ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆಂಡಿನ ಮೇಲೆ ತಪ್ಪು ದಿನಾಂಕ ಬರೆದು ಟ್ರೋಲ್ ಆದ ಅಕ್ಷರ್ ಪಟೇಲ್‌: ಸೂರ್ಯಕುಮಾರ್ ಮೇಲೆ ಆರೋಪ

axar patel

ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಪ್ರಬಲ ಬೌಲಿಂಗ್ ದಾಳಿಯ ಮೂಲಕ ನ್ಯೂಜಿಲೆಂಡ್ ತಂಡವನ್ನ 296 ರನ್‌ಗಳಿಗೆ ಆಲೌಟ್ ಮಾಡಿತು. ಉತ್ತಮ ಆರಂಭಿಕ ಜೊತೆಯಾಟದಿಂದಾಗಿ ಬೃಹತ್ ಮೊತ್ತ ಕಲೆಹಾಕುವ ಹೆಜ್ಜೆ ಇಟ್ಟಿದ್ದ ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಅಕ್ಷರಶಃ ಟೀಂ ಇಂಡಿಯಾ ಸ್ಪಿನ್ನರ್ಸ್‌ ಕಂಟಕವಾದ್ರು.

ಅದ್ರಲ್ಲೂ ಐದು ವಿಕೆಟ್ ಕಬಳಿಸಿದ ಅಕ್ಷರ್ ಪಟೇಲ್ ನ್ಯೂಜಿಲೆಂಡ್ ಒಂದೊಂದೇ ವಿಕೆಟ್ ಕಬಳಿಸುತ್ತಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐದನೇ ಬಾರಿಗೆ ಐದು ವಿಕೆಟ್ ಪಡೆದು ಮಿಂಚಿದ್ರು. ಹೆನ್ರಿ ನಿಕೋಲ್ಸ್ (2), ಶತಕ ಗಡಿಯಲ್ಲಿ ಮುಗ್ಗರಿಸಿದ ಟಾಮ್ ಲಥಾಮ್ (95), ಟಾಮ್ ಬ್ಲಂಡೆಲ್ (13), ಟಿಮ್ ಸೌಥಿ (5) ರನ್‌ ಗಳಿಸಿ ಅಕ್ಷರ್‌ಗೆ ವಿಕೆಟ್ ಒಪ್ಪಿಸಿದ್ರು.

ಐದು ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಕಂಟಕನಾದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಐದು ಬಾರಿ ಐದು ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್ ಆಗಿದ್ದಾರೆ. ಈ ಮೂಲಕ ಲೆಜೆಂಡರಿ ಪ್ಲೇಯರ್ಸ್ ಟಾಮ್ ರಿಚರ್ಡ್‌ಸನ್, ರೊಡ್ನಿ ಹಾಗ್ ಜೊತೆಗೆ ದಾಖಲೆ ಹಂಚಿಕೊಂಡಿದ್ದಾರೆ. ಚಾರ್ಲಿ ಟರ್ನರ್ ಆರು ಬಾರಿ ಈ ಸಾಧನೆ ಮಾಡಿದ್ರು.

ಮೂರನೇ ದಿನ ಮುಕ್ತಾಯದ ನಂತರದ ಸಂದರ್ಶನ ವೇಳೆ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದರು. ಇದೇ ವೇಳೆ ಆತ ಚೆಂಡಿನ ಮೇಲೆ ಐದು ವಿಕೆಟ್ ಪಡೆದಿರುವ ಕುರಿತು ಮಾಹಿತಿಯನ್ನು ಬರೆಯಲಾಗಿತ್ತು. 34 ಓವರ್ 6 ಮೇಡನ್ 62 ರನ್ 5 ವಿಕೆಟ್, IND vs NZ" ಎಂದು ಬರೆಯಲಾಗಿದೆ.

ಆದ್ರೆ ಇಲ್ಲಿ ತಮಾಶೆಯ ವಿಚಾರ ಏನಂದ್ರೆ, ಚೆಂಡಿನ ಮೇಲೆ ದಿನಾಂಕವನ್ನು 10ನೇ ಅಕ್ಟೋಬರ್ 2021 ಎಂದು ಬರೆಯಲಾಗಿದೆ. ಹೀಗೆ ತಪ್ಪಾಗಿ ದಿನಾಂಕ ಬರೆದಿರೋದನ್ನ ಗಮನಿಸಿರುವ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಕೂಡ ಅಯ್ಯರ್ ಅವರನ್ನು ಟ್ರೋಲ್ ಮಾಡುವುದನ್ನು ತಪ್ಪಿಸಲಿಲ್ಲ.

"ಅಕ್ಸರ್ ಪಟೇಲ್ ಇಂದು ಮಾಡಿದ ಏಕೈಕ ತಪ್ಪು ಎಂದರೆ ಪಂದ್ಯದ ಚೆಂಡಿನಲ್ಲಿ ತಪ್ಪು ದಿನಾಂಕವನ್ನು ಹಾಕುವುದು. ನವೆಂಬರ್ 27 ಹಾಯ್ ಬಾಪು @akshar2026 #INDvNZ" ಎಂದು ಫೋಟೋ ಹಂಚಿಕೊಂಡ ನಂತರ ಜಾಫರ್ ಟ್ವೀಟ್ ಮಾಡಿದ್ದಾರೆ.

ಆದ್ರೆ ಈ ತಪ್ಪಾಗಿ ನಮೂದಿಸಿರುವ ದಿನಾಂಕವನ್ನು ನಾನು ಬರೆದಿಲ್ಲ, ಬೆಂಚ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಮಾಡಿರೋದು ಎಂದು ಪಟೇಲ್ ತಕ್ಷಣವೇ ವಾಸಿಂ ಜಾಫರ್ ಪೋಸ್ಟ್‌ಗೆ ಉತ್ತರಿಸಿದ್ದಾರೆ.

ಇದೇ ವೇಳೆ ತನ್ನ ಬಿರುಸಿನ ಹೊಡೆತಗಳಿಗೆ ಹೆಸರುವಾಸಿಯಾಗಿರುವ ಎಡಗೈ ಸ್ಪಿನ್ನರ್, ಟೆಸ್ಟ್ ಪಂದ್ಯಗಳಲ್ಲಿ ಮಿಂಚಲು ಅವರು ಯಾವಾಗಲೂ ತಮ್ಮನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.

"ನಾನು ವೈಟ್ ಬಾಲ್ ಆಟಗಾರ ಎಂದು ಯಾರು ಹೇಳಿದರು ಎಂದು ನನಗೆ ತಿಳಿದಿಲ್ಲ. ನಾನು ಪ್ರಥಮ ದರ್ಜೆ ಕ್ರಿಕೆಟ್ ಅಥವಾ ಭಾರತ ಎ ಪರ ಆಡಿದಾಗಲೆಲ್ಲಾ ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ನಾನು ವೈಟ್-ಬಾಲ್ ಆಟಗಾರ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ನಿಮ್ಮನ್ನು ವೈಟ್ ಬಾಲ್ ಅಥವಾ ರೆಡ್ ಬಾಲ್ ಕ್ರಿಕೆಟರ್ ಎಂದು ನೀವು ಭಾವಿಸಿಕೊಂಡರೂ ಇದು ಮನಸ್ಥಿತಿಗೆ ಸಂಬಂಧಿಸಿದೆ, "ಎಂದು ಅವರು ಆಟದ ನಂತರ ಹೇಳಿದರು.

KS Bharath ಪಂದ್ಯಕ್ಕೆ ಸಿದ್ದವಾಗಿದ್ದು ಕೇವಲ 12 ನಿಮಿಷದಲ್ಲಿ | Oneindia Kannada

ಅಕ್ಷರ್ ಪಟೇಲ್ ಇದುವರೆಗೂ ಆಡಿರುವ 4 ಟೆಸ್ಟ್ ಪಂದ್ಯಗಳು ಏಳು ಇನ್ನಿಂಗ್ಸ್‌ಗಳಿಂದ 32 ವಿಕೆಟ್ ಕಬಳಿಸಿದ್ದಾರೆ. ಐದು ಬಾರಿ 5 ವಿಕೆಟ್ ಮತ್ತು 1 ಬಾರಿ ಹತ್ತು ವಿಕೆಟ್ ಪಡೆದಿದ್ದಾರೆ.

Story first published: Saturday, November 27, 2021, 23:26 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X