ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ 2ನೇ ಪಂದ್ಯ ಗೆಲ್ಲಬೇಕಾದರೆ ಈ ಆಟಗಾರ ಆಡುವ ಬಳಗದಲ್ಲಿ ಬೇಕೇ ಬೇಕು: ವಾಸಿಮ್ ಜಾಫರ್

Wasim Jaffer said India should include Axar Patel in playing XI for next ODI against Bangladesh

ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಸೊಲು ಅನುಭವಿಸಿದ ಕಾರಣದಿಂದಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಟೀಮ್ ಇಂಡಿಯಾ ಒಂದೆರಡು ಬದಲಾವಣೆಯೊಂದಿಗೆ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಓರ್ವ ಆಟಗಾರನಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಅವಕಾಶ ವಂಚಿತವಾಗಿದ್ದ ಟೀಮ್ ಇಂಡಿಯಾದ ಆಲ್‌ರೌಂಡರ್‌ಗೆ ಅಂತಿಒಮ ಪಂದ್ಯದಲ್ಲಿ ಅವಕಾಶವನ್ನು ನೀಡಬೇಕಿದೆ. ಹಾಗಾದರೆ ಟೀಮ್ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಮಣಿಸುವುದು ಸಾಧ್ಯ ಎಂದಿದ್ದಾರೆ ವಾಸಿಮ್ ಜಾಫರ್.

Pak vs Eng: ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ, ಎರಡನೇ ಟೆಸ್ಟ್‌ನಿಂದ ಪ್ರಮುಖ ಬೌಲರ್ ಹೊರಕ್ಕೆPak vs Eng: ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ, ಎರಡನೇ ಟೆಸ್ಟ್‌ನಿಂದ ಪ್ರಮುಖ ಬೌಲರ್ ಹೊರಕ್ಕೆ

ಅಕ್ಷರ್ ಪಟೇಲ್‌ಗೆ ಅವಕಾಶ ನೀಡಿ

ಅಕ್ಷರ್ ಪಟೇಲ್‌ಗೆ ಅವಕಾಶ ನೀಡಿ

ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ. ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲವನ್ನು ಒದಗಿಸುವ ಕಾರಣದಿಂದಾಗಿ ಕುಲ್‌ದೀಪ್ ಸೇನ್ ಬದಲಿಗೆ ಅಕ್ಷರ್ ಪಟೇಲ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ ಜಾಫರ್. "ನನ್ನ ಪ್ರಕಾರ ಅಕ್ಷರ್ ಪಟೇಲ್ ಅವರನ್ನು ಕುಲ್‌ದೀಪ್ ಸೇನ್ ಬದಲಿಗೆ ಅವಕಾಶ ನೀಡಬೇಕು. ಒಟ್ಟಾರೆಯಾಗಿ ನೋಡಿದಾಗ ನಾವು ವಿಶ್ವಕಪ್‌ನತ್ತ ಸಾಗುತ್ತಿದ್ದೇವೆ. ಅದಕ್ಕೂ ಮುನ್ನ 20-25 ಪಂದ್ಯಗಳನ್ನು ನಾವು ಆಡಲಿದ್ದೇವೆ. ಹೀಗಾಗಿ ಅಕ್ಷರ್ ಪಟೇಲ್‌ಗೆ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ನೀಡಬೇಕು. ಅಲ್ಲದೆ ಇಂಥಾ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗುತ್ತಾರೆ. ಶಕೀಬ್ ಅವರ ಬೌಲಿಂಗನ್ನು ನಾವು ನೋಡಿದ್ದೇವೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್.

"ಸ್ಪಿನ್ನರ್‌ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕಾಗಿತ್ತು"

ಇನ್ನು ಮುಂದುವರಿದು ಮಾತನಾಡಿದ ಅಕ್ಷರ್ ಪಟೇಲ್ ಟೀಮ್ ಇಂಡಿಯಾದ ಬ್ಯಾಟರ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಶಕೀಬ್ ಅಲ್ ಹಸನ್ ಹಾಗೂ ಎಬಾದತ್ ಹುಸೇನ್ ಬೌಲಿಂಗ್‌ನಲ್ಲಿ ಬೌಲಿಂಗ್ ಉತ್ತಮವಾಗಿ ಆಡಬೇಕಾಗಿತ್ತು ಎಂದಿದ್ದಾರೆ. "ಭಾರತದ ಬ್ಯಾಟರ್‌ಗಳು ಶಕೀಬ್ ಅಲ್ ಹಸನ್ ಹಾಗೂ ಎಬಾದತ್ ಹುಸೈನ್ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ನಡೆಸುವ ಅಗತ್ಯವಿತ್ತು. ವಿಶೇಷವಾಗಿ ಶಕೀಬ್ ಬೌಲಿಂಗ್ ವಿರುದ್ಧ. ಒಂದು ವೇಳೆ ಶಕೀಬ್ ಬೌಲಿಂಗ್‌ನಲ್ಲಿ ವಿಕೆಟ್ ನೀಡದೇ ಇದ್ದರೆ ಇತರ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತಿತ್ತು. ಅವರಿಗೆ ವಿಕೆಟ್ ನೀಡದೇ ಇದ್ದರೆ ಭಾರತ ಉತ್ತಮವಾಗಿ ಪ್ರದರ್ಶನ ನೀಡುತ್ತಿತ್ತು" ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಶಕೀಬ್ ಅಲ್ ಹಸನ್.

ಭಾರತದ ಬೆಂಬಲಕ್ಕೆ ನಿಂತ ಜಾಫರ್

ಭಾರತದ ಬೆಂಬಲಕ್ಕೆ ನಿಂತ ಜಾಫರ್

ಇನ್ನು ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ ಟೀಮ್ ಇಂಡಿಯಾ ತಂಡದ ಪರವಾಗಿ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಮಾತನಾಡಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಜಾಫರ್ "ಒಂದು ಕೆಟ್ಟ ದಿನದಂದು ಬಮದ ಫಲಿತಾಂಶ ಅದು. ಆದರ ರೋಹಿತ್ ಶರ್ಮಾ ಹಾಗೂ ತಂಡ ಖಂಡಿತವಾಗಿಯೂ ತಿರುಗೇಟು ನೀಡಲಿದ್ದಾರೆ. ನಾನು ಇಲ್ಲಿ ಹೆಚ್ಚು ರನ್‌ಗಳನ್ನು ನಿರೀಕ್ಷಿಸುವುದಿಲ್ಲ. 230-240 ರನ್‌ಗಳನ್ನು ಗಳಿಸಿದರೆ ಉತ್ತಮ ಮೊತ್ತವಾಗಬಹುದು" ಎಂದಿದ್ದಾರೆ ವಾಸಿಮ್ ಜಾಫರ್.

ಬುಧವಾರ ನಡೆಯಲಿದೆ ಎರಡನೇ ಪಂದ್ಯ

ಬುಧವಾರ ನಡೆಯಲಿದೆ ಎರಡನೇ ಪಂದ್ಯ

ಡಿಸೆಂಬರ್ 7 ಬುಧವಾರದಂದು ಈ ಸರಣಿಯ ಎರಡೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ನಡೆದ ಢಾಕಾದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಈ ಪಂದ್ಯ ಕೂಡ ನಡೆಯಲಿದ್ದು ಟೀಮ್ ಇಂಡಿಯಾ ಪಾಲಿಗೆ ಈ ಸರಣಿ ಅತ್ಯಂತ ನಿರ್ಣಾಯಕವಾಗಲಿದೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ಕಾರಣ ಎರಡನೇ ಪಂದ್ಯದಲ್ಲಿಯೂ ಸೋಲು ಅನುಭವಿಸಿದರೆ ಬಾಂಗ್ಲಾದೇಶ ಭಾರತದ ವಿರುದ್ಧ ಏಕದಿನ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಹೀಗಾಗಿ ಬುಧವಾರ ನಡೆಯಲಿರುವ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿದೆ.

Story first published: Tuesday, December 6, 2022, 15:42 [IST]
Other articles published on Dec 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X