ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ವಿಶ್ವದಾಖಲೆ ಮುರಿಯುವ ಸಾಮರ್ಥ್ಯ ಈತನಿಗಿದೆ: ವಾಸಿಮ್ ಜಾಫರ್ ಹೇಳಿಕೆ

Wasim Jaffer said Joe Root has a chance to surpass Sachin Tendulkars most Test runs record

15 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಗಿದೆ. 2-1 ಅಂತರದಿಂದ ಮುನ್ನಡೆ ಸಾಧಿಸಿದ್ದ ಭಾರತ ಅಂತಿಮ ಪಂದ್ಯವನ್ನು ಗೆಲ್ಲುವ ಅದ್ಭುತ ಅವಕಾಶ ಹೊಂದಿತ್ತು. ಆದರೆ ತನ್ನದೇ ತಪ್ಪಿನಿಂದಾಗಿ ಪಂದ್ಯವನ್ನು ಸೋಲುವಂತಾಯಿತು. ಹೀಗಾಗಿ ಸರಣಿಯನ್ನು ಆತಿಥೆಯ ಇಂಗ್ಲೆಂಡ್ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತ ನೀಡಿದ್ದ 378 ರನ್‌ಗಳ ಗುರಿಯನ್ನು ಇಂಗ್ಲೆಂಡ್ ತಂಡ ಸುಲಭವಾಗಿ ಬೆನ್ನಟ್ಟಿ ಗೆದ್ದು ಬೀಗಿತ್ತು.

ಇಂಗ್ಲೆಂಡ್ ತಂಡದ ಪರವಾಗಿ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಅಮೋಘ ಪ್ರದರ್ಶನ ನೀಡಿ ಶತಕದ ಸಾಧನೆ ಮಾಡುವ ಮುಲಕ ಈ ಗೆಲಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಇತ್ತೀಚೆಗೆ ಅಮೋಘ ಫಾರ್ಮ್‌ನಲ್ಲಿದ್ದು ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಜೋ ರೂಟ್ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲು ದಾಟಿದ್ದು ಮುನ್ನುಗ್ಗುತ್ತಿದ್ದಾರೆ.

ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!ಭಾರತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!

ಜೋ ರೂಟ್ ಅವರ ಈ ಪ್ರದರ್ಶನದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಜೋ ರೂಟ್ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಫಾರ್ಮ್‌ನಲ್ಲಿ ಮುಂದುವರಿದರೆ ಸಾಧ್ಯ

ಇದೇ ಫಾರ್ಮ್‌ನಲ್ಲಿ ಮುಂದುವರಿದರೆ ಸಾಧ್ಯ

ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಇದೇ ಫಾರ್ಮ್‌ನಲ್ಲಿ ಮುಂದುವರಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ ಬರೆಯಬಹುದು ಎಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿನ ರನ್‌ಗಳಿಸಿರುವ ದಾಖಲೆ ಸದ್ಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದು ಇದೇ ಪ್ರದರ್ಶನ ಮುಂದಿನ ಐದರಿಂದ ಆರು ವರ್ಷ ವರ್ಷಗಳ ಕಾಲ ಬಂದರೆ ಜೋ ರೂಟ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವ ಅವಕಾಶವಿದೆ ಎಂದಿದ್ದಾರೆ.

ರೂಟ್‌ಗೆ ಉತ್ತಮ ಅವಕಾಶವಿದೆ

ರೂಟ್‌ಗೆ ಉತ್ತಮ ಅವಕಾಶವಿದೆ

ಜೋ ರೂಟ್ ಸುದೀರ್ಘ ಕಾಲ ಆಡಿದರೆ ಈ ದಾಖಲೆ ಮುರಿಯುವ ಅವಕಾಶವಿದೆ. ಅವರಿಗಿನ್ನೂ ಕೇವಲ 31 ವರ್ಷ ವಯಸ್ಸು. ಆದರೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯನ್ ಆಟಗಾರರು ಸುದೀರ್ಘ ಕಾಲ ವೃತ್ತಿ ಜೀವನದಲ್ಲಿ ಮುಂದುವರಿಯುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ ಜೋ ಉಟ್ ಮುಂದಿನ ಐದಾರು ವರ್ಷಗಳ ಕಾಲ ಆಡಿ ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ಈ ದಾಖಲೆ ಮುರಿಯಬಹುದು" ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್.

ಕೊಹ್ಲಿ, ಸ್ಮಿತ್ ಹಿಂದಿಕ್ಕಿದ ಜೋ ರೂಟ್

ಕೊಹ್ಲಿ, ಸ್ಮಿತ್ ಹಿಂದಿಕ್ಕಿದ ಜೋ ರೂಟ್

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಜೋ ರೂಟ್ ಮತ್ತೊಂದು ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 18 ಶತಕಗಳಿಸುವ ಮೂಲಕ ಹಾಶಿಂ ಆಮ್ಲ ಹಾಗೂ ಮೈಕಲ್ ಕ್ಲಾರ್ಕ್ ಶತಕದ ಸಾಧನೆಯನ್ನು ಸರಿಗಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಪ್ರಸ್ತುತ ವಿಶ್ವದ ನಂಬರ್ 1 ಬ್ಯಾಟರ್ ಎನಿಸಿಕೊಂಡಿರುವ ರೂಟ್ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್ ಅವರ 27 ಶತಕಗಳ ಸಾಧನೆಯನ್ನು ಹಿಂದಿಕ್ಕಿದ್ದಾರೆ.

T20 ವಿಶ್ವಕಪ್ ನಿಂದ ವಿರಾಟ್ ಕೊಹ್ಲಿ ಔಟ್!! ಮತ್ತಷ್ಟು ಅವಕಾಶ ಕೊಡೋದಕ್ಕೆ ಆಗಲ್ಲ BCCI | *Cricket | OneIndia
ಟೆಸ್ಟ್‌ನಲ್ಲಿ ರೂಟ್ ಸಾಧನೆ

ಟೆಸ್ಟ್‌ನಲ್ಲಿ ರೂಟ್ ಸಾಧನೆ

ಜೋ ರೂಟ್ ಈವರೆಗೆ 121 ಟೆಸ್ಟ್ ಪಂದ್ಯಗಳನ್ನು ಆಡಿದ್ದು 10,458 ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಫ್ಯಾಬ್ 4 ಎನಿಸಿಕೊಂಡಿರುವ ಆಟಗಾರರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 15,921 ರನ್‌ಗಳಿಸಿದ್ದು ಈ ಬೃಹತ್ ದಾಖಲೆ ಮುರಿಯಲು ರೂಟ್ ಈಗಿನ ಫಾರ್ಮ್‌ನ್ಲಲಿ ಸುದೀರ್ಘ ಕಾಲ ಮುಂದುವರಿಯಬೇಕಿದೆ ಎಂಬುದು ನಿಜ.

Story first published: Thursday, July 7, 2022, 17:43 [IST]
Other articles published on Jul 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X