ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ಲೋಕದ ಅಧಿಪತಿ ಟೀಮ್ ಇಂಡಿಯಾ

ICC World Test Championship: Way ahead in race, Team India keeps winning streak | Oneindia kannada
Way ahead in race, Team India keeps gaining steam

ಟೆಸ್ಟ್‌ ಕ್ರಿಕೆಟ್ ಲೋಕದಲ್ಲಿ ಟೀಮ್ ಇಂಡಿಯಾ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಅದರಲ್ಲೂ ವಿಶ್ವ ಟೆಸ್ಟ್‌ ಚಾಂಪಿಯನ್ಶಿಪ್ ಆರಂಭವಾದ ಬಳಿಕ ಭಾರತೀಯ ಆಟಗಾರರು ಮತ್ತಷ್ಟು ಆಕ್ರಮಣಕಾರಿಯಾಗಿದ್ದಾರೆ. ಇದಕ್ಕೆ ಆಡಿರುವ ಸರಣಿಯ ಫಲಿತಾಂಶಗಳೇ ಸಾಕ್ಷಿ.

ಇಲ್ಲಿಯವರೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ 7ಪಂದ್ಯಗಳನ್ನು ಆಡಿದ್ದು 7ರಲ್ಲೂ ಗೆದ್ದು ಬೀಗಿದೆ. ಹೀಗಾಗಿ ವಿಶ್ವ ಟೆಸ್ಟ್‌ ಚಾಂಪಿಯನ್ಸಿಪ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ತನ್ನ ಸ್ಥಾನವನ್ನು ಭಧ್ರಗೊಳಿಸಿದೆ. 7 ಪಂದ್ಯಗಳಿಂದ ಭಾರತ 360 ಅಂಕಗಳಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 116 ಅಂಕವನ್ನಷ್ಟೇ ಗಳಿಸಿಕೊಂಡಿದೆ. ಎರಡನೇ ಸ್ಥಾನದಿಂದ 244 ಅಂಕದ ಅಂತರವನ್ನು ಟೀಮ್ ಇಂಡಿಯಾ ಕಾಯ್ದುಕೊಂಡಿದೆ.

ಪಿಂಕ್ ಬಾಲ್ ಟೆಸ್ಟ್ ಗೆದ್ದ ನಾಯಕನಾಗಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ ಪಿಂಕ್ ಬಾಲ್ ಟೆಸ್ಟ್ ಗೆದ್ದ ನಾಯಕನಾಗಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಪ್ರಾಬಲ್ಯತೆ ಎಷ್ಟಿದೆ ಅನ್ನೋದನ್ನು ಮತ್ತೊಂದು ಕುತೂಹಲಕಾರಿ ಅಂಕಿಅಂಶ ಬಯಲುಗೊಳಿಸುತ್ತದೆ. ಅದೇನೆಂದರೆ ವಿಶ್ವ ಟೆಸ್ಟ್‌ ಚಾಂಪಿಯನ್ಸಿಪ್‌ನ ಅಂಕ ಪಟ್ಟಿಯಲ್ಲಿ ಉಳಿದೆಲ್ಲಾ ತಂಡಗಳು ಗಳಿಸಿದ ಅಂಕವನ್ನು ಒಟ್ಟುಗೂಡಿಸಿರೂ ಟೀಮ್ ಇಂಡಿಯಾದ ಸಮೀಪಕ್ಕೂ ಸುಳಿಯುವುದಿಲ್ಲ.

ಅಂಕಪಟ್ಟಿ ಯಲ್ಲಿ ಆಸ್ಟ್ರೇಲಿಯಾ116 ಅಂಕಗಳಿಸಿದ್ದರೆ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ತಲಾ 60 ಅಂಕ ಗಳಿಸಿಕೊಂಡಿದೆ. ಐದನೇ ಸ್ಥಾನದಲ್ಲಿರುವ ಇಂಗ್ಲೆಂಡ್ 56 ಅಂಕಗಳಿಸಿಕೊಂಡಿದೆ. ಉಳಿದಂತೆ ಪಾಕಿಸ್ತಾನ, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಇನ್ನು ಖಾತೆಯನ್ನು ತೆರೆದಿಲ್ಲ. ಹೀಗಾಗಿ ಉಳಿದೆಲ್ಲಾ ತಂಡಗಳ ಅಂಕಗಳನ್ನು ಒಟ್ಟುಗೂಡಿಸಿದರೆ 292 ಅಂಕಗಳಷ್ಟೆ ಆಗುತ್ತದೆ.

ಪಿಂಕ್ ಟೆಸ್ಟ್‌ನ ಭವಿಷ್ಯದ ಯೋಜನೆ ಹಂಚಿಕೊಂಡ ದಾದಾಪಿಂಕ್ ಟೆಸ್ಟ್‌ನ ಭವಿಷ್ಯದ ಯೋಜನೆ ಹಂಚಿಕೊಂಡ ದಾದಾ

ಈ ಅಂಕಿಅಂಶಗಳು ಭಾರತದ ಪ್ರಾಬಲ್ಯತೆಯನ್ನು ತಿಳಿಸುತ್ತದೆ. ಈ ವರ್ಷಾಂತ್ಯದಲ್ಲಿ ಭಾರತ ಇದೇ ಸ್ಥಾನದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನಗಳೂ ಇಲ್ಲ. ಮುಂದಿನ ಸರಣಿಗಳಲ್ಲೂ ಇದೇ ರೀತಿಯ ಪ್ರದರ್ಶನ ಬರಲಿ ಅನ್ನೋದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

Story first published: Tuesday, November 26, 2019, 12:15 [IST]
Other articles published on Nov 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X