ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಜೊತೆಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಬಾಬರ್ ಅಝಾಮ್

We are different from each other: Babar Azam on comparisons with Kohli

ನವದೆಹಲಿ, ಮೇ 19: ಟೀಮ್ ಇಂಡಿಯಾ ನಾಯಕ, ರನ್ ಮೆಷೀನ್ ವಿರಾಟ್ ಕೊಹ್ಲಿಗೆ ತನ್ನನ್ನು ಹೋಲಿಸಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಝಾಮ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ವಿಭಿನ್ನ ಆಟಗಾರರು. ಒಬ್ಬರಿಗೆ ಒಬ್ಬರನ್ನು ಹೋಲಿಸೋದು ಸರಿಯಲ್ಲ ಎಂದು ಬಾಬರ್ ಹೇಳಿದ್ದಾರೆ.

ತನ್ನ ಬಯೋಪಿಕ್‌ನಲ್ಲಿ ನಟನೆಗೆ ಸಿದ್ಧ ಆದರೆ ಕಂಡಿಷನ್ ಅಪ್ಲೈ ಎಂದ ವಿರಾಟ್ ಕೊಹ್ಲಿತನ್ನ ಬಯೋಪಿಕ್‌ನಲ್ಲಿ ನಟನೆಗೆ ಸಿದ್ಧ ಆದರೆ ಕಂಡಿಷನ್ ಅಪ್ಲೈ ಎಂದ ವಿರಾಟ್ ಕೊಹ್ಲಿ

'ನೀವು ನಮ್ಮಿಬ್ಬರಿಗೆ ಹೋಲಿಗೆ ಮಾಡದಿದ್ದರೆ ಒಳ್ಳೆಯದು. ಯಾಕೆಂದರೆ ನಾನೀಗಾಗಲೇ ಹೇಳಿದ್ದೇನೆ, ವಿರಾಟ್ ಕೊಹ್ಲಿ ವಿಭಿನ್ನ ರೀತಿಯ ಆಟಗಾರ, ನಾನೂ ವಿಭಿನ್ನ ಆಟಗಾರ. ಇಬ್ಬರ ಮಧ್ಯೆ ಹೋಲಿಕೆ ಸರಿಯಲ್ಲ,' ಎಂದು ಸುದ್ದಿಗೋಷ್ಠಿಯಲ್ಲಿ ಬಾಬರ್ ಮಾತನಾಡಿದ್ದಾರೆ.

ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!

'ಮೈದಾನಕ್ಕೆ ಪ್ರವೇಶಿಸಿದ ಪ್ರತೀ ಸಾರಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿ ನನ್ನ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇನೆಯಷ್ಟೆ,' ಎಂದು ಬಾಬರ್ ಹೇಳಿದರು. 25ರ ಹರೆಯದ ಅಝಾಮ್ ಅದ್ಭುತ ಬ್ಯಾಟಿಂಗ್‌ಗಾಗಿ ಗಮನ ಸೆಳೆಯುತ್ತದ್ದಾರೆ. ಇತ್ತೀಚಿನ ವಿಶ್ವ ರ್ಯಾಂಕ್ ಪಟ್ಟಿಯಲ್ಲೂ ಬಾಬರ್ ಗಣನೀಯ ಜಿಗಿತ ಕಾಣುತ್ತಿದ್ದಾರೆ.

ಐಪಿಎಲ್‌ ಇತಿಹಾಸದ ಐಪಿಎಲ್‌ ಇತಿಹಾಸದ "ಚೂಸಿ" ಭಾರತೀಯ ಬೌಲರ್‌ಗಳು ಇವರು!

ಖಾಲಿ ಮೈದಾನದಲ್ಲಿ ಕ್ರಿಕೆಟ್‌ ಆಡುವ ಬಗ್ಗೆ ಪ್ರತಿಕ್ರಿಯಿಸಿದ ಬಾಬರ್, 'ಖಾಲಿ ಮೈದಾನದಲ್ಲಿ ಆಡುವಾಗ ಹೇಗೆ ಅನ್ನಿಸುತ್ತದೆ ಎಂದು ಬೇರೆಲ್ಲಾ ತಂಡಗಳಿಗಿಂತಲೂ ನಮಗೆ ಚೆನ್ನಾಗಿ ಗೊತ್ತಿದೆ. ಯಾಕೆಂದರೆ ಕಳೆದ 10 ವರ್ಷಗಳಿಂದಲೂ ದುಬೈ ಮೈದಾನಗಳಲ್ಲಿ ನಾವು ಭಾಗಶಃ ಖಾಲಿ ಮೈದಾನದಲ್ಲೇ ಆಡುತ್ತಿದ್ದೇವೆ. ಇದು ಅಭಿಮಾನಿಗಳಿಗಾಗಲಿ, ನಮಗಾಗಿ ಆಗಲಿ ದೊಡ್ಡ ಭಾವನಾತ್ಮಕ ವಿಚಾರ ಅನ್ನಿಸುತ್ತಿಲ್ಲ,' ಎಂದರು.

Story first published: Tuesday, May 19, 2020, 10:51 [IST]
Other articles published on May 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X