T20 World Cup: ಇಂಗ್ಲೆಂಡ್ ಜೊತೆ ಆಡಲು ಇತರೆ ತಂಡಗಳು ಭಯಪಡುತ್ತವೆ ಎಂದ ಮೊಯಿನ್ ಅಲಿ

ಪಾಕಿಸ್ತಾನ ವಿರುದ್ಧ 7 ಟಿ20 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ 4-3 ಅಂತರದಲ್ಲಿ ಜಯ ಗಳಿಸಿದೆ. ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದ ನಂತರ ಇಂಗ್ಲೆಂಡ್ ಭಾನುವಾರ ಸರಣಿ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 67 ರನ್‌ಗಳ ಜಯ ಸಾಧಿಸಿತು. ಪಂದ್ಯದ ನಂತರ ಇಂಗ್ಲೆಂಡ್ ತಂಡದ ಸ್ಟಾಂಡ್‌ ಇನ್ ನಾಯಕ ಮೊಯಿನ್ ಅಲಿ, ವಿಶ್ವಕಪ್ ಆಡುವ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.

ICC T20 Ranking: ನಂಬರ್ 1 ಸ್ಥಾನಕ್ಕೇರಲು ಸಿದ್ಧವಾದ ಸೂರ್ಯಕುಮಾರ್ ಯಾದವ್ICC T20 Ranking: ನಂಬರ್ 1 ಸ್ಥಾನಕ್ಕೇರಲು ಸಿದ್ಧವಾದ ಸೂರ್ಯಕುಮಾರ್ ಯಾದವ್

ಪಾಕಿಸ್ತಾನದಲ್ಲಿ ಸರಣಿ ಜಯಗಳಿಸಿದ ನಂತರ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲು ತಂಡಗಳು ಭಯಪಡುತ್ತವೆ ಎಂದು ಇಂಗ್ಲೆಂಡ್‌ನ ಮೊಯಿನ್ ಅಲಿ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಸರಣಿಯ ಕೊನೆಯ ಪಂದ್ಯ ಮುಕ್ತಾಯವಾದ ನಂತರ ಮಾತನಾಡಿದ ಮೊಯಿನ್ ಅಲಿ, "ನಾವು ಪಾಕಿಸ್ತಾನ ವಿರುದ್ಧ ಸರಣಿ ಜಯಿಸಿದ ವಿಶ್ವಾಸದಲ್ಲಿ ಆಸ್ಟ್ರೇಲಿಯಾಕ್ಕೆ ಹೋಗುತ್ತೇವೆ. ಇಂಗ್ಲೆಂಡ್ ಈ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ಮೆಚ್ಚಿನ ತಂಡ ಎಂದು ನಾನು ಭಾವಿಸುವುದಿಲ್ಲ. ಆದರೆ, ನಮ್ಮದು ತುಂಬಾ ಅಪಾಯಕಾರಿ ತಂಡ ಎಂದು ನನಗೆ ತಿಳಿದಿದೆ. ಇತರ ತಂಡಗಳು ನಮ್ಮ ವಿರುದ್ಧ ಆಡಲು ಭಯಪಡುತ್ತವೆ" ಎಂದು ಹೇಳಿದ್ದಾರೆ.

ಟೀಂ ಇಂಡಿಯಾ, ಆಸ್ಟ್ರೇಲಿಯಾ ನೆಚ್ಚಿನ ತಂಡಗಳು

ಟೀಂ ಇಂಡಿಯಾ, ಆಸ್ಟ್ರೇಲಿಯಾ ನೆಚ್ಚಿನ ತಂಡಗಳು

"ಪಾಕಿಸ್ತಾನದ ವಿರುದ್ಧದ ಸರಣಿಯನ್ನು ಗೆದ್ದಿರುವುದಕ್ಕೆ ನಮಗೆ ಸಂತೋಷವಾಗಿದೆ. ನಾವು ಗೆಲುವಿನ ವಿಶ್ವಾಸದಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದೇವೆ, ಆದರೂ, ಈ ಬಾರಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಕಪ್ ಗೆಲ್ಲುವ ಮೆಚ್ಚಿನ ತಂಡವಲ್ಲ" ಎಂದು ಮೊಯಿನ್ ಅಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

"ಈ ಬಾರಿ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತವು ಎರಡು ನೆಚ್ಚಿನ ತಂಡಗಳು ಎಂದು ನಾನು ಇನ್ನೂ ಭಾವಿಸುತ್ತೇನೆ ಎಂದು ಮೊಯಿನ್ ಅಲಿ ಹೇಳಿದ್ದಾರೆ. ನಾವು ಮೆಚ್ಚಿನ ತಂಡ ಅಲ್ಲದೇ ಇದ್ದರೂ ಕೂಡ ಅಪಾಯಕಾರಿ ತಂಡ ಎನ್ನುವುದು ಗೊತ್ತು," ಎಂದು ಹೇಳಿದ್ದಾರೆ.

360 ಡಿಗ್ರಿ ಹೋಗ್ಲಿ, 180 ಡಿಗ್ರಿ ಶಾಟ್ಸ್ ಆದ್ರೂ ಹೊಡೀರಿ: ಪಾಕ್ ತಂಡದ ವಿರುದ್ಧ ವಾಸಿಂ ಅಕ್ರಂ ಗರಂ

ಇನ್ನೂ ಉತ್ತಮ ಪ್ರದರ್ಶನ ನೀಡಬಹುದಿತ್ತು

ಇನ್ನೂ ಉತ್ತಮ ಪ್ರದರ್ಶನ ನೀಡಬಹುದಿತ್ತು

"4-3 ಅಂತರದಲ್ಲಿ ಸರಣಿಯನ್ನು ಗೆದ್ದರೂ ಕೂಡ ಮೊಯಿನ್ ಅಲಿ ಇಂಗ್ಲೆಂಡ್ ತಂಡದ ಪ್ರದರ್ಶನದ ಬಗ್ಗೆ ನಿರಾಶೆಗೊಂಡಿದ್ದಾರೆ. ನಾವು ಇನ್ನೂ ಉತ್ತಮವಾಗಿ ಆಡಿದ್ದರೆ ಬಹುಶಃ ಸರಣಿಯನ್ನು 6-1 ಅಂತರದಲ್ಲಿ ಗೆಲ್ಲುತ್ತಿದ್ದೆವು" ಎಂದು ಅವರು ಹೇಳಿದ್ದಾರೆ

ಸರಣಿಯ 4 ಮತ್ತು 5ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವಿನ ಸನಿಹ ಬಂದು ರೋಚಕವಾಗಿ ಸೋಲನುಭವಿಸಿತ್ತು. 4ನೇ ಟಿ20 ಪಂದ್ಯದಲ್ಲಿ 3 ರನ್ ಅಂತರದಲ್ಲಿ ಸೋತಿದ್ದ ಇಂಗ್ಲೆಂಡ್, 5ನೇ ಟಿ20 ಪಂದ್ಯದಲ್ಲಿ 6 ರನ್ ಅಂತರದಲ್ಲಿ ಸೋತಿತ್ತು.

ಇಂಗ್ಲೆಂಡ್ ತಂಡ ವಿಶ್ವಾಸ ಹೆಚ್ಚಿಸಿಕೊಂಡಿದೆ

ಇಂಗ್ಲೆಂಡ್ ತಂಡ ವಿಶ್ವಾಸ ಹೆಚ್ಚಿಸಿಕೊಂಡಿದೆ

ಇಂಗ್ಲೆಂಡ್ ತಂಡದ ಏಕದಿನ ಮತ್ತಿ ಟಿ20 ಮಾದರಿ ಕ್ರಿಕೆಟ್‌ ಮುಖ್ಯ ತರಬೇತುದಾರ ಮೊಟ್ ತಮ್ಮ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಇಂಗ್ಲೆಂಡ್ ಉತ್ತಮವಾಗಿ ಸಿದ್ಧವಾಗುತ್ತಿದೆ ಎಂದು ಹೇಳಿದ್ದಾರೆ.

"ನಿರ್ದಿಷ್ಟವಾಗಿ ಮೊಯಿನ್ ಅಲಿ ಅತ್ಯುತ್ತಮವಾಗಿ ನಾಯಕತ್ವ ವಹಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ವಿವಿಧ ಆಟಗಾರರಲ್ಲಿ ಬಹಳಷ್ಟು ನಂಬಿಕೆ ಇಟ್ಟಿದ್ದಾರೆ ಮತ್ತು ಕೆಲವು ಹೊಸ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ." ಎಂದು ಮೊಟ್ ಹೇಳಿದರು.

ವಿಶ್ವಕಪ್‌ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾ ವಿರುದ್ಧ ಸರಣಿ

ವಿಶ್ವಕಪ್‌ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾ ವಿರುದ್ಧ ಸರಣಿ

ಪಾಕಿಸ್ತಾನ ವಿರುದ್ಧದ ಸರಣಿ ವಶ ಪಡಿಸಿಕೊಂಡಿರುವ ಇಂಗ್ಲೆಂಡ್ ಟಿ20 ವಿಶ್ವಕಪ್‌ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಅಕ್ಟೋಬರ್ 9 ರಂದು ಸರಣಿಯ ಮೊದಲನೇ ಪಂದ್ಯ ನಡೆಯಲಿದ್ದು, ಅಕ್ಟೋಬರ್ 12 ರಂದು ಎರಡನೇ ಪಂದ್ಯ ನಡೆಯಲಿದೆ. ಸರಣಿಯ ಕೊನೆಯ ಪಂದ್ಯವನ್ನು ಅಕ್ಟೋಬರ್ 14 ರಂದು ಆಯೋಜಿಸಲಾಗಿದೆ.

ಅಕ್ಟೋಬರ್ 17ರಂದು ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಅಭ್ಯಾಸ ಪಂದ್ಯವನ್ನಾಡಲಿದೆ. ಅಕ್ಟೋಬರ್ 22ರಂದು ಪರ್ತ್‌ನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸುವ ಮೂಲಕ ಇಂಗ್ಲೆಂಡ್ ಟಿ20 ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Monday, October 3, 2022, 15:46 [IST]
Other articles published on Oct 3, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X