ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಧೋನಿ ವಿಭಿನ್ನ ಬ್ಯಾಟ್‌ಗಳನ್ನು ಬಳಸುತ್ತಿರುವುದೇಕೆ ಗೊತ್ತಾ?

WC 2019: Dhoni using different bat logos as goodwill gesture

ಲಂಡನ್‌, ಜುಲೈ 05: ಭಾರತ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಅನಿರೀಕ್ಷಿತ ಹಾಗೂ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ರಿಕೆಟ್‌ ಜಗತ್ತಿನಲ್ಲಿ ಅಭಿಮಾನಿಗಳ ಮನದಲ್ಲಿ ತಮ್ಮದೇ ಆದ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲೂ ಧೋನಿ ಇದೇ ರೀತಿಯ ಅಚ್ಚರಿ ತಂದಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

2007 ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ತಂಡದ ಅನನುಭವಿ ಬೌಲರ್‌ ಜೋಗಿಂದರ್‌ ಶರ್ಮಾ ಅವರಿಗೆ ಕೊನೆಯ ಓವರ್‌ ಬೌಲ್‌ ಮಾಡಲು ನೀಡಿದ್ದಾಗಿರಬಹುದು, 2011ರ ವಿಶ್ವಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಬ್ಯಾಟಿಂಗ್‌ ಕ್ರಮಾಂಕದಲ್ಲಿ ಮೇಲ್ಬಂದು ಆಡಿದ್ದಾಗಿರಬಹುದು ಧೋನಿ ಹಲವು ಬಾರಿ ಅಚ್ಚರಿಯ ನಿರ್ಧಾರಗಳೊಂದಿಗೆ ಯಶಸ್ಸು ಕಂಡಿದ್ದಾರೆ.

37 ವರ್ಷದ ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಎಂ.ಎಸ್‌ ಧೋನಿ ಅವರಿಗೆ ಈ ಬಾರಿಯ ವಿಶ್ವಕಪ್‌ ಟೂರ್ನಿ ಅವರ ವೃತ್ತಿ ಜೀವನದ ಕೊನೆಯ ವಿಶ್ವಕಪ್‌ ಆಗಿದೆ. ವಿಶ್ವಕಪ್‌ ಬಳಿಕ ಧೋನಿ ನಿವೃತ್ತಿ ಘೋಷಿಸುವುದು ಬಹುತೇಕ ಖಾತ್ರಿಯಾಗಿದೆ.

ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!

ಇಂತಹ ಸಂದರ್ಭದಲ್ಲಿ ಧೋನಿ ಪ್ರತಿ ಪಂದ್ಯದಲ್ಲೂ ವಿಭಿನ್ನ ಲೋಗೊಗಳನ್ನು ಹೊಂದಿರುವ ಕ್ರಿಕೆಟ್‌ ಬ್ಯಾಟ್‌ಗಳನ್ನು ಬಳಕೆ ಮಾಡುತ್ತಿರುವುದಾದರೂ ಏಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಧೋನಿ ತಮ್ಮ ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ ರೀಬಾಕ್‌ ಲೋಗೊ ಹಾಗೂ ಬಳಿಕ ಸ್ಪಾರ್ಟನ್‌ ಲೋಗೊ ಇರುವ ಬ್ಯಾಟ್‌ಗಳನ್ನು ಬಳಕೆ ಮಾಡಿದ್ದೇ ಹೆಚ್ಚು. ಆದರೆ, ಈ ಬಾರಿಯ ವಿಶ್ವಕಪ್‌ನಲ್ಲಿ ಧೋನಿ, ಎಸ್‌ಜಿ, ಎಸ್‌ಎಸ್‌ ಹಾಗೂ ಬಿಎಎಸ್‌ ಲೋಗೊಗಳಿರುವ ಬ್ಯಾಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಅಫಘಾನಿಸ್ತಾನದ ಬ್ಯಾಟ್ಸ್‌ಮನ್‌!ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಅಫಘಾನಿಸ್ತಾನದ ಬ್ಯಾಟ್ಸ್‌ಮನ್‌!

ಇನ್ನು ಧೋನಿ ಅವರ ಮಂದಗತಿಯ ಬ್ಯಾಟಿಂಗ್‌ಗೆ ಈ ಬ್ಯಾಟ್‌ಗಳ ಬಳಕೆ ಕಾರಣವೇ ಎಂದೆಲ್ಲಾ ಚರ್ಚೆಯಾಗುತ್ತಿದೆ. ಆದರೆ, ಧೋನಿಗೆ ಹತ್ತಿರ ಇರುವ ವ್ಯಕ್ತಿಯೊಬ್ಬರು ವಿವಿಧ ಲೋಗೊಗಳನ್ನು ಹೊಂದಿರುವ ಬ್ಯಾಟ್‌ ಬಳಕೆ ಮಾಡುತ್ತಿರುವುದು ಏಕೆ ಎಂಬ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ.

ತಮ್ಮ ಸುದೀರ್ಘಾವಧಿಯ ವೃತ್ತಿ ಬದುಕಿನಲ್ಲಿ ಕ್ರಿಕೆಟ್‌ ಬ್ಯಾಟ್‌ಗಳನ್ನು ಪ್ರಾಯೋಜಕತ್ವ ರೂಪದಲ್ಲಿ ನೀಡಿದ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಧೋನಿ ವಿವಿಧ ಲೋಗೊಗಳನ್ನು ಹೊಂದಿರುವ ಬ್ಯಾಟ್‌ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಬ್ಯಾಟ್‌ ತಯಾರಿಕ ಸಂಸ್ಥೆಗಳಿಂದ ಯಾವುದೇ ಹಣ ಸ್ವೀಕರಿಸಲಿಲ್ಲ ಎಂಬುದು ಪ್ರಶಂಸಾರ್ಹ.

ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರಿಯಾನ್‌ ಲಾರಾ!ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರಿಯಾನ್‌ ಲಾರಾ!

ಸಾಮಾನ್ಯವಾಗಿ ಒಂದು ಲೋಗೊ ಬಳಕೆ ಮಾಡಿ ಆಡಿದ ಧೋನಿ ಆ ಸಂಸ್ಥೆಯಿಂದ ಪ್ರತಿ ಪಂದ್ಯಕ್ಕೆ 10-15 ಲಕ್ಷ ರೂ. ಸಂಭಾವನೆ ತೆಗೆದುಕೊಳ್ಳುತ್ತಾರೆ. ಆದರೆ, ತಮ್ಮ ವೃತ್ತಿ ಬದುಕಿನ ಕೊನೆಯ ಪಂದ್ಯಗಳಲ್ಲಿ ಧೋನಿ ಇಂಥದ್ದೊಂದು ಕ್ರೀಡಾ ಸ್ಫೂರ್ತಿ ಮೆರೆದು ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ.

Story first published: Friday, July 5, 2019, 17:19 [IST]
Other articles published on Jul 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X