರಾವಿಡ್‌ಗೆ ಇಲ್ಲ ಸ್ಥಾನ

ಸೆಹ್ವಾಗ್, ದ್ರಾವಿಡ್‌ಗೆ ಇಲ್ಲ ಸ್ಥಾನ

ವಾಸಿಮ್ ಜಾಫರ್ ಹೆಸರಿಸಿದ ಈ ತಂಡದಲ್ಲಿ ಟೀಮ್ ಇಂಡಿಯಾದ ಸ್ಪೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಸ್ಥಾನವನ್ನು ಪಡೆಸುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೂಡ ಜಾಫರ್ ಹೆಸರಿಸಿದ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ.

ಆರಂಭಿಕರಾಗಿ ಸಚಿನ್-ಸೌರವ್ ಜೋಡಿ

ಆರಂಭಿಕರಾಗಿ ಸಚಿನ್-ಸೌರವ್ ಜೋಡಿ

ಈ ತಂಡದ ಆರಂಭಿಕರಾಗಿ ಸಚಿನ್-ಸೌರವ್ ಜೋಡಿಯನ್ನು ವಾಸಿಮ್ ಜಾಫರ್ ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಅವರ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬರುವ ವಿರಾಟ್ ಕೊಹ್ಲಿಯನ್ನು ನಾಲ್ಕನೇ ಕ್ರಮಾಂಕಕ್ಕೆ ಜಾಫರ್ ಆರಿಸಿದ್ದಾರೆ.

ನಾಯಕನಾಗಿ ಧೋನಿ

ನಾಯಕನಾಗಿ ಧೋನಿ

ಸ್ಪೋಟಕ ಆಟಗಾರ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಐದನೇ ಕ್ರಮಾಂಕಕ್ಕೆ ಜಾಫರ್ ಆಯ್ಕೆ ಮಾಡಿದ್ದಾರೆ. ವಿಕೆಟ್ ಕೀಪಿಂಗ್ ಹೊಣೆಯನ್ನು ಮಹೇಂದ್ರ ಸಿಂಗ್ ಧೋನಿಗೆ ನೀಡಲಾಗಿದೆ. ಜೊತೆಗೆ ಈ ತಂಡದಲ್ಲಿ ನಾಯಕನ ಸ್ಥಾನವನ್ನು ಕೂಡ ಜಾಫರ್ ಧೋನಿಗೇ ನೀಡಿದ್ದಾರೆ.

ಕಪಿಲ್ ದೇವ್‌ಗೆ ಸ್ಥಾನ

ಕಪಿಲ್ ದೇವ್‌ಗೆ ಸ್ಥಾನ

ಭಾರತೀಯ ಕ್ರಿಕೆಟ್‌ ಇತಿಹಾಸದ ಸರ್ವಶ್ರೇಷ್ಠ ಆಲ್‌ರೌಂಡರ್‌ ಭಾರತದ ಪ್ರಥಮ ವಿಶ್ವಕಪ್ ವಿಜೇತ ತಂಡದ ರೂವಾರಿ ಕಪಿಲ್‌ ದೇವ್‌ ಅವರನ್ನು ತಮ್ಮ ಸಾರ್ವಕಾಲಿಕ ಶ್ರೇಷ್ಠ ಆಯ್ಕೆ ಮಾಡಿದ್ದಾರೆ ಜಾಫರ್‌. ಸ್ಪಿನ್ನರ್‌ಗಳಲ್ಲಿ ಹರ್ಭಜನ್‌ ಅಥವಾ ರವೀಂದ್ರ ಜಡೇಜಾ ಇಬ್ಬರಲ್ಲಿ ಒಬ್ಬರ ಆಯ್ಕೆಕೆ ಮುಂದಾಗಿದ್ದಾರೆ.

ಬಲಿಷ್ಠವಾಗಿದೆ ಬೌಲಿಂಗ್ ವಿಭಾಗ

ಬಲಿಷ್ಠವಾಗಿದೆ ಬೌಲಿಂಗ್ ವಿಭಾಗ

ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆಗೂ ಸ್ಥಾನ ನೀಡಿದ್ದು, ಜಸ್‌ಪ್ರೀತ್‌ ಬುಮ್ರಾ ಮತ್ತು ಜಹೀರ್‌ ಖಾನ್‌ ಅವರನ್ನು ವೇಗಿಗಳಾಗಿ ತೆಗೆದುಕೊಂಡಿದ್ದಾರೆ. ಜಹೀರ್‌ ಭಾರತ ಕಂಡ ಶ್ರೇಷ್ಠ ಎಡಗೈ ವೇಗಿಯಾಗಿದ್ದು, ಬುಮ್ರಾ ಇತ್ತೀಚಿನ ವರ್ಷಗಳಲ್ಲಿ ಭರ್ಜರಿ ಯಾರ್ಕರ್‌ಗಳ ಮೂಲಕ ಟೀಮ್‌ ಇಂಡಿಯಾದ ಮೊದಲ ಆಯ್ಕೆಯ ವೇಗಿಯಾಗಿದ್ದಾರೆ.

ಜಾಫರ್‌ ಆಯ್ಕೆಯ ಟೀಮ್‌ ಇಂಡಿಯಾ XI

ಜಾಫರ್‌ ಆಯ್ಕೆಯ ಟೀಮ್‌ ಇಂಡಿಯಾ XI

ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಎಂಎಸ್‌ ಧೋನಿ, ಕಪಿಲ್‌ ದೇವ್‌, ರವೀಂದ್ರ ಜಡೇಜಾ/ಹರ್ಭಜನ್‌ ಸಿಂಗ್‌, ಅನಿಲ್‌ ಕುಂಬ್ಳೆ, ಜಹೀರ್‌ ಖಾನ್‌, ಜಸ್‌ಪ್ರೀತ್‌ ಬುಮ್ರಾ

Story first published: Wednesday, June 10, 2020, 16:23 [IST]
Other articles published on Jun 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X