ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!

IPL 2019: ಆಸ್ಟ್ರೇಲಿಯಾಗೆ ಹೋದ ವ್ಯಾಟ್ಸನ್ ಏನಂದ್ರು ಗೊತ್ತಾ..! | Oneindia kannada
Watson confident of CSK coming back stronger in 2020

ಮೆಲ್ಬೋರ್ನ್‌, ಮೇ 16: ಇತ್ತೀಚೆಗೆ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್‌ ಲೀಗ್‌ ಹಂತದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವೇನೂ ನೀಡಲಿಲ್ಲ. ಆದರೆ, ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಪುಟಿದೆದ್ದ ವ್ಯಾಟೊ, ಮುಂಬಯಿ ಇಂಡಿಯನ್ಸ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ 80 ರನ್‌ಗಳನ್ನು ಸಿಡಿಸಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದ್ದರು.

IPL: ಸೂಪರ್‌ ಕಿಂಗ್ಸ್‌ ಗೆಲುವಿಗಾಗಿ ರಕ್ತವನ್ನೇ ಹರಿಸಿದ್ದ ಶೇನ್‌ ವ್ಯಾಟ್ಸನ್‌!IPL: ಸೂಪರ್‌ ಕಿಂಗ್ಸ್‌ ಗೆಲುವಿಗಾಗಿ ರಕ್ತವನ್ನೇ ಹರಿಸಿದ್ದ ಶೇನ್‌ ವ್ಯಾಟ್ಸನ್‌!

ಇನ್ನು ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೇಳೆ ಮೂರನೇ ಓವರ್‌ನಲ್ಲೇ ಎಡಗಾಲಿನ ಮಂಡಿ ಹರಿದು ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದ ವ್ಯಾಟ್ಸನ್‌, ಈ ವಿಚಾರವನ್ನು ಯಾರಿಗೂ ಹೇಳದೆ ಸಿಎಸ್‌ಕೆ ಗೆಲುವಿಗಾಗಿ ಕೊನೆಯ ಓವರ್‌ ವರೆಗೂ ಹೋರಾಟ ಹಿಡಿದಿಟ್ಟಿದ್ದರು. ದುರದೃಷ್ಟವಶಾತ್‌ ವ್ಯಾಟ್ಸನ್‌ 59 ಎಸೆತಗಳಲ್ಲಿ 80 ರನ್‌ಗಳನ್ನು ಚಚ್ಚಿದರೂ ತಂಡ 1 ರನ್‌ಗಳಿಂದ ಫೈನಲ್‌ನಲ್ಲಿ ಸೋಲನುಭವಿಸಿತು.

ನಿಂದನೆ ಮತ್ತು ಮಾನಸಿಕ ಕಿರುಕುಳಕ್ಕೆ RCB ಫ್ಯಾನ್‌ ಗರ್ಲ್‌ ಉತ್ತರ!ನಿಂದನೆ ಮತ್ತು ಮಾನಸಿಕ ಕಿರುಕುಳಕ್ಕೆ RCB ಫ್ಯಾನ್‌ ಗರ್ಲ್‌ ಉತ್ತರ!

ಆದರೆ, ತಂಡಕ್ಕಾಗಿ ರಕ್ತವನ್ನೇ ಹರಿಸಿದ್ದ ವ್ಯಾಟ್ಸನ್‌ ಅವರ ಬದ್ಧತೆ ಕಂಡು ಇಡೀ ಕ್ರಿಕೆಟ್‌ ಜಗತ್ತೇ ಶರಣು ಶರಣೆಂದಿತ್ತು. ಇದೀಗ 37 ವರ್ಷದ ಆಟಗಾರ ತಮಗೆ ಅಪಾರ ಪ್ರೀತಿ ತೋರಿದ ಅಭಿಮಾನಿಗಳಿಗಾಗಿ ಆಸ್ಟ್ರೇಲಿಯಾದಿಂದ ವಿಡಿಯೊ ಸಂದೇಶವೊಂದನ್ನು ಇನ್‌ಸ್ಟಾಗ್ರಾಮ್‌ ಮೂಲಕ ರವಾನಿಸಿದ್ದು, 2020ರ ಐಪಿಎಲ್‌ನಲ್ಲಿ ಚೆನ್ನೈ ಪ್ರಶಸ್ತಿ ಗೆಲ್ಲುತ್ತದೆ ಎಂಬ ಭರವಸೆ ನೀಡಿದ್ದಾರೆ.

ಜೊತೆಗೆ ತಂಡದಲ್ಲಿ ಆಡಲು ತಾವು ಮರಳುವುದಾಗಿ ಹೇಳುವ ಮೂಲಕ ಐಪಿಎಲ್‌ನಿಂದ ಅವರು ನಿವೃತ್ತಿ ಹೊಂದುತ್ತಾರೆಂಬ ಊಹಾಪೋಹಗಳಿಗೂ ತೆರೆ ಬಿದ್ದಂತಾಗಿದೆ. ವ್ಯಾಟ್ಸನ್‌ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಟಿ20 ಲೀಗ್‌ನಿಂದ ನಿವೃತ್ತಿ ಹೊಂದಿದ್ದರು.

IPL: ಸೋಲಿನ ಬಳಿಕ ಸಿಎಸ್‌ಕೆಗೆ ವಯಸ್ಸಾಗ್ತಿದೆ ಎಂದ ಕೋಚ್‌ ಫ್ಲೆಮಿಂಗ್‌!IPL: ಸೋಲಿನ ಬಳಿಕ ಸಿಎಸ್‌ಕೆಗೆ ವಯಸ್ಸಾಗ್ತಿದೆ ಎಂದ ಕೋಚ್‌ ಫ್ಲೆಮಿಂಗ್‌!

"ಹಲೋ ಎವ್ರಿವನ್‌, ಈಗಷ್ಟೇ ನನ್ನ ಮನೆ ತಲುಪಿದ್ದೇನೆ. ಕಳೆದ ಎರಡು ದಿನಗಳಿಂದ ನನಗೆ ಅಪಾರ ಪ್ರೀತಿ, ಗೌರವ ಹಾಗೂ ಬೆಂಬ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮುಂಬೈ ವಿರುದ್ಧ ಇನನ್ಏನು ಗೆಲ್ಲುವುದರಲ್ಲಿದ್ದೆವು. ಅದೊಂದು ಅದ್ಭುತ ಫೈನಲ್‌. ಮುಂದಿನ ವರ್ಷ ಬಂದು ಆಡಲು ಮತ್ತು ಪ್ರಶಸ್ತಿ ಗೆದ್ದು ಕೊಡಲು ಎದುರು ನೋಡುತ್ತಿದ್ದೇನೆ. ಬೆಂಬಲಕ್ಕೆ ಮತ್ತೊಮ್ಮೆ ಧನ್ಯವಾದ. ವಿಸಿಲ್‌ ಪೋಡು,'' ಎಂದು ವ್ಯಾಟ್ಸನ್‌ ತಮ್ಮ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

IPL: ಮುಂಬೈ ಇಂಡಿಯನ್ಸ್‌ಗೆ 4ರ, ರೋಹಿತ್‌ ಶರ್ಮಾಗೆ 5ರ ಸಂಭ್ರಮ!

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 149 ರನ್‌ಗಳನ್ನು ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಸೂಪರ್‌ ಕಿಂಗ್ಸ್‌ ಸಂಪೂರ್ಣ ಓವರ್‌ಗಳ ಮುಕ್ತಾಯಕ್ಕೆ 8 ವಿಕೆಟ್‌ ನಷ್ಟದಲ್ಲಿ 148 ರನ್‌ಗಳನ್ನು ಗಳಿಸಿ ಸೋಲಿಗೆ ಶರಣಾಯಿತು.

Story first published: Thursday, May 16, 2019, 16:27 [IST]
Other articles published on May 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X