ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಅಲ್ಲ : ಯಾರು ಶ್ರೇಷ್ಠ ಪ್ರಶ್ನೆಗೆ ಜಾಫರ್ ನೀಡಿದ ಉತ್ತರ ಇದು!

Wasim Jaffer Picks Steve Smith Over Virat Kohli As A Better Batsman

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸಿಸ್ ದಾಂಡಿಗ ಸ್ಟೀವ್ ಸ್ಮಿತ್ ಮಧ್ಯೆ ಯಾರು ಶ್ರೇಷ್ಠ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಮೂರೂ ಮಾದರೊಯಲ್ಲಿ ನಿಸ್ಸಂಶಯವಾಗಿ ಹೆಚ್ಚಿನವರ ಆಯ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರವೇ ನೋಡುವುದಾದರೆ ವಿರಾಟ್‌ಗಿಂತ ಸ್ಮಿತ್ ದಾಖಲೆ ಉತ್ತಮವಾಗಿದೆ.

ಎಲ್ಲರೂ ಆತನನ್ನ ವಾಸಿಮ್ ಅಕ್ರಮ್‌ಗೆ ಹೋಲಿಸುತ್ತಿದ್ದರು: ಮಾಜಿ ಬೌಲರ್ ಬಗ್ಗೆ ರೈನಾ ಹೇಳಿಕೆಎಲ್ಲರೂ ಆತನನ್ನ ವಾಸಿಮ್ ಅಕ್ರಮ್‌ಗೆ ಹೋಲಿಸುತ್ತಿದ್ದರು: ಮಾಜಿ ಬೌಲರ್ ಬಗ್ಗೆ ರೈನಾ ಹೇಳಿಕೆ

ಟೀಮ್ ಇಂಡಿಯಾ ಮಾಜಿ ಆಟಗಾರ ದೇಶಿ ಕ್ರಿಕೆಟ್‌ನ ದಂತಕತೆಯೆನಿಸಿರುವ ವಾಸಿಮ್ ಜಾಫರ್ ಪ್ರಸಕ್ತ ಕಾಲದ ಈ ಇಬ್ಬರು ಆಟಗಾರರ ಮಧ್ಯೆ ಯಾರು ಶ್ರೇಷ್ಠ ಎಂಬುದನ್ನು ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಜಾಫರ್ ವಿರಾಟ್‌ಗಿಂತ ಆಸಿಸ್‌ನ ಸ್ಮಿತ್ ಶ್ರೇಷ್ಠ ಎಂದಿದ್ದಾರೆ.

ನಿಷೇಧದಿಂದ ವಾಪಾಸಾದ ಬಳಿಕ ಶ್ರೇಷ್ಠ ಪ್ರದರ್ಶನ

ನಿಷೇಧದಿಂದ ವಾಪಾಸಾದ ಬಳಿಕ ಶ್ರೇಷ್ಠ ಪ್ರದರ್ಶನ

ಖಾಸಗೀ ವಾಹಿನಿಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಜಾಫರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಕ್ರಿಕೆಟ್‌ ಮರಳಿದ ಬಳಿಕ ಸ್ಮಿತ್‌, ತೋರಿದ ಪ್ರದರ್ಶನಕ್ಕೆ ನಾನು ಹೆಚ್ಚಿನ ಅಂಕಗಳನ್ನು ನೀಡುತ್ತೇನೆ," ಎಂದು ಜಾಫರ್ ಹೇಳಿದ್ದಾರೆ.

ಡಾನ್ ಬ್ರಾಡ್ಮನ್ ಜೊತೆ ಹೋಲಿಕೆ

ಡಾನ್ ಬ್ರಾಡ್ಮನ್ ಜೊತೆ ಹೋಲಿಕೆ

ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತೋರಿಸುತ್ತಿರುವ ಪ್ರದರ್ಶನದಿಂದಾಗಿ ಅವರನ್ನು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಡಾನ್ ಬ್ರಾಡ್ಮನ್ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಮಿತ್ 62ಕ್ಕಿಂತಲೂ ಹೆಚ್ಚಿನ ಸರಾಸರಿಯನ್ನು ಹೊಂದಿದ್ದಾರೆ.

ಕೊಹ್ಲಿಗೆ ಸ್ಮಿತ್ ಅಡ್ಡಿ

ಕೊಹ್ಲಿಗೆ ಸ್ಮಿತ್ ಅಡ್ಡಿ

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಸ್ಟೀವನ್‌ ಸ್ಮಿತ್‌ ಅವರ ಸಮೀಪವಿದ್ದಾರೆ. ಕೊಹ್ಲಿ ಮೂರೂ ಸ್ವರೂಪದಲ್ಲೂ ಅತ್ಯದ್ಭುತ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ಕೊಹ್ಲಿ 53.62ರ ಸರಾಸರಿಯಲ್ಲಿ ರನ್‌ ಗಳಿಸಿದ್ದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ನಾಗಾಲೋಟಕ್ಕೆ ಸ್ಮಿತ್ ಅಡ್ಡಿಯಾಗಿದ್ದಾರೆ.

ಟೆಸ್ಟ್ ಅಂಕದಲ್ಲಿ ಕೊಹ್ಲಿಗಿಂತ ಸ್ಮಿತ್ ಮುಂದೆ

ಟೆಸ್ಟ್ ಅಂಕದಲ್ಲಿ ಕೊಹ್ಲಿಗಿಂತ ಸ್ಮಿತ್ ಮುಂದೆ

ದೀರ್ಘಾವಧಿ ಕ್ರಿಕೆಟ್‌ನಲ್ಲಿ ಸ್ಟೀವನ್‌ ಸ್ಮಿತ್‌ ಅವರನ್ನು ಹಿಂದಿಕ್ಕುವುದು ಕೊಹ್ಲಿಗೂ ಕಠಿಣ ಸವಾಲಾಗಿದೆ. 911 ಅಂಕಗಳೊಂದಿಗೆ ಸ್ಮಿತ್‌ ಟೆಸ್ಟ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ವಿರಾಟ್‌ ಕೊಹ್ಲಿ 886 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಉಳಿದಿದ್ದಾರೆ.

Story first published: Sunday, June 7, 2020, 21:46 [IST]
Other articles published on Jun 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X